ಬ್ರೇಕಿಂಗ್ ನ್ಯೂಸ್
29-10-23 09:44 pm HK News Desk ದೇಶ - ವಿದೇಶ
ತಿರುವನಂತಪುರ, ಅ.29: ಮಲಪ್ಪುರಂ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ಯಾಲೆಸ್ತೀನ್ ಉಗ್ರ ಸಂಘಟನೆ ಹಮಾಸ್ ನಾಯಕ ಖಲೀದ್ ಮಾಶಾಲ್ ಎಂಬಾತ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಸಮಾವೇಶ ಉದ್ದೇಶಿಸಿ ಮಾತನಾಡಿದ್ದಾನೆ. ಸಾಲಿಡಾರಿಟಿ ಯೂತ್ ಮೂಮೆಂಟ್ ಮತ್ತು ಜಮಾತ್ ಇ- ಇಸ್ಲಾಂ ಯೂತ್ ಸಂಘಟನೆ ಈ ಸಮಾವೇಶವನ್ನು ಆಯೋಜಿಸಿತ್ತು.
ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಗುಪ್ತಚರ ಏಜನ್ಸಿಗಳು ಅಲರ್ಟ್ ಆಗಿದ್ದು, ಪ್ಯಾಲೆಸ್ತೀನ್ ಪರವಾದ ಪ್ರತಿಭಟನೆಗಳನ್ನು ಕೇಂದ್ರ ಸರಕಾರ ಗಂಭೀರ ಪರಿಗಣಿಸಿದೆ ಎಂದು ಹೇಳಿವೆ. ಹಮಾಸ್ ಭಾರತದಲ್ಲಿ ನಿಷೇಧ ಆಗಿರುವ ಸಂಘಟನೆಯಲ್ಲ. ಈವರೆಗೂ ಹಮಾಸ್ ಉಗ್ರರು ಭಾರತದ ವಿರುದ್ಧ ಹೇಳಿಕೆ ಕೊಟ್ಟದ್ದಿಲ್ಲ. ಹಾಗಿದ್ದರೂ, ಈ ರೀತಿಯ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾವೇನು ತಟಸ್ಥರಾಗಿ ಉಳಿದಿಲ್ಲ. ಅಗತ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗುಪ್ತಚರ ಏಜನ್ಸಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾಗಿ ವರದಿಯಾಗಿದೆ.
Hamas leader Khaled Mashel's virtual address at the Solidarity event in Malappuram is alarming. Where's @pinarayivijayan's Kerala Police ? Under the guise of 'Save Palestine,' they're glorifying Hamas, a terrorist organization, and its leaders as 'warriors.' This is… pic.twitter.com/51tWi88wTb
— K Surendran (@surendranbjp) October 27, 2023
ಕೇರಳ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಸುರೇಂದ್ರನ್ ಶನಿವಾರ ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಹಮಾಸ್ ಉಗ್ರರು ಭಾಷಣ ಮಾಡಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಹಮಾಸ್ ಉಗ್ರರು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಹಮಾಸ್ ಉಗ್ರರಿಗೆ ವೀಸಾ ಸಿಗದ ಕಾರಣ ನೇರ ಭಾಗಿಯಾಗಲು ಆಗಿರಲಿಲ್ಲ. ಈ ರೀತಿಯ ನಡೆಯನ್ನು ಕೇರಳ ಪೊಲೀಸರು ಮತ್ತು ಕೇಂದ್ರ ತನಿಖಾ ಏಜನ್ಸಿಗಳು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಸಾಲಿಡಾರಿಟಿ ಯೂತ್ ಮೂಮೆಂಟ್ ಸಂಘಟನೆಯ ರಾಜ್ಯಾಧ್ಯಕ್ಷ ಸುಹೈಬ್ ಪ್ರತಿಕ್ರಿಯೆ ನೀಡಿದ್ದು, ನಾವು ಪ್ಯಾಲೆಸ್ತೀನ್ ಪರವಾಗಿದ್ದೇವೆ ಮತ್ತು ಇಸ್ರೇಲ್ ದಾಳಿಯನ್ನು ಖಂಡಿಸಿ ನಡೆಸಿದ್ದ ಸಭೆಯಲ್ಲಿ ಹಮಾಸ್ ನಾಯಕರು ಪಾಲ್ಗೊಂಡಿದ್ದರು. ಇದೇನೂ ಅನಪೇಕ್ಷಿತ ಘಟನೆಯಲ್ಲ. ಹಮಾಸ್ ಭಾರತದ ಸಂಘಟನೆಯಲ್ಲ, ನಿಷೇಧಿತ ಸಂಘಟನೆಯೂ ಅಲ್ಲ. ಹಾಗಾಗಿ ಅವರ ಪಾಲ್ಗೊಳ್ಳುವಿಕೆ ಈ ನೆಲದ ಕಾನೂನಿನಲ್ಲಿ ಅಪರಾಧ ಆಗುವುದಿಲ್ಲ. ದೇಶದಲ್ಲಿ ಸೋದರತ್ವ ಸಾರುವ ಹಲವಾರು ಸಮಾವೇಶ ನಡೆದಿದ್ದು, ಎಲ್ಲದರಲ್ಲೂ ಪ್ಯಾಲೆಸ್ತೀನ್ ಜನರ ಪರವಾಗಿ ದನಿ ಎತ್ತಿದ್ದೇವೆ ಎಂದು ಹೇಳಿದ್ದಾರೆ.
ಹಮಾಸ್ ಉಗ್ರರು ಇಸ್ರೇಲ್ ಮೇಲೆ ಅ.7ರಂದು ವಾಯು ದಾಳಿ ನಡೆಸಿದ್ದು, ಅದರಿಂದ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅದಕ್ಕೆ ಪ್ರತಿಯಾಗಿ ಇಸ್ಲೇಲ್ ಹಮಾಸ್ ಉಗ್ರರು ಅಡಗಿರುವ ಪ್ಯಾಲೆಸ್ತೀನ್ ಗಡಿಭಾಗದ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸಿದ್ದು, ಧ್ವಂಸಗೊಳಿಸಿದೆ. ಇದನ್ನು ಖಂಡಿಸಿ ಭಾರತದಲ್ಲಿ ಮುಸ್ಲಿಂ ಸಂಘಟನೆಗಳು ಪ್ಯಾಲೆಸ್ತೀನ್ ಜನರ ಪರವಾಗಿ ಧ್ವನಿ ಎತ್ತಿವೆ. ಇಂದು ಎರ್ನಾಕುಲಂನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಇದೇ ಕಾರಣ ಎನ್ನುವ ರೀತಿ ಆರೋಪ ಕೇಳಿಬರುತ್ತಿದೆ.
Hamas leaders’ virtual presence in pro-Palestine rallies in India is a matter of concern, according to top intelligence sources. Former Hamas chief Khaled Meshaal on Friday virtually addressed a rally in support of Palestinians in Kerala’s Malappuram. Another Hamas leader Ismail Haniyeh could not join virtually. The Solidarity Youth Movement, the youth wing of Jamaat-e-Islami, had organised the event.
01-04-25 10:45 pm
HK News Desk
Karnataka diesel price hike: ಹಾಲು, ಟೋಲ್, ಕರೆಂ...
01-04-25 09:35 pm
ರಾಜ್ಯ ಸರ್ಕಾರದಿಂದ ಯುಗಾದಿಗೆ ಬೆಲೆ ಏರಿಕೆ ಕೊಡುಗೆ ;...
01-04-25 03:49 pm
Karnataka toll hike, Milk: ರಾಜ್ಯದ ಜನತೆಗೆ ಎಪ್ರ...
01-04-25 12:26 pm
ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ ಮೊಳೆ ಹೊಡೆ...
31-03-25 07:41 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
01-04-25 09:38 pm
Mangalore Correspondent
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
Belthangady Accident, Mangalore: ಯಕ್ಷಗಾನ ಮುಗಿ...
31-03-25 12:26 pm
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
01-04-25 11:07 pm
Mangalore Correspondent
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm
Mangalore Muda Commissioner, FIR, Noor Zahara...
31-03-25 09:29 pm
Mangalore Derlakatte Robbery attempt; ದೇರಳಕಟ್...
30-03-25 08:59 am