ಭಾರತದಲ್ಲಿ ದರೋಡೆ, ಡಕಾಯಿತಿ ಮತ್ತು ಅತ್ಯಾಚಾರದ ಅಪರಾಧಗಳಲ್ಲಿ ಮುಸ್ಲಿಮರೇ ನಂಬರ್ 1 ; ಜೈಲಿಗೆ ಹೋಗುವುದರಲ್ಲಿಯೂ ನಾವೇ ಟಾಪ್,  ಬದ್ರುದ್ದೀನ್ ಅಜ್ಮಲ್ ! 

28-10-23 05:26 pm       HK News Desk   ದೇಶ - ವಿದೇಶ

ದೇಶದ ಮುಸ್ಲಿಮರಲ್ಲಿ ಅಪರಾಧ ಪ್ರಮಾಣಗಳು ಹೆಚ್ಚಾಗುತ್ತಿದೆ ಎಂದು ಹೇಳುವ ಮೂಲಕ ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ನವದೆಹಲಿ, ಅ 28: ದೇಶದ ಮುಸ್ಲಿಮರಲ್ಲಿ ಅಪರಾಧ ಪ್ರಮಾಣಗಳು ಹೆಚ್ಚಾಗುತ್ತಿದೆ ಎಂದು ಹೇಳುವ ಮೂಲಕ ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ದೇಶದಲ್ಲಿ ಮುಸ್ಲಿಮರು ದರೋಡೆ, ಡಕಾಯಿತಿ, ಅತ್ಯಾಚಾರ, ಲೂಟಿಯಂಥ ಎಲ್ಲಾ ಅಪರಾಧಗಳಲ್ಲಿ ನಂಬರ್‌ 1 ಆಗಿದ್ದೇವೆ. ಜೈಲಿಗೆ ಹೋಗುವುದರಲ್ಲಿಯೂ ನಾವೇ ನಂಬರ್‌ 1 ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಯ ಕುರಿತಾಗಿ ಕೆಲವರಿಂದ ಭಾರೀ ಪ್ರಮಾಣದ ಟೀಕೆಗಳನ್ನು ಎದುರಿಸಿರುವ ಹೊರತಾಗಿಯೂ ಬದ್ರುದ್ದೀನ್‌ ಅಜ್ಮಲ್‌, ಮುಸ್ಲಿಮರಲ್ಲಿ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುವ ತಮ್ಮ ಹೇಳಿಕೆಯ ಬಗ್ಗೆ ಅಚಲವಾಗಿ ನಿಂತಿದ್ದಾರೆ.

ಶುಕ್ರವಾರ ಈ ಬಗ್ಗೆ ಮಾತನಾಡಿದ ಅವರು ನಾನು ಯಾವುದೇ ತಪ್ಪಾದ ಹೇಳಿಕೆಯನ್ನು ನೀಡಿಲ್ಲ. ಮುಸ್ಲಿಮರಲ್ಲಿ ಶಿಕ್ಷಣದ ಕೊರತಯೇ ನೇರವಾಗಿ ಇಂಥ ಅಪರಾಧ ಪ್ರಕರಣಗಳಲ್ಲಿ ನಮ್ಮವರ ಸಂಖ್ಯೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಸುಗಂಧ ದ್ರವ್ಯದ ಉದ್ದಿಮೆ ಹೊಂದಿರುವ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್‌,  ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ನಡುವೆ ತನ್ನ ಅಧಿಕಾರವನ್ನು ಹೊಂದಿದೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಎಐಯುಡಿಎಫ್ 15 ಶಾಸಕರನ್ನು ಹೊಂದಿದೆ.

ಮಹಿಳೆಯರನ್ನು, ಯುವತಿಯರನ್ನು ನೋಡಿದ ಬಳಿಕ ನಾವು ಲಂಗಿಕವಾಗಿ ಉತ್ಸುಕರಾಗುತ್ತೇವೆ ಎಂದು ಹೇಳುವ ಹುಡುಗರಿಗೆ ನಾನು ಒಂದೇ ಮಾತನ್ನು ಹೇಳಲು ಬಯಸುತ್ತೇನೆ. ಇಸ್ಲಾಂ ಧರ್ಮದಲ್ಲಿ ಸಾರ್ವಜನಿಕ ಸ್ಥಳಕ್ಕೆ ನಾವು ಹೋದಾಗ ಮಹಿಳೆಯರನ್ನು ಹಾಗೂ ಯುವತಿಯರನ್ನು ನೋಡಿದಾಗ ಸರಿಯಾದ ನಡವಳಿಕೆಯನ್ನು ಹೊಂದಿರಬೇಕು. ನಮ್ಮ ವರ್ತನೆ ಉತ್ತಮವಾಗಿರಬೇಕು. ನಿಮ್ಮ ಕುಟುಂಬದಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ನಿಮ್ಮ ತಾಯಿ ಹಾಗೂ ತಂಗಿಯರು ಇದ್ದಾರೆ ಎಂದು ನೆನಪಾದಾಗ ನಿಮಗೆ ಯಾವುದೇ ಕೆಟ್ಟ ಯೋಚನೆಗಳು ಬರಲು ಸಾಧ್ಯವಿಲ್ಲ ಎಂದು ಅಜ್ಮಲ್‌ ಹೇಳಿದ್ದಾರೆ.

The Chief of All India United Democratic Front (AIUDF), Badruddin Ajmal, has landed in the middle of a controversy following his recent remark that crime rates are quite high among Muslims.