ಬ್ರೇಕಿಂಗ್ ನ್ಯೂಸ್
29-09-23 02:47 pm HK News Desk ದೇಶ - ವಿದೇಶ
ಕರಾಚಿ, ಸೆ.29: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 52 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದಲ್ಲಿ ಬಲಿಯಾದವರ ಪೈಕಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಕೂಡ ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಬಲೋಚಿಸ್ತಾನದ ಮಸ್ತುಂಗ್ ಜಿಲ್ಲೆಯ ಮಸೀದಿಯೊಂದರ ಸಮೀಪ ಸ್ಫೋಟ ಸಂಭವಿಸಿದೆ. ಅಲ್ಫಾಹ್ ರಸ್ತೆಯ ಮದೀನಾ ಮಸೀದಿ ಸಮೀಪ ಈದ್ ಇ ಮಿಲಾದುನ್ ನಬಿ ಮೆರವಣಿಗೆಗಾಗಿ ನೂರಾರು ಜನರು ಸೇರಿದ್ದರು. ಇದು ಆತ್ಮಾಹುತಿ ದಾಳಿ ಎಂದು ನಗರ ಸ್ಟೇಷನ್ ಹೌಸ್ ಅಧಿಕಾರಿ ಜಾವೇದ್ ಲೆಹ್ರಿ ತಿಳಿಸಿದ್ದಾರೆ.
ಈ ಸ್ಫೋಟ ಬೃಹತ್ ಪ್ರಮಾಣದ್ದಾಗಿದೆ ಎಂದು ಮಸ್ತುಂಗ್ ಸಹಾಯಕ ಕಮಿಷನರ್ ಅಟ್ಟಾ ಉಲ್ ಮುನಿಮ್ ತಿಳಿಸಿದ್ದಾರೆ. ಜಿಲ್ಲಾ ಆಡಳಿತದ ಮಾಹಿತಿ ಪ್ರಕಾರ, ಮೃತರಲ್ಲಿ ಮಸ್ತುಂಗ್ ಡಿಎಸ್‌ಪಿ ನವಾಜ್ ಗಶ್ಕೋರಿ ಸೇರಿದ್ದಾರೆ.
ಇದು ಆತ್ಮಾಹುತಿ ದಾಳಿ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾಗಿ ಡಾನ್ ಪತ್ರಿಕೆ ತಿಳಿಸಿದೆ. ಮಸೀದಿಯ ಸುತ್ತಮುತ್ತಲೂ ಹತ್ತಾರು ಶವಗಳು ಛಿದ್ರಗೊಂಡು ಬಿದ್ದಿರುವುದು ಸ್ಫೋಟದ ಬಳಿಕದ ವಿಡಿಯೋ ಹಾಗೂ ಚಿತ್ರಗಳಲ್ಲಿ ಕಾಣಿಸಿದೆ. ದೇಹಗಳಿಂದ ಬೇರ್ಪಟ್ಟ ಕೈ ಕಾಲುಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಘಟನೆಯ ಭೀಕರ ಸ್ವರೂಪಕ್ಕೆ ಸಾಕ್ಷಿಯಾಗಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 28 ಮೃತದೇಹಗಳನ್ನು ಶಹೀದ್ ನವಾಬ್ ಗೌಸ್ ಬಕ್ಷ್ ರೈಸಿನಿ ಸ್ಮಾರಕ ಆಸ್ಪತ್ರೆಗೆ ತರಲಾಗಿದೆ. ಇನ್ನು 22 ಶವಗಳನ್ನು ಮಸ್ತುಂಗ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಡಾ, ಸಯೀದ್ ಮಿರ್ವಾನಿ ತಿಳಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಇದೇ ಜಿಲ್ಲೆಯಲ್ಲಿ ನಡೆದ ಎರಡನೇ ಪ್ರಮುಖ ಸ್ಫೋಟ ಇದಾಗಿದೆ. ಈ ತಿಂಗಳ ಆರಂಭದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜಮಿಯತ್ ಉಲೆಮಾ- ಇ- ಇಸ್ಲಾಮ್ ಫಾಜಿ (ಜೆಯುಐ- ಎಫ್) ನಾಯಕ ಹಫೀಜ್ ಹಮ್ದುಲ್ಲಾ ಸೇರಿದಂತೆ ಅನೇಕರು ಗಾಯಗೊಂಡಿದ್ದರು.
At least 34 people were killed and more than 100 wounded Friday by a “suicide blast” near a mosque in Pakistan’s Balochistan province, local media reported. The explosion happened in the Mustang district of the southwestern province as people gathered for a religious procession marking the birthday of Prophet Mohammed, Pakistan’s Dawn reported citing the assistant commissioner of Mastung district.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm