Libya floods: ಲಿಬಿಯಾದಲ್ಲಿ ಅಪ್ಪಳಿಸಿದ ಡೇನಿಯಲ್ ಚಂಡಮಾರುತ ; 2000ಕ್ಕೂ ಹೆಚ್ಚು ಜನರ ಸಾವು

12-09-23 11:17 am       HK News Desk   ದೇಶ - ವಿದೇಶ

ಉತ್ತರ ಆಫ್ರಿಕಾದ ದೇಶದ ಪೂರ್ವ ಭಾಗಗಳಲ್ಲಿ ಡೇನಿಯಲ್ ಚಂಡಮಾರುತ ಹಾಗೂ ಪ್ರವಾಹದ ಅಬ್ಬರಕ್ಕೆ ಸುಮಾರು 2,000 ಜನರು ಮೃತಪಟ್ಟಿರುವುದಾಗಿ ಲಿಬಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೈರೋ, ಸೆ.12: ಉತ್ತರ ಆಫ್ರಿಕಾದ ದೇಶದ ಪೂರ್ವ ಭಾಗಗಳಲ್ಲಿ ಡೇನಿಯಲ್ ಚಂಡಮಾರುತ ಹಾಗೂ ಪ್ರವಾಹದ ಅಬ್ಬರಕ್ಕೆ ಸುಮಾರು 2,000 ಜನರು ಮೃತಪಟ್ಟಿರುವುದಾಗಿ ಲಿಬಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಲ್-ಮಾಸ್ರ್ ಟೆಲಿವಿಷನ್ ಸ್ಟೇಷನ್‌ಗೆ ದೂರವಾಣಿ ಸಂದರ್ಶನದಲ್ಲಿ, ಪ್ರಧಾನ ಮಂತ್ರಿ ಒಸಾಮಾ ಹಮದ್ ಅವರು ಪೂರ್ವ ನಗರವಾದ ಡರ್ನಾದಲ್ಲಿ 2,000 ಜನರು ಚಂದ್ರಮರುತ ಹೊಡೆತಕ್ಕೆ ಮೃತಪಟ್ಟಿರುವುದಾಗಿ ಹಾಗೂ ಸಾವಿರಾರು ಜನರು ಕಾಣೆಯಾಗಿರುವುದಾಗಿ ಹೇಳಿದ್ದಾರೆ.

2,000 dead, thousands missing in Libya after storm Daniel brings flood, rain  - India Today

Libya flooding: 2,000 people believed dead | CTV News

2000 dead, over 5000 missing after flood, storm hit Eastern Libya |  ummid.com

ಘಟನೆಗೆ ಸಂಬಂಧಿಸಿ ಪ್ರಧಾನಿ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದರು ಮತ್ತು ದೇಶಾದ್ಯಂತ ಧ್ವಜಗಳನ್ನು ಅರ್ಧಮಟ್ಟಕ್ಕೆ ಹಾರಿಸಲು ಆದೇಶಿಸಿದ್ದಾರೆ ಎನ್ನಲಾಗಿದೆ.

ಡೇನಿಯಲ್ ಚಂಡಮಾರುತದ ಬಳಿಕ ಡರ್ನಾದಲ್ಲಿ ಉಂಟಾದ ಪ್ರವಾಹದಿಂದ ಭಾರಿ ವಿನಾಶವನ್ನು ಉಂಟುಮಾಡಿದೆ. ಪೂರ್ವ ಲಿಬಿಯಾ ಸರ್ಕಾರದ ಆರೋಗ್ಯ ಸಚಿವ ಓಥ್ಮಾನ್ ಅಬ್ದುಲ್ಜಲೀಲ್ ಅವರು ಸೌದಿ ಒಡೆತನದ ಸುದ್ದಿ ಚಾನೆಲ್ ಅಲ್-ಅರೇಬಿಯಾಗೆ ದೂರವಾಣಿ ಸಂದರ್ಶನದಲ್ಲಿ ಸಾವಿನ ಸಂಖ್ಯೆಯನ್ನು ಘೋಷಿಸಿದರು.

Authorities in eastern Libya said at least 2,000 people were killed and thousands more were missing after a massive flood ripped through the city of Derna following a heavy storm and rain.Ahmed Mismari, the spokesperson for the Libyan National Army (LNA) that controls eastern Libya, said in a televised news conference that the disaster came after dams above Derna had collapsed, "sweeping whole neighbourhoods with their residents into the sea".