ಸ್ಕಿಲ್​ ಡೆವಲಪ್​ಮೆಂಟ್​ ಹಗರಣ ; ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ, ಭುಗಿಲೆದ್ದ ಆಕ್ರೋಶ, ವ್ಯಾಪಕ ಪ್ರತಿಭಟನೆ, ಬಸ್ ಸಂಚಾರ ಸ್ಥಗಿತ !

09-09-23 11:39 am       HK News Desk   ದೇಶ - ವಿದೇಶ

ಸ್ಕಿಲ್​ ಡೆವಲಪ್​ಮೆಂಟ್​ ಹಗರಣಕ್ಕೆ ಸಂಬಂಧಿಸಿದಂತೆತೆಲುಗು ದೇಶಂ ಪಕ್ಷದ ಅಧ್ಯಕ್ಷ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಇಂದು ಮುಂಜಾನೆ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶ, ಸೆ 09: ಸ್ಕಿಲ್​ ಡೆವಲಪ್​ಮೆಂಟ್​ ಹಗರಣಕ್ಕೆ ಸಂಬಂಧಿಸಿದಂತೆತೆಲುಗು ದೇಶಂ ಪಕ್ಷದ ಅಧ್ಯಕ್ಷ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಇಂದು ಮುಂಜಾನೆ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಚಂದ್ರಬಾಬು ನಾಯ್ಡು ಅವರು ತಂಗಿದ್ದ ಬಸ್‌ಗೆ ಪೊಲೀಸರು ಸುತ್ತುವರಿದು ಬಂಧಿಸಿದ ಕಾರಣ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.

ನಡೆದಿದ್ದೇನು?:

ರಾತ್ರಿ ನಂದ್ಯಾಲದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಚಂದ್ರಬಾಬು ಆರ್​ಕೆ ಫಂಕ್ಷನ್ ಹಾಲ್​ನಲ್ಲಿ ತಂಗಿದ್ದರು. ಬೆಳಗಿನ ಜಾವ ಎರಡೂವರೆ ಗಂಟೆ ಸುಮಾರಿಗೆ ಅನಂತಪುರ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದರು.

Former Andhra Pradesh CM N Chandrababu Naidu arrested in APSSDC scam

ಅಕ್ಕಪಕ್ಕದಲ್ಲಿರುವ ತೆಲುಗುದೇಶಂ ನಾಯಕರು ಈ ಸಮಯದಲ್ಲಿ ಯಾಕೆ ಭೇಟಿಯಾಗಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ರಘುರಾಮಿ ರೆಡ್ಡಿ ನೀಮಗೇಕೆ ಹೇಳಬೇಕು ಎಂದು ಮರು ಪ್ರಶ್ನಿಸಿದರು. ಪ್ರಕರಣವೇನು ಎಂದು ಕೇಳಿದಾಗ ಪೊಲೀಸರು ಉತ್ತರಿಸಲಿಲ್ಲ. ಆದರೆ.. ಪ್ರಕರಣದ ವಿವರಗಳ ಬಗ್ಗೆ ಮಾತನಾಡದ ಡಿಐಜಿ ರಘುರಾಮಿ ರೆಡ್ಡಿ, ಚಂದ್ರಬಾಬು ಅವರು ತಂಗಿದ್ದ ಬಸ್ಸಿನ ಬಾಗಿಲ ಬಳಿ ತೆರಳಿದರು. ಇವರ ವರ್ತನೆಗೆ ತೆಲುಗುದೇಶಂ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಪೊಲೀಸರು ಮತ್ತು ತೆಲುಗು ದೇಶಂ ಪದಾಧಿಕಾರಿಗಳ ನಡುವೆ ತೀವ್ರ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆಯಿತು. ಮಧ್ಯರಾತ್ರಿ ಚಂದ್ರಬಾಬು ಅವರನ್ನು ಎಬ್ಬಿಸಿದ್ದು ಸರಿಯಲ್ಲ ಎಂದು ಪೊಲೀಸರೊಂದಿಗೆ ಟಿಡಿಪಿ ನಾಯಕರು ವಾಗ್ವಾದ ನಡೆಸಿದರು. ನಸುಕಿನಜಾವ 3 ಗಂಟೆಗೆ ಏಕೆ ಬರಬೇಕು ಎಂದು ಪೊಲೀಸರ ವರ್ತನೆಗೆ ಟಿಡಿಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Chandrababu Naidu arrested: What is the multi-crore skill development scam?  | Latest News India - Hindustan Times

ಬೆಳಗ್ಗೆ 6 ಗಂಟೆಗೆ ಬಂಧನ:

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಬೆಳಗ್ಗೆ 5.30 ರ ವರೆಗೆ ನಾಯ್ಡು ಅವರನ್ನು ಭೇಟಿ ಆಗಲು ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ ಎಂದು ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಪಟ್ಟು ಹಿಡಿದರು. ಬೆಳಗ್ಗೆ 6 ಗಂಟೆ ಸುಮಾರಿಗೆ ನಾಯ್ಡು ಅವರ ವಾಹನದ ಬಾಗಿಲು ಬಡಿದು ಕೆಳಗಿಳಿಸಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಿಐಡಿ ಜಾಮೀನು ರಹಿತ ಬಂಧನ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಪೊಲೀಸರು ನಸುಕಿನ ಜಾವದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲು ಆರ್​ಕೆ ಫಂಕ್ಷನ್​ ಹಾಲ್​ಗೆ ಡಿಐಜಿ ಮತ್ತು ಪೊಲೀಸರ ತಂಡ ಬಂದಿತ್ತು. ಆರಂಭಿಕ ಪ್ರತಿರೋಧದ ನಂತರ ನಾಯ್ಡು ಅವರನ್ನು ಬಂಧಿಸಿ ಕರೆದೊಯ್ಯಲಾಯಿತು. ಅವರನ್ನು ವಿಜಯವಾಡಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

In predawn swoop, police arrest Naidu at Nandyal for alleged role in skill  development scam; TDP protests across AP - The South First

ಇನ್ನು, ಚಂದ್ರಬಾಬು ನಾಯ್ಡು ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಗಾದರು. ಚಂದ್ರಬಾಬು ಅವರಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಅಧಿಕ ಬಿಪಿ ಮತ್ತು ಶುಗರ್ ಇರುವುದು ತಿಳಿದುಬಂದಿದೆ. ಚಂದ್ರಬಾಬು ಆರೋಗ್ಯ ಸ್ಥಿತಿ ಸರಿಯಿಲ್ಲ. ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಅವರ ಪರ ವಕೀಲರು ಮತ್ತು ಪಕ್ಷದ ಮುಖಂಡರು ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಬಂಧನಕ್ಕೆ ಭುಗಿಲೆದ್ದ ಆಕ್ರೋಶ, ವ್ಯಾಪಕ ಪ್ರತಿಭಟನೆ, ಬಸ್ ಸಂಚಾರ ಸ್ಥಗಿತ ; 

ನಂದ್ಯಾಲದಲ್ಲಿ ಟಿಡಿಪಿ ನಾಯಕ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ ನಂತರ ರಾಜ್ಯಾದ್ಯಂತ ಟಿಡಿಪಿ ಕಾರ್ಯಕರ್ತರು ಮತ್ತು ಮುಖಂಡರು ಧರಣಿ ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಜಿಲ್ಲೆಯ ಅಲ್ಲಲ್ಲಿ ಟೈರ್‌ ಸುಟ್ಟು ರಸ್ತೆಗಿಳಿದು ಪ್ರತಿಭಟನೆ ನಡೆಸಲಾಗುತ್ತಿದೆ. ಇದರಿಂದಾಗಿ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಆತಂಕಕಾರಿ ಸ್ಥಿತಿ ಕಂಡು ಬರುತ್ತಿದೆ. ಕೆಲವೆಡೆ ಕಪ್ಪು ಬಾವುಟ ಹಿಡಿದು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಏನಿದು ಬಹುಕೋಟಿ ಸ್ಕಿಲ್​ ಡೆವಲಪ್​​ಮೆಂಟ್ ಹಗರಣ?

ಈ ಹಿಂದೆ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರದಲ್ಲಿ ಆಂಧ್ರಪ್ರದೇಶ ರಾಜ್ಯ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎಪಿಎಸ್‌ಎಸ್‌ಡಿಸಿ) ನಲ್ಲಿ ನಡೆದ ಬಹುಕೋಟಿ ಹಗರಣ ಇದಾಗಿದೆ. ಈ ವರ್ಷ ಮಾರ್ಚ್​ನಲ್ಲಿ ಹಗರಣ ಸಂಬಂಧ ಸಿಐಡಿ ತನಿಖೆ ಆರಂಭಿಸಿತು. 2016 ರಲ್ಲಿ ಎಪಿಎಸ್‌ಎಸ್‌ಡಿಸಿಯ ಸಿಇಒ ಆಗಿದ್ದ ಮಾಜಿ ಭಾರತೀಯ ರೈಲ್ವೇ ಸಂಚಾರ ಸೇವೆ (ಐಆರ್‌ಟಿಎಸ್) ಅಧಿಕಾರಿ ಅರ್ಜಾ ಶ್ರೀಕಾಂತ್ ಅವರಿಗೆ ನೀಡಲಾದ ನೋಟಿಸ್‌ಗಳನ್ನು ಅನುಸರಿಸಿ ತನಿಖೆ ಆರಂಭವಾಯಿತು.

2016 ರಲ್ಲಿ, ಟಿಡಿಪಿ ಸರ್ಕಾರದ ಅವಧಿಯಲ್ಲಿ, ನಿರುದ್ಯೋಗಿ ಯುವಕರಿಗೆ ಅವರ ಉದ್ಯೋಗಾವಕಾಶವನ್ನು ಹೆಚ್ಚಿಸಲು ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಎಪಿಎಸ್‌ಎಸ್‌ಡಿಸಿ ಅನ್ನು ಸ್ಥಾಪಿಸಲಾಯಿತು. 3,300 ಕೋಟಿ ಮೊತ್ತದ ಎಪಿಎಸ್‌ಎಸ್‌ಡಿಸಿ ಯೋಜನೆಗೆ ತಿಳುವಳಿಕೆ ಒಪ್ಪಂದವನ್ನು ಮಾಡಿಕೊಂಡಿತು. ಈ ತಿಳುವಳಿಕಾ ಒಪ್ಪಂದವು ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಲಿಮಿಟೆಡ್ ಮತ್ತು ಡಿಸೈನ್ ಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಕ್ಕೂಟವನ್ನು ಒಳಗೊಂಡಿತ್ತು.

ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಕೌಶಲ್ಯ ಅಭಿವೃದ್ಧಿಗಾಗಿ 6 ಕೇಂದ್ರಗಳನ್ನು ಸ್ಥಾಪಿಸಬೇಕಾಗಿತ್ತು. ರಾಜ್ಯ ಸರ್ಕಾರವು ಒಟ್ಟು ಯೋಜನಾ ವೆಚ್ಚದ ಶೇ.10 ರಷ್ಟು ಹಣ ನೀಡಬೇಕಾಗಿತ್ತು. ಸೀಮೆನ್ಸ್ ಮತ್ತು ಡಿಸೈನ್ ಟೆಕ್ ಉಳಿದ ಹಣವನ್ನು ಒದಗಿಸಬೇಕಾಗಿತ್ತು.

ಆದರೆ ಗುಣಮಟ್ಟದ ಟೆಂಡರ್ ಪ್ರಕ್ರಿಯೆ ಅನುಸರಿಸದೆ ಯೋಜನೆ ಆರಂಭಿಸಲಾಗಿತ್ತು. ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರಲಿಲ್ಲ. ಹಣ ದುರುಪಯೋಗ ಮಾಡಿಕೊಳ್ಳಲಾಗಿತ್ತು. ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಈ ಯೋಜನೆಯಲ್ಲಿ ತನ್ನದೇ ಆದ ಯಾವುದೇ ಸಂಪನ್ಮೂಲಗಳನ್ನು ಹೂಡಿಕೆ ಮಾಡಲು ವಿಫಲವಾಗಿತ್ತು ಮತ್ತು ಅದರ ಬದಲಾಗಿ ಯೋಜನೆಗೆ ಉದ್ದೇಶಿಸಲಾದ ಹಣದಲ್ಲಿ 371 ಕೋಟಿ ಹಣವನ್ನು ಅಲೈಡ್ ಕಂಪ್ಯೂಟರ್ಸ್, ಸ್ಕಿಲ್ಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನಾಲೆಡ್ಜ್ ಪೋಡಿಯಮ್, ಕ್ಯಾಡೆನ್ಸ್ ಪಾರ್ಟ್‌ನರ್ಸ್ ಮತ್ತು ಇಟಿಎ ಗ್ರೀನ್ಸ್ ಸೇರಿದಂತೆ ಶೆಲ್ ಕಂಪನಿಗಳಿಗೆ ವರ್ಗಾಯಿಸಲಾಯಿತು.

In a dramatic development, the State CID police on September 9 arrested Telugu Desam Party national president and former Chief Minister Nara Chandrababu Naidu in Nandyal in connection with an alleged ₹550 crore Skill Development scam, preceded by a five-hour-long high tension.