ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ;  2 ವರ್ಷ ಜೈಲು ಶಿಕ್ಷೆಗೆ 'ಸುಪ್ರೀಂ' ಮಧ್ಯಂತರ ತಡೆ

04-08-23 06:14 pm       HK News Desk   ದೇಶ - ವಿದೇಶ

'ಮೋದಿ ಸರ್‌ನೇಮ್' ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು ವಿಧಿಸಿರುವ ಶಿಕ್ಷೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದೆ. ಇದರಿಂದ ರಾಹುಲ್ ಗಾಂಧಿ ಅವರು ಸಂಸದ ಸ್ಥಾನವನ್ನು ಮರಳಿ ಪಡೆಯಲಿದ್ದಾರೆ.

ಹೊಸದಿಲ್ಲಿ, ಆಗಸ್ಟ್ 4: 'ಮೋದಿ ಸರ್‌ನೇಮ್' ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು ವಿಧಿಸಿರುವ ಶಿಕ್ಷೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದೆ. ಇದರಿಂದ ರಾಹುಲ್ ಗಾಂಧಿ ಅವರು ಸಂಸದ ಸ್ಥಾನವನ್ನು ಮರಳಿ ಪಡೆಯಲಿದ್ದಾರೆ.

ಮೋದಿ ಸರ್‌ನೇಮ್‌ನವರೆಲ್ಲ ಕಳ್ಳರು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಕೆಳ ನ್ಯಾಯಾಲಯ ನೀಡಿದ್ದ ಎರಡು ವರ್ಷಗಳ ಶಿಕ್ಷೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗ ಆ ಶಿಕ್ಷೆಗೆ ತಡೆ ಬಂದಿರುವುದರಿಂದ ರಾಹುಲ್ ಗಾಂಧಿ ಅವರು ಕಳೆದುಕೊಂಡಿದ್ದ ಸಂಸತ್ ಸದಸ್ಯತ್ವ ವಾಪಸ್ ಸಿಕ್ಕಂತಾಗಿದೆ. ಅವರು ಪ್ರಸ್ತುತ ನಡೆಯುತ್ತಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ದೊರಕಿದೆ. ಅಲ್ಲದೆ, ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಆಡ್ಡಿ ಕೂಡ ನಿವಾರಣೆಯಾಗಿದೆ.

ಅರ್ಜಿದಾರರು (ರಾಹುಲ್ ಗಾಂಧಿ) ನೀಡಿರುವ ಹೇಳಿಕೆ ಉತ್ತಮ ಅಭಿರುಚಿಯಿಂದ ಕೂಡಿಲ್ಲ ಎಂಬುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್, ಮುಂದೆ ಭಾಷಣಗಳನ್ನು ಮಾಡುವಾಗ ಅರ್ಜಿದಾರರು ಹೆಚ್ಚು ಜಾಗರೂಕತೆಯಿಂದ ಇರಬೇಕು ಎಂದು ಸೂಚನೆ ನೀಡಿದೆ.

ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಗರಿಷ್ಠ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯು ಒಂದೇ ಒಂದು ದಿನ ಕಡಿಮೆಯಾಗಿದ್ದರೂ, ಅವರು ಲೋಕಸಭಾ ಸದಸ್ಯತ್ವದ ಅನರ್ಹತೆಗೆ ಒಳಗಾಗುತ್ತಿರಲಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಗಮನಿಸಿತು.

ಅನರ್ಹತೆಯ ಕವಲುಗಳು ವ್ಯಕ್ತಿಯ ಹಕ್ಕುಗಳಿಗೆ ಮಾತ್ರವಲ್ಲದೆ, ಮತದಾರರ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ" ಎಂದು ಕೋರ್ಟ್ ಹೇಳಿದೆ. ರಾಹುಲ್ ಗಾಂಧಿ ಅವರಿಗೆ ಖುಲಾಸೆಗೊಳ್ಳುವುದಕ್ಕೂ ಮುನ್ನ ಇರುವ ಕೊನೆಯ ಅವಕಾಶವಿದು. ಇದರಿಂದ ಅವರು ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಬಹುದು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಅವರ ಪರ ವಕೀಲರ ಅಭಿಷೇಕ್ ಮನು ಸಿಂಘ್ವಿ ಹೇಳಿದರು. ಹೈಕೋರ್ಟ್ ತನ್ನ ತೀರ್ಪನ್ನು 66 ದಿನಗಳವರೆಗೆ ಕಾಯ್ದಿರಿಸಿತ್ತು. ಪ್ರಕರಣದಲ್ಲಿ ಶಿಕ್ಷೆಯ ಕಾರಣದಿಂದ ರಾಹುಲ್ ಗಾಂಧಿ ಅವರು ಎರಡು ಸಂಸತ್ ಅಧಿವೇಶನಗಳನ್ನು ತಪ್ಪಿಸಿಕೊಳ್ಳುವಂತಾಯಿತು ಎಂದು ಸಿಂಘ್ವಿ ಆರೋಪಿಸಿದರು.

ಗರಿಷ್ಠ ಶಿಕ್ಷೆ ವಿಧಿಸಲು ವಿಚಾರಣಾ ನ್ಯಾಯಾಧೀಶರು ಯಾವ ಕಾರಣವನ್ನೂ ನೀಡಿಲ್ಲ. ಅಂತಿಮ ತೀರ್ಪು ಬಾಕಿ ಇರುವವರೆಗೂ ಶಿಕ್ಷೆಯ ಆದೇಶವನ್ನು ತಡೆಹಿಡಿಯುವುದು ಅಗತ್ಯವಾಗಿದೆ" ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯ್, ಪಿಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

The Supreme Court on Friday stayed the conviction of Congress leader Rahul Gandhi in the defamation case against him for alleged remarks against the Modi community, which had led to his disqualification as Lok Sabha MP.  A bench of Justices BR Gavai, PS Narasimha and PV Sanjay Kumar, which heard Gandhi’s plea challenging the Gujarat High Court order refusing to stay the conviction, noted that the trial court had not given reasons for awarding the maximum punishment of two years to the Congress leader.