ಬ್ರೇಕಿಂಗ್ ನ್ಯೂಸ್
12-11-20 05:02 pm Headline Karnataka News Network ದೇಶ - ವಿದೇಶ
ಪಾಟ್ನಾ, ನವೆಂಬರ್ 12: ಮುಖ್ಯಮಂತ್ರಿ ಯಾರೇ ಆಗಲಿ, ಈ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದು ನಾವೇ.. ಜನಾದೇಶ ಮಹಾಘಟಬಂಧನ್ ಪರವಾಗಿಯೇ ಬಂದಿದೆ. ಚುನಾವಣಾ ಆಯೋಗದ ಲೆಕ್ಕದಲ್ಲಿ ಮಾತ್ರ ಎನ್ ಡಿಎ ಗೆದ್ದಿರುವುದು..
ಬಿಹಾರ ವಿಧಾನಸಭೆ ಫಲಿತಾಂಶದ ಬಗ್ಗೆ ಹೀಗೆಂದು ವಿಶ್ಲೇಷಣೆ ಮಾಡಿರುವುದು ಆರ್ ಜೆಡಿ ಪಕ್ಷದ ಮುಖ್ಯಸ್ಥ ತೇಜಸ್ವಿ ಯಾದವ್. ಬಿಹಾರದಲ್ಲಿ ಆರ್ ಜೆಡಿ 75 ಸ್ಥಾನಗಳನ್ನು ಪಡೆದು ಅತಿ ಹೆಚ್ಚು ಸ್ಥಾನಗಳೊಂದಿಗೆ ರಾಜ್ಯದ್ಲಲಿ ದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಆದರೆ, ಕಾಂಗ್ರೆಸಿನ ಹೀನಾಯ ಸೋಲು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮುಖ್ಯಮಂತ್ರಿ ಗಾದಿಯನ್ನು ದೂರ ಮಾಡುವಂತಾಗಿದ್ದು ಈ ಹಿನ್ನೆಲೆಯಲ್ಲಿ ತೇಜಸ್ವಿ ಅಸಮಾಧಾನ ಹೊರಹಾಕಿದ್ದಾರೆ.
ಇಂಥ ಫಲಿತಾಂಶ ಬಂದಿರುವುದು ಇದು ಮೊದಲೇನಲ್ಲ. ಈ ಹಿಂದೆ 2015ರ ಚುನಾವಣೆಯಲ್ಲು ಆರ್ ಜೆಡಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿ ಮಾತ್ರ ಹಿಂಬಾಗಿಲ ಮೂಲಕ ಅಧಿಕಾರ ಪಡೆದಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ, ಕೆಲವು ಕ್ಷೇತ್ರಗಳಲ್ಲಿ ಚುನಾವಣಾ ಅಧಿಕಾರಿಗಳು ಒತ್ತಡಕ್ಕೊಳಗಾಗಿ ಫಲಿತಾಂಶವನ್ನು ತಿರುಚಿದ್ದಾರೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದು, ಈ ಕ್ಷೇತ್ರಗಳಲ್ಲಿ ಮರು ಎಣಿಕೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ಅಧಿಕಾರ ಹಿಡಿಯಲು ಪ್ರಯತ್ನಿಸುತ್ತೇನೆ
ಇದಲ್ಲದೆ, ರಾಜ್ಯದಲ್ಲಿ ಆರ್ ಜೆಡಿ ಅಧಿಕಾರದ ಗಾದಿ ಹಿಡಿಯಲಿದೆ. ಅದಕ್ಕಾಗಿ ಪ್ರಯತ್ನ ಮಾಡುತ್ತೇನೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ಪಕ್ಷದಲ್ಲಿ ಗೆದ್ದ ಶಾಸಕರು ಯಾರು ಕೂಡ ತಮ್ಮ ಕ್ಷೇತ್ರಗಳಿಗೆ ಮರಳುವುದು ಬೇಡ. ಕನಿಷ್ಠ ಒಂದು ತಿಂಗಳ ವರೆಗೆ ಪಾಟ್ನಾದಲ್ಲೇ ಇರಿ. ಜೆಡಿಯು ಕಡಿಮೆ ಸ್ಥಾನಗಳನ್ನು ಪಡೆದಿದ್ದು, ಬಿಜೆಪಿ ಜೊತೆ ಸೇರುವ ಬಯಕೆ ಹೊಂದಿಲ್ಲ. ನಾವು ಜೆಡಿಯು ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದೇನೆ. ಹಾಗೆಯೇ ಎಚ್ಎಎಂ ಮತ್ತು ವಿಐಪಿ ಪಕ್ಷಗಳ ನಾಯಕರು ಕೂಡ ಸಂಪರ್ಕದಲ್ಲಿದ್ದಾರೆ ಎಂದು ತೇಜಸ್ವಿ ಹೇಳಿದ್ದಾರೆ.
RJD's Tejashwi Yadav was on Thursday elected the leader of the Grand Alliance legislature party and promptly hit out at the NDA, claiming it won the assembly elections through "deceit".
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm