ಬ್ರೇಕಿಂಗ್ ನ್ಯೂಸ್
08-10-23 10:25 pm HK News Desk ದೇಶ - ವಿದೇಶ
ಮುಂಬೈ, ಅ.8: ಈಗೇನಿದ್ದರೂ ಸೋಶಿಯಲ್ ಮೀಡಿಯಾ ಜಮಾನ. ಹಣ ಗಳಿಸುವುದಕ್ಕೂ, ಹಣ ಕಳಕೊಳ್ಳುವುದಕ್ಕೂ ಮೊಬೈಲಿನಲ್ಲೇ ಅವಕಾಶ, ಸಾಧ್ಯತೆಗಳು ಬಹಳಷ್ಟು. ಇದನ್ನೇ ಬಳಸ್ಕೊಂಡ ಛತ್ತೀಸ್ಗಢ ಮೂಲದ ಖತರ್ನಾಕ್ ಗೆಳೆಯರು ನಾಲ್ಕು ದೇಶಗಳಲ್ಲಿ ನೆಟ್ವರ್ಕ್ ಸಾಧಿಸಿದ್ದಲ್ಲದೆ, ಅಕ್ರಮವಾಗಿ ಬೆಟ್ಟಿಂಗ್ ಏಪ್ ಮಾಡಿಕೊಂಡು ಸಾವಿರಾರು ಕೋಟಿ ವಂಚನೆ ಮಾಡಿದ್ದಾರೆ. ಮಹದೇವ್ ಬೆಟ್ಟಿಂಗ್ ಏಪ್ ಹೆಸರಲ್ಲಿ ಅಕ್ರಮ ವಹಿವಾಟು ನಡೆಸಿದ್ದು, ಪ್ರಕರಣ ಹೊರಬರುತ್ತಿದ್ದಂತೆ ಮುಂಬೈನಲ್ಲಿ ಬಾಲಿವುಡ್ ನಟನಾ ಮಣಿಯರೇ ತಗ್ಲಾಕ್ಕೊಂಡಿದ್ದಾರೆ. ಪ್ರಕರಣ ಸಂಬಂಧಿಸಿ, ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 417 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ತು, ಚಿನ್ನಾಭರಣ, ನಗದು ಹಣವನ್ನು ದೇಶಾದ್ಯಂತ ವಶಕ್ಕೆ ಪಡೆಯಲಾಗಿದೆ.
ಸದ್ಯಕ್ಕೆ ಮಹದೇವ್ ಬೆಟ್ಟಿಂಗ್ ಏಪ್ ಕಂಪನಿಯ ಇಬ್ಬರು ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರು ಪ್ರಮುಖರನ್ನು ತನಿಖಾ ಅಧಿಕಾರಿಗಳು ಬಂಧಿಸಿದ್ದಾರೆ. ಇಷ್ಟಕ್ಕೂ ಈ ವಂಚನೆ ಪ್ರಕರಣ ಹೊರಬಿದ್ದಿದ್ದೇ ದುಬೈನಲ್ಲಿ ಕಳೆದ ಫೆಬ್ರವರಿಯಲ್ಲಿ ಕಂಪನಿಯ ಒಬ್ಬ ಪ್ರಮೋಟರ್ ಆಗಿರುವ ಸೌರಭ್ ಚಂದ್ರಾಕರ್ ಅನ್ನುವಾತನ ಅದ್ದೂರಿ ಮದುವೆ ಕಾರ್ಯಕ್ರಮ. ಇದರಲ್ಲಿ ಬಾಲಿವುಡ್ಡಿನ 20ಕ್ಕೂ ಹೆಚ್ಚು ನಟ- ನಟಿಯರು ಪಾಲ್ಗೊಂಡಿದ್ದು ಇವರಿಗೆಲ್ಲ ಕಪ್ಪು ಹಣದಲ್ಲಿಯೇ ಕೋಟ್ಯಂತರ ಪೇಮೆಂಟ್ ನೀಡಲಾಗಿತ್ತು. ಅಷ್ಟೇ ಅಲ್ಲ, ಒಟ್ಟು ಕಾರ್ಯಕ್ರಮಕ್ಕೆ ಖರ್ಚಾದ 200 ಕೋಟಿ ರೂಪಾಯಿ ಹಣವನ್ನು ಹವಾಲಾ ರೂಪದಲ್ಲಿಯೇ ನೀಡಿದ್ದರಂತೆ. ಒಂದು ಮೊಬೈಲ್ ಏಪ್ ಇಟ್ಟುಕೊಂಡು ನಾಲ್ಕು ದೇಶಗಳಲ್ಲಿ ವಿದ್ಯಾವಂತ ಗ್ರಾಹಕರನ್ನು ಅಕ್ರಮ ಬೆಟ್ಟಿಂಗ್ ಹೆಸರಲ್ಲಿ ಸುಲಿಗೆ ಮಾಡಿದ್ದ ಪ್ರಕರಣ ತನಿಖಾ ತಂಡವನ್ನೇ ಬೆಚ್ಚಿಬೀಳುವಂತೆ ಮಾಡಿದೆ.
ದುಬೈನಲ್ಲಿ ಕುಳಿತೇ ಆಪರೇಟ್, ಕೋಟಿ ಕೋಟಿ ಲೂಟಿ
ಮಹದೇವ್ ಬೆಟ್ಟಿಂಗ್ ಏಪ್ ಹಿಂದಿನ ಸೂತ್ರಧಾರರಾಗಿದ್ದವರು ಛತ್ತೀಸ್ಗಢ ಮೂಲದ ಸೌರಭ್ ಚಂದ್ರಾಕರ್ ಮತ್ತು ರವಿ ಉಪ್ಪಾಲ್. ಇವರಿಬ್ಬರು ದುಬೈನಲ್ಲಿ ಕುಳಿತುಕೊಂಡೇ ಒಟ್ಟು ಕಂಪನಿಯನ್ನು ಆಪರೇಟ್ ಮಾಡುತ್ತಿದ್ದರು. ಇಬ್ಬರು ಕೂಡ ಮೂಲತಃ ಛತ್ತೀಸ್ಗಢ ರಾಜ್ಯದ ಭಿಲಾಯಿ ಜಿಲ್ಲೆಯ ನಿವಾಸಿಗಳು. ಬೆಟ್ಟಿಂಗ್ ಏಪ್ ಬಗ್ಗೆ ಗ್ರಾಹಕರನ್ನು ಆಕರ್ಷಿಸಲು ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ನೀಡುತ್ತಿದ್ದರು. ಅಲ್ಲದೆ, ನೇರವಾಗಿ ಮೊಬೈಲಿಗೆ ಮೆಸೇಜ್ ಗಳನ್ನು ಕಳಿಸಿಕೊಡುತ್ತಿದ್ದರು. ಪ್ರತಿಕ್ರಿಯೆ ಕೊಡುವ ಗ್ರಾಹಕರಿಗೆ ವಾಟ್ಸಪ್ ನಲ್ಲಿಯೇ ಮೆಸೇಜ್ ಮಾಡಿ ಕನೆಕ್ಟ್ ಆಗುತ್ತಿದ್ದರು. ಇದಕ್ಕಾಗಿಯೇ ಇವರು ನಾಲ್ಕು ದೇಶಗಳಲ್ಲಿ ನೂರಕ್ಕೂ ಹೆಚ್ಚು ಕಾಲ್ ಸೆಂಟರ್ ಗಳನ್ನು ಇಟ್ಟುಕೊಂಡಿದ್ದರು. ಇದಲ್ಲದೆ, ಮಹದೇವ್ ಕಸ್ಟಮರ್ ಕೇರ್ ಅಂತಲೇ ನೂರಾರು ಮಂದಿಯನ್ನು ಉದ್ಯೋಗಕ್ಕೆ ಇಟ್ಟುಕೊಂಡಿದ್ದರು.
ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಗಳೇ ಗ್ರಾಹಕರನ್ನು ಸಂಪರ್ಕಿಸಿ, ಹೊಸತಾಗಿ ಐಡಿ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದರು. ಪ್ರತಿ ಬಾರಿ ಹೊಸತಾಗಿ ವೆಬ್ ಸೈಟ್ ರಚಿಸುವುದು, ಗ್ರಾಹಕರನ್ನು ಸಂಪಾದಿಸುವುದು ಇವರ ಗುರಿಯಾಗಿತ್ತು. ಗ್ರಾಹಕರು ಎರಡು ನಂಬರ್ ಗಳನ್ನು ನೀಡುತ್ತಿದ್ದು, ಒಂದರಲ್ಲಿ ಹಣ ಡಿಪಾಸಿಟ್ ಮಾಡುವುದು ಮತ್ತು ಬೆಟ್ ಬಗ್ಗೆ ತಿಳಿಸುವುದು. ಇನ್ನೊಂದು ನಂಬರಲ್ಲಿ ಕಸ್ಟಮರ್ ಕೇರ್ ಜೊತೆಗೆ ಸಂಪರ್ಕದಲ್ಲಿರುವುದಕ್ಕೆ ಅವಕಾಶ ನೀಡುತ್ತಿದ್ದರು. ಹಣ ಡಿಪಾಸಿಟ್ ಮಾಡಲು ನೀಡುತ್ತಿದ್ದ ಎಲ್ಲ ಖಾತೆಗಳೂ ಬೇನಾಮಿಯಾಗಿದ್ದು, ನಕಲಿ ದಾಖಲೆಗಳಲ್ಲಿ ಮಾಡಿಕೊಂಡಿದ್ದ ಬೇರೆ ಬೇರೆ ಖಾತೆಗಳನ್ನು ನೀಡುತ್ತಿದ್ದರು. ಮಹದೇವ್ ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಂಡರೆ ಯಾವುದೇ ಕಾರಣಕ್ಕೂ ಹಣ ನಷ್ಟ ಆಗುವುದಿಲ್ಲ. ಹೂಡಿಕೆ ಮಾಡಿದ ಹಣವಂತೂ ಮರಳಿ ಸಿಗುತ್ತದೆ ಎಂದು ಹೇಳಿ ನಂಬಿಸುತ್ತಿದ್ದರು. ಅಲ್ಲದೆ, ಆರಂಭದಲ್ಲಿ ಸಣ್ಣ ಮೊತ್ತದ ಲಾಭಾಂಶವನ್ನೂ ನೀಡುತ್ತಿದ್ದರು.
ಮಹದೇವ್ ಪರವಾಗಿ ಮಲೇಶ್ಯಾ, ಥಾಯ್ಲೆಂಡ್, ಭಾರತ ಮತ್ತು ದುಬೈನಲ್ಲಿ ನೂರಕ್ಕೂ ಹೆಚ್ಚು ಕಾಲ್ ಸೆಂಟರ್ ಗಳಿದ್ದವು. ದಿನದ 24 ಗಂಟೆಯೂ ತೆರೆದಿಟ್ಟು ಗ್ರಾಹಕರನ್ನು ಸಂಪರ್ಕ ಮಾಡುತ್ತಿದ್ದರು. ಗ್ರಾಹಕರನ್ನು ಐಡಿ ಮಾಡಿಕೊಳ್ಳಲು ನಕಲಿ ವೆಬ್ ಸೈಟ್ ಗಳನ್ನೂ ಎಕ್ಸಿಕ್ಯೂಟಿವ್ ಗಳೇ ತೆರೆಯುತ್ತಿದ್ದರು. ಇಡಿ ಅಧಿಕಾರಿಗಳ ತನಿಖೆಯಲ್ಲಿ ದಿನ ಒಂದರಲ್ಲಿ ಮಹದೇವ್ ಬೆಟ್ಟಿಂಗ್ ಏಪ್ ಮೂಲಕ ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ. ಅಲ್ಲದೆ, ಸುಮಾರು 200 ಕೋಟಿಗೂ ಹೆಚ್ಚು ಮೊತ್ತವನ್ನು ಒಂದೇ ದಿನದಲ್ಲಿ ಕಂಪನಿ ಲಾಭ ಮಾಡಿಕೊಳ್ಳುತ್ತಿತ್ತು.
