ಮೊರಕ್ಕೋದಲ್ಲಿ ಭೀಕರ ಭೂಕಂಪ ; 800ಕ್ಕೂ ಹೆಚ್ಚು ಸಾವು, ಭಾರೀ ನಾಶ- ನಷ್ಟ 

09-09-23 09:23 pm       HK News Desk   ದೇಶ - ವಿದೇಶ

ಮೊರಕ್ಕೋ ದೇಶದಲ್ಲಿ ನಿನ್ನೆ ರಾತ್ರಿ ಭೀಕರ ಭೂಕಂಪ ಸಂಭವಿಸಿದ್ದು, 800ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಸ್ಥಳೀಯ ಮಾಧ್ಯಮಗಳು 820 ಜನ ಸತ್ತಿದ್ದು, 972 ಮಂದಿ ಗಾಯಗೊಂಡಿದ್ದಾರೆಂದು ಶನಿವಾರ ವರದಿ ಮಾಡಿವೆ.

ನವದೆಹಲಿ, ಸೆ.9: ಮೊರಕ್ಕೋ ದೇಶದಲ್ಲಿ ನಿನ್ನೆ ರಾತ್ರಿ ಭೀಕರ ಭೂಕಂಪ ಸಂಭವಿಸಿದ್ದು, 800ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಸ್ಥಳೀಯ ಮಾಧ್ಯಮಗಳು 820 ಜನ ಸತ್ತಿದ್ದು, 972 ಮಂದಿ ಗಾಯಗೊಂಡಿದ್ದಾರೆಂದು ಶನಿವಾರ ವರದಿ ಮಾಡಿವೆ.

ಉತ್ತರ ಆಫ್ರಿಕಾದ ಮೊರಕ್ಕೋದಲ್ಲಿ ಇದೇ ಮೊದಲ ಬಾರಿಗೆ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಮರಕ್ಕೇಶ್ ನಗರದ ದಕ್ಷಿಣ ಭಾಗದ 71 ಕಿಮೀ ದೂರದಲ್ಲಿ ಕೇಂದ್ರ ಬಿಂದು ಇದ್ದು ಕರಾವಳಿ ನಗರಗಳಾದ ರಬಾಟ್, ಕೆಸಬ್ಲಾಂಕ, ಅಸೌರಿಯಾದಲ್ಲಿ ಭಾರೀ ನಾಶ- ನಷ್ಟ ಸಂಭವಿಸಿದೆ.

Death toll in Morocco earthquake crosses 1,000 as rescuers dig for  survivors - CNA

Death toll from Morocco earthquake rises to 1,037-Xinhua

Morocco earthquake toll crosses 1,000, more than 700 'critical' | Top  Updates | World News - Hindustan Times

Moroccan quake death toll rises to 1,037, with at least 1,200 injured

ಮೊರಕ್ಕೋ ಭೂಕಂಪದ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದು, ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಇರುವುದಾಗಿ ಹೇಳಿದ್ದಾರೆ. ಯುರೋಪ್ ಮತ್ತು ಆಫ್ರಿಕಾ ಖಂಡಗಳ ಮಧ್ಯೆ ಮೊರಕ್ಕೋ ದೇಶ ಇರುವುದರಿಂದ ಈ ಭಾಗದಲ್ಲಿ ಪದೇ ಪದೇ ಭೂಕಂಪಗಳಾಗುತ್ತಿವೆ. 1960ರಲ್ಲಿ 5.8 ತೀವ್ರತೆಯ ಕಂಪನ ಉಂಟಾಗಿದ್ದರಿಂದ ಸಾವಿರಾರು ಜನರು ಮೃತಪಟ್ಟಿದ್ದ ಘಟನೆ ನಡೆದಿತ್ತು. 2004ರಲ್ಲಿ 6.4ರ ತೀವ್ರತೆಯ ಭೂಕಂಪ ಉಂಟಾಗಿತ್ತು. ಆನಂತರ, ಈ ಭಾಗದಲ್ಲಿ ಮನೆ, ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಮುಂಜಾಗ್ರತೆ ಇರಿಸುವಂತೆ ಸೂಚಿಸಲಾಗಿತ್ತು.

At least 1,037 have been killed and 1,200 injured after a powerful earthquake of magnitude 6.8 struck Morocco, according to state media. The quake hit just after 11pm local time (22:00 GMT).