ಉದಯನಿಧಿ ಸ್ಟಾಲಿನ್ ತಲೆ ಕಡಿದರೆ ಹತ್ತು ಕೋಟಿ ಕೊಡುತ್ತೇನೆ ; ಅಯೋಧ್ಯೆ ಆಚಾರ್ಯ ಪರಮಹಂಸ ಘೋಷಣೆ 

04-09-23 10:35 pm       HK News Desk   ದೇಶ - ವಿದೇಶ

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಸ್ಟಾಲಿನ್ ತಲೆ ಕಡಿದರೆ ಹತ್ತು ಕೋಟಿ ಕೊಡುತ್ತೇನೆ ಎಂದು ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನವದೆಹಲಿ, ಸೆ.4: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಸ್ಟಾಲಿನ್ ತಲೆ ಕಡಿದರೆ ಹತ್ತು ಕೋಟಿ ಕೊಡುತ್ತೇನೆ ಎಂದು ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಸೋಮವಾರ ಖಡ್ಗ ಬಳಸಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಭಾವಚಿತ್ರದ ಸಾಂಕೇತಿಕ 'ಶಿರಚ್ಛೇದ' ನಡೆಸಿದ ಪರಮಹಂಸ ಆಚಾರ್ಯ ಅವರು, ಆತನ ಪೋಸ್ಟರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. ಆನಂತರ ಸಚಿವ ಉದಯನಿಧಿ ಸ್ಟಾಲಿನ್ ತಲೆಯನ್ನು ಯಾರಾದರೂ ಕಡಿದು ತಂದರೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು. 

ಇದೇ ವೇಳೆ ಮಾತನಾಡಿದ ಆಚಾರ್ಯ, ಸನಾತನ‌ ಧರ್ಮ ಲಕ್ಷಾಂತರ ವರ್ಷಗಳಿಂದ ಬೆಳೆದು ಬಂದಿದೆ. ಇದಕ್ಕೆ ಆದಿ, ಅಂತ್ಯವಿಲ್ಲ. ಉಳಿದವು ಎರಡು ಸಾವಿರ ವರ್ಷಗಳ ಈಚೆಗೆ ಹುಟ್ಟಿ ಬಂದಿವೆ ಅಷ್ಟೇ. ಭೂಮಿಯಲ್ಲಿ ಅಳಿಯದೆ ಉಳಿದಿರುವುದು ಸನಾತನ ಧರ್ಮ ಅಷ್ಟೇ. ಇದನ್ನು ಅಂತ್ಯಗೊಳಿಸುತ್ತೇನೆ ಎಂದವರನ್ನು ಈ ಧರ್ಮವೇ ಅಂತ್ಯಗೊಳಿಸಿದೆ.‌ ಈ ಧರ್ಮವನ್ನು ಯಾರಿಂದಲೂ ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.‌

ಆಚಾರ್ಯ ಪರಮಹಂಸರು ಈ ಹಿಂದೆಯೂ ಇಂತಹ ಹೇಳಿಕೆಗಳಿಂದ ವಿವಾದಗಳನ್ನು ಹುಟ್ಟುಹಾಕಿದ್ದರು. ಈ ಹಿಂದೆ, ರಾಮಚರಿತ ಮಾನಸ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಬಿಹಾರದ ಸಚಿವರ ನಾಲಿಗೆಯನ್ನು ಕತ್ತರಿಸುವಂತೆ ಹೇಳಿ 10 ಕೋಟಿ ರೂ. ಬಹುಮಾನ ಘೋಷಿಸಿದ್ದರು.

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ವಿರುದ್ಧವೂ ಬೆದರಿಕೆ ಹಾಕಿದ್ದರು. ಸನಾತನ ಧರ್ಮ ಸೊಳ್ಳೆಗಳಿದ್ದಂತೆ, ಡೆಂಗ್ಯೂ ಮತ್ತು ಮಲೇರಿಯಾವನ್ನು ನಿರ್ಮೂಲನೆ ಮಾಡಿದಂತೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದು, ದೇಶಾದ್ಯಂತ ಕೋಲಾಹಲ ಎಬ್ಬಿಸಿದೆ.

Tamil Nadu Chief Minister MK Stalin's son Udhayanidhi Stalin is facing ire from all over the country for his controversial remarks against the Sanatana Dharma. Expressing his anger over the remarks of DMK leader and Tamil Nadu minister, Ayodhya saint Paramhans Acharya announced a cash reward of RS 10 crore for anyone who beheads the leader. He also symbolically beheaded Udhayanidhi Stalin.