ಬ್ರೇಕಿಂಗ್ ನ್ಯೂಸ್
07-11-20 10:51 pm Headline Karnataka News Network ದೇಶ - ವಿದೇಶ
ನ್ಯೂಯಾರ್ಕ್, ನವೆಂಬರ್ 7: ಜಗತ್ತಿನಾದ್ಯಂತ ಜನರ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷರ ಪಟ್ಟದ ಚುನಾವಣೆಯಲ್ಲಿ ಕೊನೆಗೂ ಜೋ ಬಿಡೆನ್ ಗೆದ್ದುಕೊಂಡಿದ್ದಾರೆ. ಅಮೆರಿಕದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಡೊನಾಲ್ಡ್ ಟ್ರಂಪ್ ಸೋಲೊಪ್ಪಿಕೊಂಡಿದ್ದಾರೆ. ಆಮೂಲಕ 77 ವರ್ಷದ ಜೋ ಬಿಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನ.3ರಂದು ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದು ಅಂದೇ ಮತ ಎಣಿಕೆ ಆರಂಭವಾಗಿತ್ತು. ಒಂದೇ ದಿನದಲ್ಲಿ ಜೋ ಬಿಡೆನ್ ಮುನ್ನಡೆ ಕಾಯ್ದುಕೊಂಡು ಶ್ವೇತಭವನದ ಗದ್ದುಗೆಗೆ ಹತ್ತಿರವಾಗಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಮಾತ್ರ ತಾನು ಸೋಲೊಪ್ಪಲಾರೆ ಎನ್ನುತ್ತಲೇ ಜನರ ನಿರ್ಣಯವನ್ನು ಕಡೆಗಣಿಸಿ ಕೆಲವು ಕ್ಷೇತ್ರಗಳಲ್ಲಿ ಮತ ಎಣಿಕೆಯನ್ನೇ ಸ್ಥಗಿತಗೊಳಿಸಿದ್ದರು. ಅತ್ಯಂತ ತೀವ್ರ ಸ್ಪರ್ಧೆ ಒಡ್ಡಿದ್ದ ಮಿಚಿಗನ್, ವಿಸ್ಕಾನ್ಸಿನ್, ಪೆನ್ಸಿಲ್ವೇನಿಯಾದಲ್ಲಿ ಮರು ಮತ ಎಣಿಕೆ ಆಗಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೇ ವೇಳೆ, ಡೊನಾಲ್ಡ್ ಟ್ರಂಪ್ ಪಕ್ಷದ ರಿಪಬ್ಲಿಕನ್ ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ಆರಂಭಿಸಿದ್ದರು. ಕೋರ್ಟ್ ಹೋರಾಟ, ತಿಕ್ಕಾಟದ ಬಳಿಕ ಕೊನೆಗೂ ಮತ ಎಣಿಕೆ ಪೂರ್ಣವಾಗಿದ್ದು ಅಧ್ಯಕ್ಷ ಪದವಿಗೇರಲು ಅಗತ್ಯವಾಗಿದ್ದ 270ರ ಗಡಿಯನ್ನು ದಾಟಿ 284 ಮತ ಪಡೆಯುವ ಮೂಲಕ ಜೋ ಬಿಡೆನ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಟ್ರಂಪ್ ಮೊದಲ ದಿನ ಪಡೆದಿದ್ದ 214 ಮತಗಳೇ ಕೊನೆಯದ್ದಾಗಿತ್ತು. ಏನೇ ಹೋರಾಟ, ಹಾರಾಟ ನಡೆಸಿದ್ರೂ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ.
1972ರಲ್ಲಿ ಮೊದಲ ಬಾರಿಗೆ ಸೆನೆಟರ್ ಆಗಿ ಚುನಾಯಿತರಾಗಿದ್ದ ಜೋ ಬಿಡೆನ್, ಸುದೀರ್ಘ 40 ವರ್ಷಗಳ ಕಾಲ ಸಂಸತ್ ಸದಸ್ಯನಾಗಿರುವ ಅನುಭವಿ. 2009ರಿಂದ 2016ರ ವರೆಗೆ ಒಬಾಮಾ ಆಡಳಿತದಲ್ಲಿ 47ನೇ ಉಪಾಧ್ಯಕ್ಷರಾಗಿ ಅನುಭವ ಗಳಿಸಿದ್ದರು.
ವಿಶೇಷ ಅಂದ್ರೆ, ಅಮೆರಿಕದ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸುತ್ತಿರುವುದು 1992ರ ಬಳಿಕ ಇದೇ ಮೊದಲು. 1992ರಲ್ಲಿ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಎರಡನೇ ಬಾರಿಗೆ ಆಯ್ಕೆ ಬಯಸಿ ಸ್ಪರ್ಧಿಸಿ ಸೋಲು ಕಂಡಿದ್ದರು. ಆಬಳಿಕ ಸತತವಾಗಿ ಅಧ್ಯಕ್ಷರಾದವರು ಎರಡು ಅವಧಿಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಕ್ಲಿಂಟನ್, ಜಾರ್ಜ್ ಬುಶ್, ಬರಾಕ್ ಒಬಾಮಾ ಹೀಗೆ.. ಅಮೆರಿಕದ ಅಧ್ಯಕ್ಷರ ಅವಧಿ ನಾಲ್ಕು ವರ್ಷ ಇರಲಿದ್ದು ಒಬ್ಬರಿಗೆ ಎರಡು ಬಾರಿ ಮಾತ್ರ ಅಧ್ಯಕ್ಷರಾಗಬಹುದು. ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳ ನಡುವೆ ಪ್ರತಿ ಬಾರಿ ಸ್ಪರ್ಧೆ. ಕಳೆದ ಬಾರಿ ಮೊದಲ ಬಾರಿಗೆ ಅಧ್ಯಕ್ಷ ಹುದ್ದೆ ಪಡೆದಿದ್ದ ಉದ್ಯಮ ಸಮೂಹದ ಒಡೆಯ ಡೊನಾಲ್ಡ್ ಟ್ರಂಪ್ ಈ ಬಾರಿ ಹೀನಾಯ ಸೋಲು ಕಂಡಿದ್ದಾರೆ.
ಟ್ರಂಪ್ ಹೊಸಕಿಹಾಕಿದ ಕೊರೊನಾ, ಹಿಂಸಾಚಾರ !!
ಈ ಬಾರಿ ಅಮೆರಿಕದಲ್ಲಿ ಎರಡು ವಿಚಾರಗಳು ದೊಡ್ಡ ಪ್ರಚಾರ ಪಡೆದಿದ್ದವು. ಕಪ್ಪು ವರ್ಣದ ವ್ಯಕ್ತಿಯನ್ನು ಪೊಲೀಸರು ಸಾರ್ವಜನಿಕವಾಗಿ ಹಿಂಸಿಸಿ ಸಾಯಿಸಿದ್ದು ದೇಶಾದ್ಯಂತ ಆಕ್ರೋಶದ ಅಲೆ ಎಬ್ಬಿಸಿತ್ತು. ಇದರ ವಿರುದ್ಧ ಇಡೀ ದೇಶದಲ್ಲಿ ಹಿಂಸಾಚಾರ ಕಾಣಿಸಿತ್ತು. ಆಬಳಿಕ ಕೊರೊನಾ ಸೋಂಕು ಕಾಣಿಸಿಕೊಂಡು ಅಮೆರಿಕವನ್ನು ಹಿಂಡಿ ಹಿಪ್ಪೆ ಮಾಡಿತ್ತು. ಜಗತ್ತಿನಾದ್ಯಂತ ಬಹುತೇಕ ದೇಶಗಳು ಲಾಕ್ಡೌನ್ ಮಾಡಿ ಸೋಂಕನ್ನು ನಿಯಂತ್ರಣಕ್ಕೆ ತಂದರೆ ಅಮೆರಿಕದ ಡೊನಾಲ್ಡ್ ಟ್ರಂಪ್ ಮಾತ್ರ ತನ್ನ ಪಟ್ಟು ಸಡಿಲಿಸಲಿಲ್ಲ. ಇದರಿಂದಾಗಿ ಕ್ಯಾಲಿಫೋರ್ನಿಯಾ, ವಾಷಿಂಗ್ಟನ್ ನಂತಹ ವಾಣಿಜ್ಯ ನಗರಗಳಲ್ಲಿ ಭೀತಿ ಸೃಷ್ಟಿಯಾಗಿತ್ತು. ಕೊರೊನಾ ಸೋಂಕು ಆವರಿಸಿ ಲಕ್ಷಾಂತರ ಜನ ಸಾವು ಕಂಡಿದ್ದರು. ಮಾಹಿತಿ ಪ್ರಕಾರ ಅಮೆರಿಕ ಒಂದರಲ್ಲೇ 2.30 ಲಕ್ಷ ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇವೆರಡು ವಿಚಾರಗಳು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅದೇ ಈಗ ಅಧ್ಯಕ್ಷ ಟ್ರಂಪ್ ಅವರನ್ನು ಪದವಿಯಿಂದಲೇ ಕಿತ್ತು ಹಾಕಿದೆ.
America, I’m honored that you have chosen me to lead our great country.
— Joe Biden (@JoeBiden) November 7, 2020
The work ahead of us will be hard, but I promise you this: I will be a President for all Americans — whether you voted for me or not.
I will keep the faith that you have placed in me. pic.twitter.com/moA9qhmjn8
Democrat Joe Biden defeated President Donald Trump and is projected to become the 46th president of the United States on Saturday, as per AP tally, positioning himself to lead a nation gripped by historic pandemic and a confluence of economic and social turmoil.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm