ಹಿಂದೂ ಧರ್ಮ ತುಂಬ ಹಳೆಯದು, ದೇಶದ ಮುಸ್ಲಿಮರೆಲ್ಲ ಹಿಂದೆ ಹಿಂದೂಗಳೇ ಆಗಿದ್ದರು, ನಾವೆಲ್ಲ ಭಾರತೀಯರೇ ; ಗುಲಾಂ ನಬಿ ಆಜಾದ್ 

17-08-23 01:32 pm       HK News Desk   ದೇಶ - ವಿದೇಶ

ಹಿಂದೂ ಧರ್ಮ ಇಸ್ಲಾಂಗಿಂತ ತುಂಬ ಹಳೆಯದು, ಈಗಿನ ಮುಸ್ಲಿಮರೆಲ್ಲ ಹಿಂದೆ ಹಿಂದೂಗಳೇ ಆಗಿದ್ದರು. ಆನಂತರ, ಮುಸ್ಲಿಂ ಆಗಿ ಮತಾಂತರಗೊಂಡಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ. 

ಶ್ರೀನಗರ, ಆಗಸ್ಟ್ 17: ಹಿಂದೂ ಧರ್ಮ ಇಸ್ಲಾಂಗಿಂತ ತುಂಬ ಹಳೆಯದು, ಈಗಿನ ಮುಸ್ಲಿಮರೆಲ್ಲ ಹಿಂದೆ ಹಿಂದೂಗಳೇ ಆಗಿದ್ದರು. ಆನಂತರ, ಮುಸ್ಲಿಂ ಆಗಿ ಮತಾಂತರಗೊಂಡಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ. 

ಇಸ್ಲಾಂ ಹುಟ್ಟಿದ್ದು 1500 ವರ್ಷಗಳ ಹಿಂದೆ. ಭಾರತದ ಯಾರೂ ಹೊರಗಿನವರಲ್ಲ‌. ನಾವೆಲ್ಲರೂ ಈ ದೇಶಕ್ಕೆ ಸೇರಿದವರು, ಭಾರತದ ಮುಸ್ಲಿಮರು ಮೂಲತಃ ಹಿಂದೂಗಳು, ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಧೋಡಾ ಜಿಲ್ಲೆಯಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಗುಲಾಂ ನಬಿ ಆಜಾದ್ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮಾಜಿ ನಾಯಕನ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. 

ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ. ಕೇವಲ 10-20 ಮುಸ್ಲಿಮರು ಮೊಘಲ್ ಸೈನ್ಯದ ಭಾಗವಾಗಿ ಭಾರತಕ್ಕೆ ಬಂದರು. ಉಳಿದವರೆಲ್ಲ ಮತಾಂತರಗೊಂಡವರು. 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನೂ ಇರಲಿಲ್ಲ, ಇಲ್ಲಿನ ಕಾಶ್ಮೀರಿ ಪಂಡಿತರೇ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ. 

ಎಲ್ಲರೂ ಹಿಂದೂ ಧರ್ಮದಲ್ಲಿಯೇ ಜನಿಸಿದವರು. ಹಾಗಾಗಿ, ನಾವೆಲ್ಲ ಒಟ್ಟಾಗಿ ಹಿಂದೂ, ಮುಸ್ಲಿಂ, ರಜಪೂತ, ದಲಿತ, ಕಾಶ್ಮೀರಿ, ಗುಜ್ಜರ್, ಎಲ್ಲರೂ ಒಗ್ಗೂಡಿ ಕಾಶ್ಮೀರವನ್ನು ನಮ್ಮೆಲ್ಲರ ಮನೆಯಾಗಿಸಬೇಕು. ಇದು ನಮ್ಮ ಮನೆ, ಯಾರೂ ಹೊರಗಿನಿಂದ ಬಂದವರಲ್ಲ. ನಾವೆಲ್ಲರೂ ಈ ಮಣ್ಣಿನಲ್ಲಿ ಹುಟ್ಟಿದ್ದೇವೆ ಮತ್ತು ಇಲ್ಲಿಯೇ ಸಾಯುತ್ತೇವೆ ಎಂದೂ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ನಾನು ಸಂಸತ್ತಿನಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಅದು ನಿಮಗೆ ತಲುಪಲಿಲ್ಲ. ಕೆಲವರು ಮುಸ್ಲಿಮರು ಹೊರಗಿನಿಂದ ಬಂದವರು ಎಂದು ಹೇಳುತ್ತಾರೆ. ಬಿಜೆಪಿ ಮುಖಂಡರ ಮಾತಿಗೆ, ನಾನು ಹೊರಗಿನಿಂದ ಬಂದವನಲ್ಲ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

Former Congress leader Ghulam Nabi Azad on Wednesday said that everyone “was born a Hindu” in this country, adding that Islam emerged around 1,500 years ago, while Hinduism is deeply ancient.