ರಾಜಧಾನಿಯಲ್ಲಿ ಭಾರೀ ಮಳೆ ; ಜಿ20 ಶೃಂಗಸಭೆಯ ಭಾರತ್ ಮಂಟಪ ಜಲಾವೃತ, ಅಭಿವೃದ್ಧಿ ಈಜುತ್ತಿದೆ ಎಂದ ಕಾಂಗ್ರೆಸ್ 

10-09-23 05:42 pm       HK News Desk   ದೇಶ - ವಿದೇಶ

ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ಜಿ 20 ಶೃಂಗಸಭೆ ನಡೆದಿರುವ ಪ್ರದೇಶದ ಭಾರತ್ ಮಂಟಪ ಜಲಾವೃತಗೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಕಾಂಗ್ರೆಸ್ ಟೀಕಾಸ್ತ್ರ ಮೊಳಗಿಸಿದೆ. 

ನವದೆಹಲಿ, ಸೆ.10: ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ಜಿ 20 ಶೃಂಗಸಭೆ ನಡೆದಿರುವ ಪ್ರದೇಶದ ಭಾರತ್ ಮಂಟಪ ಜಲಾವೃತಗೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಕಾಂಗ್ರೆಸ್ ಟೀಕಾಸ್ತ್ರ ಮೊಳಗಿಸಿದೆ. 

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜನ ಖರ್ಗೆ ಅವರಿಗೆ ಶೃಂಗಸಭೆ ಔತಣಕೂಟಕ್ಕೆ ಆಹ್ವಾನ ನೀಡಿದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇದು ಮತ್ತೊಂದು ಅಸ್ತ್ರ ನೀಡಿದಂತಾಗಿದೆ. ಭಾರತ ಮಂಟಪ ಜಲಾವೃತ್ತದ ದೃಶ್ಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ  ಹಂಚಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ವಾಕ್ ಪ್ರಹಾರ ನಡೆಸಿದ್ದಾರೆ. 

ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ಪ್ರಗತಿಯ ಪೊಳ್ಳು ಭರವಸೆಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. 2,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ವೇದಿಕೆ ಕೇವಲ ಒಂದು ದಿನದ ಮಳೆಗೆ ಜಲಾವೃತ್ತವಾಗಿದೆ ಎಂದು ಟೀಕಿಸಿದ್ದಾರೆ. ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಬಿವಿ, ಕೇಂದ್ರದ ಭರವಸೆಗಳನ್ನು ಉಲ್ಲೇಖಿಸಿ ಅಭಿವೃದ್ಧಿ ಈಜುತ್ತಿದೆ ಎಂದು  ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

Visuals of water-logging at Bharat Mandapam, the sprawling venue for the G20 Summit in New Delhi's Pragati Maidan, made rounds on social media on Sunday. The flooding at the venue drew sharp reactions from social media users and political parties including Congress and AAP.