Israel-Palestine War: ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ರಕ್ಕಸ 5 ಸಾವಿರ ರಾಕೆಟ್‌ ದಾಳಿಗೆ ದಕ್ಷಿಣ ಇಸ್ರೇಲ್‌ ಅಕ್ಷರಶಃ ರಣಾಂಗಣ ; ಪ್ಯಾರಾಚೂಟ್‌, ಬೈಕ್, ಜೆಸಿಬಿ ಮೂಲಕ ನುಗ್ಗಿದ ಉಗ್ರರು, 500ಕ್ಕೂ ಹೆಚ್ಚು ಜನರ ಮಾರಣಹೋಮ ! 

08-10-23 12:07 pm       HK News Desk   ದೇಶ - ವಿದೇಶ

ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ರಕ್ಕಸ ರಾಕೆಟ್‌ ದಾಳಿಗೆ ದಕ್ಷಿಣ ಇಸ್ರೇಲ್‌ ಅಕ್ಷರಶಃ ರಣಾಂಗಣವಾಗಿದೆ. ಭಾನುವಾರ ಬೆಳಿಗ್ಗೆ ವೇಳೆಗೆ ಇಸ್ರೇಲ್‌ - ಹಮಾಸ್‌ ನಡುವೆ 500ಕ್ಕೂ ಹೆಚ್ಚು ಜನ ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿದೆ.

ಜೆರುಸಲೇಮ್‌, ಅ.8: ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ರಕ್ಕಸ ರಾಕೆಟ್‌ ದಾಳಿಗೆ ದಕ್ಷಿಣ ಇಸ್ರೇಲ್‌ ಅಕ್ಷರಶಃ ರಣಾಂಗಣವಾಗಿದೆ. ಭಾನುವಾರ ಬೆಳಿಗ್ಗೆ ವೇಳೆಗೆ ಇಸ್ರೇಲ್‌ - ಹಮಾಸ್‌ ನಡುವೆ 500ಕ್ಕೂ ಹೆಚ್ಚು ಜನ ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿದೆ.

ರಾಕೆಟ್‌ ದಾಳಿಯ ಬೆನ್ನಿಗೇ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನೇತೃತ್ವದ ಇಸ್ರೇಲ್‌ ಸರಕಾರ, ಪ್ಯಾಲೆಸ್ತೀನ್‌ ಮೇಲೆ ಯುದ್ಧ ಸಾರಿದೆ. ಯುದ್ಧದಿಂದ ಹಲವು ಕಟ್ಟಡಗಳು ಹಾನಿಗೀಡಾಗಿವೆ. ವಾಹನಗಳು ಹೊತ್ತು ಉರಿದಿವೆ. ಸುತ್ತಲೂ ಶತ್ರು ರಾಷ್ಟ್ರಗಳನ್ನು ಹೊಂದಿದ್ದರೂ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ದಶಕಗಳಿಂದ ಕೆಚ್ಚೆದೆಯ ಹೋರಾಟ ನಡೆಸುತ್ತಲೇ ಬಂದಿರುವ ಇಸ್ರೇಲ್‌, ಹಮಾಸ್‌ ಬಂಡುಕೋರರ ಅಟ್ಟಹಾಸ ಮಟ್ಟಹಾಕುವ ಶಪಥ ಮಾಡಿದೆ.

27 pilgrims from Meghalaya stuck in Jerusalem: CM - Rediff.com

27 Meghalaya citizens stranded in Bethlehem amidst Israel-Palestine conflict

ದಕ್ಷಿಣ ಇಸ್ರೇಲ್ನ ಕೆಲವು ಭಾಗಗಳಲ್ಲಿ ಸೇನೆಯು ಹಮಾಸ್ನೊಂದಿಗೆ ಇನ್ನೂ ಹೋರಾಟದಲ್ಲಿ ತೊಡಗಿದೆ. ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ. ಇಸ್ರೇಲ್ನಲ್ಲಿ ಭಾನುವಾರ ಶಾಲೆಗಳಿಗೆ ರಜೆ ಇರುವುದಿಲ್ಲ ಆದರೆ ಈ ಭಾನುವಾರ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ. 

ಹಮಾಸ್‌ ಉಗ್ರರ ಪಡೆ ನಮ್ಮ ಮುಗ್ದ ನಾಗರಿಕರ ಮೇಲೆ ದಾಳಿ ನಡೆಸಿ ಮಹಾ ಪ್ರಮಾದ ಎಸಗಿದೆ. ರಕ್ತ ಹರಿಸಿದ ಉಗ್ರರನ್ನು ಭೇಟೆಯಾಡದೇ ಬಿಡುವುದಿಲ್ಲ. ನಮ್ಮದು ಕೇವಲ ಆಪರೇಷನ್‌ ಅಲ್ಲ. ಪ್ರತೀಕಾರದ ಯುದ್ಧವಾಗಲಿದೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಿಯೇ ಸಿದ್ಧ,'' ಎಂದು ನೆತನ್ಯಾಹು ಘೋಷಿಸಿದ್ದಾರೆ.

27 pilgrims from Meghalaya stranded in Jerusalem amid Israel-Palestine war  - India Today

ಪ್ರಧಾನಿ ಸೂಚನೆ ಮೇರೆಗೆ ಇಸ್ರೇಲ್‌ ಪಡೆಗಳು 'ಆಪರೇಷನ್‌ ಐರನ್‌ ಸ್ವೋರ್ಡ್ಸ್' ಹೆಸರಿನಲ್ಲಿ ಹಮಾಸ್‌ ಉಗ್ರರ ನೆಲೆಗಳ ಮೇಲೆ ರಾಕೆಟ್‌ ದಾಳಿ ನಡೆಸಿವೆ. ಈ ಪ್ರತಿದಾಳಿಗೆ 300 ಜನರು ಹತರಾಗಿದ್ದಾರೆ. 2000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆಂದು ಇಸ್ರೇಲ್‌ ಹೇಳಿಕೊಂಡಿದೆ. ಹಮಾಸ್‌ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ರಾಕೆಟ್‌ ದಾಳಿ ನಡೆಸುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿವೈರಲ್‌ ಆಗಿವೆ.

ಶನಿವಾರ ಬೆಳಗ್ಗೆ ಹಮಾಸ್‌ ಉಗ್ರರು ನಡೆಸಿದ ರಾಕೆಟ್‌ ಹಾಗೂ ಗುಂಡಿನ ದಾಳಿಗೆ 250ಕ್ಕೂ ಹೆಚ್ಚು ಇಸ್ರೇಲಿಗರು ಮೃತಪಟ್ಟಿದ್ದು, 1,500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಗ್ರರು ಬೀದಿ ಬೀದಿಗಳಲ್ಲಿ ಗುಂಡಿನ ದಾಳಿ ನಡೆಸುತ್ತಿರುವ ಕಾರಣ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಗಾಜಾ ಪಟ್ಟಿಯ ಗಡಿಯಲ್ಲಿರುವ ಇಸ್ರೇಲಿಗರು ಸುರಕ್ಷಿತ ಸ್ಥಳ ಅರಸಿ ಬೇರೆ ಕಡೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

27 people from Meghalaya stuck in Bethlehem amid war like situation between  Israel and Palestine | Northeast Live

ಪ್ಯಾರಾಚೂಟ್‌, ವಾಹನ ಮೂಲಕ ನುಗ್ಗಿದ ಉಗ್ರರು ; 

'ಆಪರೇಷನ್‌ ಅಲ್‌-ಅಕ್ಸಾ ಸ್ಟಾಮ್‌ರ್‍' ಹೆಸರಿನಲ್ಲಿರಾಕೆಟ್‌ ದಾಳಿ ಜತೆಗೆ ಹಮಾಸ್‌ ಉಗ್ರರು ಪ್ಯಾರಾಚೂಟ್‌ ಹಾಗೂ ಇಸ್ರೇಲ್‌ ಸೇನಾ ವಾಹನ ಬಳಸಿಕೊಂಡೇ ದಕ್ಷಿಣ ಇಸ್ರೇಲ್‌ನ ಸ್ಡೆರೋಟ್‌ ಸೇರಿದಂತೆ ಹಲವು ನಗರಗಳಿಗೆ ಪ್ರವೇಶಿಸಿ ತಮ್ಮ ಧ್ವಜ ಹಾರಾಡಿಸಿದ ವಿಡಿಯೊಗಳು ವೈರಲ್‌ ಆಗಿವೆ.

Following Hamas' declaration of Operation Al-Aqsa Flood aimed at Israel, the Gaza Strip witnessed Israeli airstrikes. The besieged enclave reported launching thousands of rockets towards Israel, resulting in multiple casualties. Israeli military radio also disclosed that Palestinian fighters from Gaza had breached Israel's borders.