ಕೇಂದ್ರ ಗೃಹ ಇಲಾಖೆ ಸೂಚನೆ ; ಕಾಸರಗೋಡು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಿಗೆ ಆರ್ ಎಎಫ್ ಪಡೆ ಆಗಮನ

13-09-23 10:04 pm       HK News Desk   ದೇಶ - ವಿದೇಶ

ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಾದ ಕಾಸರಗೋಡು ನಗರ, ಕುಂಬಳೆ, ಉಪ್ಪಳ ಪೇಟೆಯಲ್ಲಿ ಕೇಂದ್ರೀಯ ಕ್ಷಿಪ್ರ ಕಾರ್ಯಾಚರಣೆ ಪಡೆಯಿಂದ ಪಥಸಂಚಲನ ನಡೆಸಲಾಗಿದೆ. 

ಕಾಸರಗೋಡು, ಸೆ.13: ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಾದ ಕಾಸರಗೋಡು ನಗರ, ಕುಂಬಳೆ, ಉಪ್ಪಳ ಪೇಟೆಯಲ್ಲಿ ಕೇಂದ್ರೀಯ ಕ್ಷಿಪ್ರ ಕಾರ್ಯಾಚರಣೆ ಪಡೆಯಿಂದ ಪಥಸಂಚಲನ ನಡೆಸಲಾಗಿದೆ. 

ಆರ್ ಎಎಫ್ ಪಡೆಯ ಅಸಿಸ್ಟೆಂಟ್‌ ಕಮಾಂಡೆಂಟ್‌ ಎಂ. ಭಾರತಿ ನೇತೃತ್ವದಲ್ಲಿ 68 ಮಂದಿ ಸದಸ್ಯರ ಕ್ಷಿಪ್ರ ಕಾರ್ಯಾಚರಣೆ ಪಡೆ ಕಾಸರಗೋಡು ಹೊಸ ಬಸ್‌ ನಿಲ್ದಾಣ, ವಿದ್ಯಾನಗರ, ಕುಂಬಳೆ ಮತ್ತಿತರ ಕಡೆಗಳಲ್ಲಿ ಬುಧವಾರ ಪಥಸಂಚಲನ ನಡೆಸಿದೆ. 

ಕೇಂದ್ರ ಕ್ಷಿಪ್ರ ಕಾರ್ಯಾಚರಣೆ ಪಡೆಯ ಚೆನ್ನೈ ವಿಭಾಗದ 97 ಸದಸ್ಯರು ಕಾಸರಗೋಡಿಗೆ ಬಂದಿದ್ದಾರೆ. ದೇಶದಲ್ಲಿ ತಲೆಯೆತ್ತುತ್ತಿರುವ ಸನಾತನ ಧರ್ಮ ವಿವಾದ, ಸಮುದಾಯ ಸ್ಪರ್ಧೆ, ಇದರಿಂದ ಉಂಟಾಗಬಹುದಾದ ರಾಜಕೀಯ ಘರ್ಷಣೆ, ಕಾನೂನು ಪಾಲನೆ, ಸಾರ್ವಜನಿಕರ ಭೀತಿ ನಿವಾರಣೆ ಮೊದಲಾದ ಗುರಿಯೊಂದಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯಿಂದ ಪಥ ಸಂಚಲನ ನಡೆಸಲಾಗಿದೆ. ಕಾಸರಗೋಡು ಪೊಲೀಸರು ಜತೆಗೆ ಸಾಥ್ ನೀಡಿದ್ದರು.

A squad of the Rapid Action Force staged a march past in Kasargod, Kumble and Uppala market as per the directions of the union home ministry. A 68-member team led by assistant commandant M Bharathi staged a march past at the new bus station and Vidyanagar among a few other locations.