ದಮ್ಮಾನಿ ಸೋದರರಿಂದ ಕಂಪನಿ ಉಸ್ತುವಾರಿ
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಪ್ರಧಾನ ಕಚೇರಿಯೆಂದು ಮಹದೇವ್ ಬೆಟ್ಟಿಂಗ್ ಏಪ್ ತೋರಿಸಿಕೊಂಡಿತ್ತು. ಪ್ರತಿ ಶಾಖೆಯಲ್ಲಿ 70-30 ಲಾಭಾಂಶ ಬರುತ್ತಿರುವ ಬಗ್ಗೆ ಹೇಳಿಕೊಂಡಿತ್ತು. ಭಾರತ ಒಂದರಲ್ಲೇ 30 ಕಾಲ್ ಸೆಂಟರ್ ಗಳಿದ್ದವು. ಕಂಪನಿ ಸಿಇಓ ಸೌರಭ್ ಚಂದ್ರಾಕರ್ ದೋಸ್ತ್ ಆಗಿದ್ದ ಅನಿಲ್ ದಮ್ಮಾನಿ, ಸುನಿಲ್ ದಮ್ಮಾನಿ ಎಂಬಿಬ್ಬರು ಸೋದರರು ಭಾರತದಲ್ಲಿ ಒಟ್ಟು ಕಂಪನಿಯ ಉಸ್ತುವಾರಿ ನೋಡಿಕೊಂಡಿದ್ದರು. ದೊಡ್ಡ ಮಟ್ಟದಲ್ಲಿ ಹವಾಲಾ ಹಣ ಸಂಗ್ರಹಿಸುತ್ತಿದ್ದ ಇವರು ಅದನ್ನು ನೇರವಾಗಿ ದುಬೈಗೆ ರವಾನೆ ಮಾಡುತ್ತಿದ್ದರು. ಈ ಏಪ್ ಯಾವುದೇ ತೊಂದರೆ ಇಲ್ಲದೆ ನಡೆಯುವಂತಾಗಲು ಪೊಲೀಸರು, ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗಕ್ಕೂ ಹವಾಲಾ ರೂಪದಲ್ಲಿ ಲಂಚ ನೀಡುತ್ತಿದ್ದರು. ಇದೇ ಕಾರಣದಿಂದ ಮಹದೇವ್ ಬೆಟ್ಟಿಂಗ್ ಏಪ್ ವಂಚನೆ ಪ್ರಮುಖ ತನಿಖಾ ತಂಡಗಳ ಗಮನಕ್ಕೆ ಬರದಂತೆ ಸದ್ದಿಲ್ಲದೆ ನಡೆಯುವಂತಾಗಿತ್ತು. ಕಳೆದ ಎರಡು ವರ್ಷದಲ್ಲಿ 60ರಿಂದ 65 ಕೋಟಿಯಷ್ಟು ಮೊತ್ತವನ್ನು ದಮ್ಮಾನಿ ಸೋದರರು ಅಕ್ರಮವಾಗಿ ಆಯಕಟ್ಟಿನ ಜಾಗಗಳಿಗೆ ಮುಟ್ಟಿಸಿದ್ದರಂತೆ. ಸದ್ಯಕ್ಕೆ ದಮ್ಮಾನಿ ಸೋದರರು ಭಾರತದಲ್ಲಿ ಇಡಿ ಬಲೆಗೆ ಬಿದ್ದಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.
ಬಾಲಿವುಟ್ ನಟನಾ ಮಣಿಯರ ಕನೆಕ್ಷನ್
ಬಾಲಿವುಡ್ ನಟ ರಣಬೀರ್ ಕಪೂರ್, ನಟಿ ಶ್ರದ್ಧಾ ಕಪೂರ್ ಮಹದೇವ್ ಬೆಟ್ಟಿಂಗ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಸೌರಭ್ ಚಂದ್ರಾಕರ್ ಮದುವೆ ಸಮಾರಂಭದಲ್ಲಿ ರಣಬೀರ್, ಶ್ರದ್ಧಾ ಕಪೂರ್, ಕಪಿಲ್ ಶರ್ಮಾ, ಹೀನಾ ಖಾನ್, ಸನ್ನಿ ಲಿಯೋನ್, ಟೈಗರ್ ಶ್ರಾಫ್ ಸೇರಿದಂತೆ ಹಲವಾರು ಖ್ಯಾತನಾಮ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಇವರಿಗೆಲ್ಲ ಹವಾಲಾ ರೂಪದಲ್ಲಿಯೇ ಹಣ ನೀಡಲಾಗಿತ್ತು ಎನ್ನುವುದನ್ನು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದು, ಈಗ ತನಿಖೆಗೆ ಬರುವಂತೆ ಸೂಚನೆ ನೀಡಿದ್ದಾರೆ. 17 ಮಂದಿ ಬಾಲಿವುಡ್ ಗಣ್ಯರನ್ನು ಚಾರ್ಟರ್ಡ್ ವಿಮಾನದಲ್ಲಿಯೇ ದುಬೈಗೆ ಕರೆಸಿಕೊಂಡಿದ್ದರು ಅನ್ನೋದನ್ನು ಪತ್ತೆ ಮಾಡಲಾಗಿದೆ. ಬಾಲಿವುಡ್ ಮಂದಿಗೆ ಮಹದೇವ್ ಏಪ್ ಕಂಪನಿ ಜೊತೆಗೆ ಯಾವ ರೀತಿಯ ಕನೆಕ್ಷನ್ ಇದೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಪಾಕಿಸ್ತಾನದಲ್ಲೂ ಬೆಟ್ಟಿಂಗ್ ಏಪ್ ಲಾಂಚ್
ದುಬೈನ ರಾಸ್ ಅಲ್- ಖೈಮಾದಲ್ಲಿ ನಡೆದಿದ್ದ ಅದ್ದೂರಿ ಮದುವೆ ಕಾರ್ಯಕ್ರಮ ಭಾರತದ ತನಿಖಾ ತಂಡಗಳ ಗಮನಕ್ಕೆ ಬಂದಿತ್ತು. ಇದರಂತೆ, ನಿಗೂಢವಾಗಿಯೇ ನಡೆಯುತ್ತಿದ್ದ ಬೆಟ್ಟಿಂಗ್ ಏಪ್ ಹಿಂದೆ ಬಿದ್ದ ಅಧಿಕಾರಿಗಳು ನಾಲ್ಕು ದೇಶಗಳಲ್ಲಿ ಹರಡಿಕೊಂಡಿದ್ದ ಅಕ್ರಮವನ್ನು ಪತ್ತೆ ಮಾಡಿದ್ದಾರೆ. ಕೊಲ್ಕತ್ತಾ, ಮುಂಬೈ, ದೆಹಲಿ, ಭೋಪಾಲ್, ರಾಯ್ಪುರ ಸೇರಿದಂತೆ 39 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, 417 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. ಹಲವು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದಾರೆ. ಮಹದೇವ್ ಕಂಪನಿಯವರು ಇದೇ ರೀತಿಯ ನಾಲ್ಕು ಏಪ್ ಗಳನ್ನು ಭಾರತದಲ್ಲಿ ಆಪರೇಟ್ ಮಾಡುತ್ತಿದ್ದು, ಪಾಕಿಸ್ತಾನದಲ್ಲಿಯೂ ಇಂಥಹದ್ದೇ ಏಪ್ ಲಾಂಚ್ ಮಾಡಿದ್ದಾರೆ. ದುಬೈ, ನೇಪಾಳ, ಶ್ರೀಲಂಕಾದಲ್ಲಿ ಕುಳಿತ ಕಾಲ್ ಸೆಂಟರ್ ಉದ್ಯೋಗಿಗಳು ಇದನ್ನು ಆಪರೇಟ್ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತನಿಖಾ ತಂಡಗಳಿಗೆ ಸಿಕ್ಕಿದೆ.
The Enforcement Directorate (ED), probing the Mahadev Online Book (MOB) money laundering case, has identified more than 30 Bollywood celebrities, including several top personalities, who had attended the two programmes of the companies promoters in United Arab Emirates (UAE) in September last year and in February this year.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm