ಬ್ರೇಕಿಂಗ್ ನ್ಯೂಸ್
18-09-23 10:21 pm HK News Desk ದೇಶ - ವಿದೇಶ
ನವದೆಹಲಿ, ಸೆ.18: ಏಶ್ಯಾ ಕಪ್ ಫೈನಲ್ ಪಂದ್ಯಾಟದಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತ ತಂಡದ ಗೆಲುವಿಗೆ ಕಾರಣರಾದ ಮೊಹಮ್ಮದ್ ಸಿರಾಜ್ ತನ್ನ ಹೃದಯ ವೈಶಾಲ್ಯದಿಂದ ಸುದ್ದಿಯಾಗಿದ್ದಾರೆ. ಆರು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮೊಹಮ್ಮದ್ ಸಿರಾಜ್ ತನಗೆ ಸಿಕ್ಕಿದ 5 ಸಾವಿರ ಡಾಲರ್ ಬಹುಮಾನದ ಮೊತ್ತವನ್ನು ಸ್ಟೇಡಿಯಂ ಕೆಲಸಗಾರರಿಗೆ ದಾನ ನೀಡಿದ್ದಾರೆ.
ಮಳೆಯ ಕಾರಣದಿಂದ ಏಶ್ಯಾ ಕಪ್ ಫೈನಲ್ ಪಂದ್ಯ ನಡೆಯುವ ಬಗ್ಗೆ ಅನುಮಾನಗಳಿದ್ದವು. ಭಾನುವಾರ ಬೆಳಗ್ಗೆ ಭಾರೀ ಮಳೆಯಾಗಿದ್ದಲ್ಲದೆ, ಸಂಜೆಯೂ ಭಾರೀ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಾಮಾನ ವರದಿಗಳಿದ್ದವು. ಆದರೆ ಮಧ್ಯಾಹ್ನ ನಂತರ ಮಳೆ ಬಿಟ್ಟಿದ್ದರಿಂದ ಪಂದ್ಯಾಟ ನಡೆದಿತ್ತು. ಬೆಳಗ್ಗೆ ಭಾರೀ ಮಳೆಯಾಗಿದ್ದರೂ, ಸ್ಟೇಡಿಯಂನಲ್ಲಿ ನೀರು ನಿಲ್ಲದಂತೆ ಕವರ್ ಮಾಡಿದ್ದ ಕೆಲಸಗಾರರು ಆಟಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದರು. ಇದರಿಂದಾಗಿ ಕೊಲಂಬೋ ನಗರದ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ಫೈನಲ್ ಪಂದ್ಯ ನಡೆದಿದ್ದರೆ ಅದರ ಶ್ರೇಯ ಅಲ್ಲಿನ ಕೆಲಸಗಾರರಿಗೂ ಸಲ್ಲಬೇಕಿತ್ತು.
ಇದನ್ನು ಮನಗಂಡಿದ್ದ ಭಾರತದ ವೇಗಿ ಮೊಹಮ್ಮದ್ ಸಿರಾಜ್, ಈ ಪಂದ್ಯಶ್ರೇಷ್ಠ ಪುರಸ್ಕಾರ ನಿಜಕ್ಕೂ ಇಲ್ಲಿನ ಕೆಲಸಗಾರರಿಗೆ ಸಲ್ಲಬೇಕು ಎಂದು ಮನಸಾರೆ ಹೇಳಿಕೊಂಡಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಲಂಕನ್ನರು ಒದ್ದೆ ಪಿಚ್ ನಲ್ಲಿ ವೇಗದ ಬೌಲಿಂಗ್ ಎದುರಿಸಲು ಪರದಾಡಿದ್ದಾರೆ. ವೇಗದ ಬೌಲಿಂಗ್ ಪೂರ್ತಿಯಾಗಿ ಸ್ವಿಂಗ್ ಆಗಿದ್ದರಿಂದ ಒಬ್ಬರ ನಂತರ ಒಬ್ಬರು ಬ್ಯಾಟ್ಸ್ ಮನ್ ಗಳು ಕ್ರೀಸಿನಿಂದ ನಿರ್ಗಮಿಸಿದ್ದಾರೆ.
ತನ್ನನ್ನು ಪಂದ್ಯಶ್ರೇಷ್ಠನೆಂದು ಘೋಷಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಸಿರಾಜ್, ನನ್ನ ಜೀವನ ಶ್ರೇಷ್ಠ ಬೌಲಿಂಗ್ ಹೌದು. ಆದರೆ ಈ ರೀತಿಯ ಪಿಚ್ ಕಾರಣದಿಂದಾಗಿ ವೇಗದ ಬೌಲಿಂಗ್ ಸ್ವಿಂಗ್ ಆಗತೊಡಗಿತ್ತು. ಇದೇ ಕಾರಣದಿಂದ ಕೇವಲ ಎರಡು ಗಂಟೆಯಲ್ಲಿ ಪೂರ್ತಿ ಪಂದ್ಯ ಕೊನೆಯಾಗಿತ್ತು. ಫಾಸ್ಟ್ ಬೌಲಿಂಗಿಗೆ ಹೇಳಿ ಮಾಡಿದ ರೀತಿಯಿತ್ತು ಪಿಚ್. ಇಲ್ಲಿನ ಸ್ಟೇಡಿಯಂನ್ನು ಮಳೆಯ ನಡುವೆಯೂ ಹಿಡಿದಿಟ್ಟ ಕೆಲಸಗಾರರು ಅಲ್ಲದೇ ಇರುತ್ತಿದ್ದರೆ, ಈ ಪಂದ್ಯ ನಡೆಯುತ್ತಿರಲಿಲ್ಲ. ಇದಕ್ಕಾಗಿ ನನಗೆ ನೀಡಿರುವ ಈ ಬಹುಮಾನದ ಮೊತ್ತವನ್ನು ಅವರಿಗೆ ನೀಡಬಯಸುತ್ತೇನೆ ಎಂದಿದ್ದಾರೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಂಕಾ 15.2 ಓವರಿನಲ್ಲಿ 50 ರನ್ನಿಗೆ ಆಲೌಟ್ ಆಗಿತ್ತು. ಗುರಿ ಬೆನ್ನಟ್ಟಿದ ಭಾರತದ ಆರಂಭಿಕರು 6.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿದ್ದಾರೆ. ಮಳೆಯಿಂದ ಒದ್ದೆ ಆಗಿರುವ ಪಿಚ್ ನಲ್ಲಿ ಮೊದಲು ಬ್ಯಾಟ್ ಮಾಡುವುದು ಕಠಿಣ ಸವಾಲು. ವೇಗದ ಬೌಲಿಂಗ್ ಸ್ವಿಂಗ್ ಆಗುವ ಕಾರಣದಿಂದ ಬ್ಯಾಟಿಂಗ್ ಕಷ್ಟವಾಗುತ್ತದೆ. ಆದರೆ ಲಂಕನ್ನರು ಬ್ಯಾಟಿಂಗ್ ಆಯ್ದುಕೊಂಡು ಎಡವಟ್ಟು ಮಾಡಿಕೊಂಡಿದ್ದರು. ಭಾರತೀಯ ವೇಗಿಗಳು ಲಂಕನ್ನರನ್ನು ಹಿಂದೆ ಯಾವತ್ತೂ ಆಗದ ರೀತಿ ಅವರದೇ ನೆಲದಲ್ಲಿ ಮಂಡಿಯೂರುವಂತೆ ಮಾಡಿದ್ದಾರೆ.
Indian pacer Mohammed Siraj won the Man of the Match prize for his stupendous bowling performance against Sri Lanka in the Asia Cup final on Sunday but he dedicated the money to the groundstaff at Colombo. Siraj received $5,000 for his courageous performance in the final, which India won by 10 wickets to win their eighth Asia Cup at the R Premadasa stadium.
13-09-25 08:46 pm
Bangalore Correspondent
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm