ಬ್ರೇಕಿಂಗ್ ನ್ಯೂಸ್
04-08-23 08:18 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 4: ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿನಲ್ಲಿ ಮಧ್ಯ ಪ್ರವೇಶ ಮಾಡಲು ಬಯಸುವುದಿಲ್ಲ ಎಂದು ಮುಖ್ಯ ನ್ಯಾಯಾಧೀಶ ಚಂಡ್ರಚೂಡ್ ಅವರಿದ್ದ ಪೀಠ ಹೇಳಿದೆ.
ಇದೇ ವೇಳೆ, ವಾರಣಾಸಿ ಕೋರ್ಟ್ ಆದೇಶದಂತೆ 30 ಮಂದಿಯಿರುವ ಎಎಸ್ಐ ಇಲಾಖೆಯ ಅಧಿಕಾರಿಗಳ ತಂಡ ಜ್ಞಾನವಾಪಿ ಮಸೀದಿಯಲ್ಲಿ ಬಿಗಿ ಭದ್ರತೆಯ ನಡುವೆ ಸಮೀಕ್ಷೆ ಕಾರ್ಯ ಆರಂಭಿಸಿದೆ. ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿರುವ ವಿವಾದಿತ ಜ್ಞಾನವಾಪಿ ಮಸೀದಿಯನ್ನು ದೇಗುಲ ಒಡೆದು ಕಟ್ಟಲಾಗಿತ್ತು ಎಂದು ಹಿಂದು ಪರ ವಕೀಲರು ವಾದಿಸಿದ್ದರು. ಅದರಂತೆ, ಮಸೀದಿ ಒಳಗೆ ದೇಗುಲದ ಕುರುಹುಗಳಿವೆಯೇ ಎನ್ನುವ ಬಗ್ಗೆ ಸಮೀಕ್ಷೆ ನಡೆಸಲು ವಾರಣಾಸಿ ಜಿಲ್ಲಾ ಕೋರ್ಟ್ ಆದೇಶ ಮಾಡಿತ್ತು.
ವಾರಣಾಸಿ ಕೋರ್ಟ್ ನೀಡಿದ್ದ ಸಮೀಕ್ಷೆ ಆದೇಶಕ್ಕೆ ತಡೆ ನೀಡುವಂತೆ ಅಲಹಾಬಾದ್ ಹೈಕೋರ್ಟಿಗೆ ಮಸೀದಿ ಕಮಿಟಿ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆಯಷ್ಟೇ ಕೋರ್ಟ್ ವಜಾಗೊಳಿಸಿತ್ತು. ಅಲ್ಲದೆ, ಎಎಸ್ಐ ನಡೆಸಲು ಉದ್ದೇಶಿಸಿರುವ ವೈಜ್ಞಾನಿಕ ಸರ್ವೆಗೆ ಅನುಮತಿ ನೀಡಿತ್ತು. ಆದರೆ, ಯಾವುದೇ ಕಾರಣಕ್ಕೆ ಉತ್ಖನನ ನಡೆಸುವುದಾಗಲೀ, ಮಸೀದಿಯ ಕಟ್ಟಡಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡಬಾರದು ಎಂದು ಷರತ್ತು ವಿಧಿಸಿತ್ತು. ಇದೇ ರೀತಿಯ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಮಸೀದಿಗೆ ಧಕ್ಕೆಯಾಗದ ರೀತಿ ವೈಜ್ಞಾನಿಕ ಸರ್ವೆ ನಡೆಸುವುದಕ್ಕೆ ಅಡ್ಡಿಯೇಕೆ ಮಾಡಬೇಕು. ಇದರಿಂದ ಎರಡೂ ಕಡೆಗೆ ಸಾಕ್ಷ್ಯ ಸಿಗುವುದಲ್ಲವೇ ಎಂದು ನ್ಯಾಯಾಧೀಶರು ಮಸೀದಿ ಕಮಿಟಿ ವಕೀಲರಲ್ಲಿ ಪ್ರಶ್ನೆ ಮಾಡಿದ್ದಾರೆ.
ಮಸೀದಿ ಕಟ್ಟಡದ ಮಾದರಿ, ಅದು ಕಟ್ಟಲ್ಪಟ್ಟ ಕಾಲಾವಧಿ ಇನ್ನಿತರ ಎಲ್ಲ ಅಂಶಗಳನ್ನು ಸರ್ವೇ ತಂಡ ದಾಖಲಿಸಲಿದೆ. ಅಲ್ಲದೆ, ಸಂಪೂರ್ಣ ಸರ್ವೇ ಕಾರ್ಯ ವಿಡಿಯೋ ಚಿತ್ರೀಕರಣ ಆಗಲಿದೆ. ಮಸೀದಿ ಕಮಿಟಿ ಪರವಾಗಿ ಸುಪ್ರೀಂ ಕೋರ್ಟಿಗೆ ಹಾಜರಾಗಿದ್ದ ಹಿರಿಯ ವಕೀಲ ಹಝೀಫಾ ಅಹ್ಮದಿ, ಇತಿಹಾಸವನ್ನು ಅಗೆಯುವುದರಿಂದ ಹಳೆಯ ಕಾಲದ ಗಾಯಗಳನ್ನು ಕೆದಕಿದಂತೆ. ಅದರಿಂದ ಇತಿಹಾಸದಲ್ಲಾದ ಗಾಯಗಳು ಮತ್ತೆ ತೆರೆದುಕೊಳ್ಳಲಿದೆ. ಇದು 1991ರ ಆರಾಧನಾ ಕಾಯ್ದೆಯನ್ನು ಉಲ್ಲಂಘಿಸಿದಂತೆ ಮತ್ತು ಜಾತ್ಯತೀತ ತತ್ವಗಳಿಗೆ ಧಕ್ಕೆ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ನಾವು ಮಧ್ಯ ಪ್ರವೇಶ ಮಾಡುವುದು ಸರಿಯಾಗಲ್ಲ. ನೀವು ಎಲ್ಲ ರೀತಿಯ ಮಧ್ಯಂತರ ಆದೇಶಗಳನ್ನು ಮೇಲ್ಮನವಿ ಹೋಗುವುದಕ್ಕೆ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ತಂಡ ಹೇಳಿದ್ದು, ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದೆ.
The Supreme Court on Friday gave a green signal and allowed the Archaeological Survey of India (ASI) to conduct its survey at the Gyanvapi Mosque site and refused to interfere with the previous order by the Varanasi High Court. Earlier today, a 30-member team of the ASI entered the Gyanvapi Mosque complex to conduct a survey in order to determine if the structure was built over a temple. Tight security has been deployed around the mosque and the adjoining Kashi Vishwanath mandir complex in view of the survey.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 12:54 pm
Mangalore Correspondent
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
Mangalore, Bantwal Accident, Melroy D’Sa: ಬಂಟ...
16-04-25 10:58 pm
18-04-25 08:14 pm
HK News Desk
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm
Sullia, Drugs, Mangalore, Ccb Police; ದೆಹಲಿಯಿ...
17-04-25 11:39 am