"ವಾಘ್ ಬಕ್ರಿ ಟೀ" ಕಂಪನಿಯ ಡೈರೆಕ್ಟರ್ ಮೇಲೆ ಬೀದಿ ನಾಯಿಗಳ ದಾಳಿ ; 2 ಸಾವಿರ ಕೋಟಿ ರೂ. ಒಡೆಯ ಬಲಿ 

23-10-23 06:49 pm       HK News Desk   ದೇಶ - ವಿದೇಶ

ವಾಘ್ ಬಕ್ರಿ ಟೀ ಗ್ರೂಪ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅಕ್ಟೋಬರ್ 22ರಂದು ಅಹ್ಮದಾಬಾದ್​ನಲ್ಲಿ ಮೃತಪಟ್ಟಿದ್ದಾರೆ.

ಅಹಮದಾಬಾದ್, ಅ 23: ವಾಘ್ ಬಕ್ರಿ ಟೀ ಗ್ರೂಪ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅಕ್ಟೋಬರ್ 22ರಂದು ಅಹ್ಮದಾಬಾದ್​ನಲ್ಲಿ ಮೃತಪಟ್ಟಿದ್ದಾರೆ.

ವಾಘ್ ಬಕ್ರೀ ಟೀ ಗ್ರೂಪ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅವರು ಸಾವನ್ನಪ್ಪಿದ್ದಾರೆ. ತಮ್ಮ ಮನೆ ಬಳಿ ನಿಂತಿದ್ದಾಗ ಪರಾಗ್ ದೇಸಾಯಿ ಅವರು ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದರು. ಬೀದಿ ನಾಯಿಗಳು ದಾಳಿ ಮಾಡಿದಾಗ ಪರಾಗ್‌ ದೇಸಾಯಿ ಅವರು ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಬ್ರೈನ್ ಹೆಮರೇಜ್‌ನಿಂದ 49 ವರ್ಷದ ಪರಾಗ್ ದೇಸಾಯಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಪರಾಗ್ ದೇಸಾಯಿ ಅವರು ಕಳೆದ ಅಕ್ಟೋಬರ್ 15ರಂದು ಮನೆ ಬಳಿ ನಿಂತಿದ್ದಾಗ ಬೀದಿ ನಾಯಿಗಳು ದಾಳಿ ಮಾಡಿದ್ದವು. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಈ ದಾಳಿಯನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪರಾಗ್ ದೇಸಾಯಿ ಅವರನ್ನು ಸ್ಥಳೀಯ ಶೆಲ್ಬಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಬೀದಿ ನಾಯಿಯ ದಾಳಿಯಲ್ಲೂ ಹಲವು ಗಂಭೀರ ಗಾಯಗಳಾಗಿದ್ದು, ಬ್ರೇನ್ ಹೆಮರೇಜ್‌ಗೆ ತುತ್ತಾಗಿದ್ದರು. ಶೆಲ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ದೇಸಾಯಿ ಅವರನ್ನು ಝೈಡಸ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಬ್ರೇನ್ ಹೆಮರೇಜ್‌ನಿಂದ ಉದ್ಯಮಿ ಪರಾಗ್ ದೇಸಾಯಿ ಅವರು ಗುಣಮುಖರಾಗದೆ ಸಾವನ್ನಪ್ಪಿದ್ದಾರೆ.

ಪರಾಗ್ ದೇಸಾಯಿ ಅವರು 2 ಸಾವಿರ ಕೋಟಿ ರೂಪಾಯಿ ವಹಿವಾಟಿನ ವಾಘ್ ಬಕ್ರೀ ಟೀ ಗ್ರೂಪ್‌ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು. ಗುಜರಾತ್‌ನಲ್ಲಿ ವಾಘ್ ಬಕ್ರೀ ಟೀ ಗ್ರೂಪ್‌ ಅನ್ನೋ ಬ್ರಾಂಡ್ ಹಾಗೂ ಕಂಪನಿಯನ್ನು ಕಟ್ಟಿ ಬೆಳೆಸಿದವರಲ್ಲಿ ಪರಾಗ್ ಅವರು ಪ್ರಮುಖರು. ಪರಾಗ್ ದೇಸಾಯಿ ಅವರ ಸಾವು ಎಲ್ಲರಿಗೂ ದಿಗ್ಭ್ರಮೆ ಮೂಡಿಸಿದೆ.

Ahmedabad-based Parag Desai (49) Executive Director of Wagh Bakri Tea Group, succumbed to head injuries he had sustained after he fell down while trying to escape an attack by street dogs during his morning walk near his residence in Ambali Road area in the heart of the city.