ಜ್ಞಾನವಾಪಿಯನ್ನ ಮಸೀದಿಯೆಂದು ಹೇಗೆ ಹೇಳೋದು ? ಮಸೀದಿಯಲ್ಲಿ ತ್ರಿಶೂಲ, ಶಿವಲಿಂಗ ಇರುತ್ತದೆಯೇ ? ಕಿಡಿ ಹೊತ್ತಿಸಿದ ಯೋಗಿ ಮಾತು 

01-08-23 11:52 am       HK News Desk   ದೇಶ - ವಿದೇಶ

ಜ್ಞಾನವಾಪಿ ವಿವಾದಕ್ಕೆ ಸೌಹಾರ್ದ ಪರಿಹಾರ ಕಂಡುಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ. ಜ್ಞಾನವಾಪಿ ಒಳಗೆ ತ್ರಿಶೂಲವಿದೆ, ಜ್ಯೋತಿರ್ಲಿಂಗ, ದೈವ ಪ್ರತಿಮೆಗಳನ್ನು ಕಾಣಬಹುದು. ಆದರೂ ಹಿಂದೂಗಳು ಈ ಪ್ರತಿಮೆಗಳನ್ನು ಇಟ್ಟಿಲ್ಲ. ಇದನ್ನು ಜ್ಞಾನವಾಪಿ ಮಸೀದಿ ಎಂದು ಹೇಳಿದರೆ ವಿವಾದವಾಗುತ್ತದೆ.

ಲಕ್ನೋ, ಆಗಸ್ಟ್ 1: ಜ್ಞಾನವಾಪಿ ವಿವಾದಕ್ಕೆ ಸೌಹಾರ್ದ ಪರಿಹಾರ ಕಂಡುಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ. ಜ್ಞಾನವಾಪಿ ಒಳಗೆ ತ್ರಿಶೂಲವಿದೆ, ಜ್ಯೋತಿರ್ಲಿಂಗ, ದೈವ ಪ್ರತಿಮೆಗಳನ್ನು ಕಾಣಬಹುದು. ಆದರೂ ಹಿಂದೂಗಳು ಈ ಪ್ರತಿಮೆಗಳನ್ನು ಇಟ್ಟಿಲ್ಲ. ಇದನ್ನು ಜ್ಞಾನವಾಪಿ ಮಸೀದಿ ಎಂದು ಹೇಳಿದರೆ ವಿವಾದವಾಗುತ್ತದೆ. ಮಸೀದಿ ಎಂದು ಹೇಗೆ ಕರೆಯಲು ಸಾಧ್ಯ ಎಂದು ಸಿಎಂ ಯೋಗಿ ಹೇಳಿದ್ದಾರೆ.

ಮುಸ್ಲಿಂ ಸಮಾಜದಿಂದ ಚಾರಿತ್ರಿಕ ಪ್ರಮಾದ ನಡೆದಿದ್ದು, ಅದನ್ನು ಬಗೆಹರಿಸಲು ಮುಸ್ಲಿಂ ಸಮಾಜದ ಪ್ರತಿವಾದಿಗಳು ಮುಂದಾಗಬೇಕು. ಜ್ಞಾನವಾಪಿ ಮಸೀದಿಯಾಗಿದ್ದರೆ ಅಲ್ಲಿ ತ್ರಿಶೂಲ ಏಕೆ ಇದೆ? ಎಂದು ಪ್ರಶ್ನಿಸಿದ್ದಾರೆ.

Supreme Court lawyers as High Court judges - iPleaders

ಸಮೀಕ್ಷೆ ಕುರಿತು ಆಗಸ್ಟ್​ 3ಕ್ಕೆ ತೀರ್ಪು

ವಿವಾದಿತ ಜ್ಞಾನವಾಪಿ ಮಸೀದಿಯ ಎಎಸ್‌ಐ ಸಮೀಕ್ಷೆ ವಿಚಾರದಲ್ಲಿ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಅವರ ಪ್ರತಿಕ್ರಿಯೆ ಮುನ್ನೆಲೆಗೆ ಬಂದಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣದ ವಿವಾದಿತ ವಾಜುಖಾನಾ ಭಾಗವನ್ನು ಹೊರತುಪಡಿಸಿ ಎಲ್ಲಾ ಪ್ರದೇಶಗಳ ಎಎಸ್‌ಐ ಸಮೀಕ್ಷೆಗೆ ಆದೇಶಿಸಿತ್ತು. ಆದೇಶದ ವಿರುದ್ಧ ಮಸೀದಿ ಸಮಿತಿ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಸರ್ವೆಗೆ ತಡೆ ಹಾಕಿದ್ದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಿತ್ತು. ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಇದರ ತೀರ್ಪನ್ನು ಕಾಯ್ದಿರಿಸಿದ್ದು ಆಗಸ್ಟ್ ಮೊದಲ ವಾರದಲ್ಲಿ ತೀರ್ಪು ಬರುವ ಸಾಧ್ಯತೆಯಿದೆ. 

ಎಎಸ್‌ಐ ಸಮೀಕ್ಷೆ ಕುರಿತು ತೀರ್ಪು ಶೀಘ್ರ ಹೊರಬೀಳಲಿದ್ದು, ಮಸೀದಿಯಲ್ಲಿ ಸಮೀಕ್ಷೆ ನಡೆಯಬೇಕೆ? ಅಥವಾ ಬೇಡವೇ ಎನ್ನುವುದನ್ನ ನ್ಯಾಯಾಲಯ ಶೀಘ್ರದಲ್ಲೇ ನಿರ್ಧರಿಸಲಿದೆ. ಸರ್ವೆ ಕಾರ್ಯ ನಡೆಸಬಾರದು ಎಂದು ಮಸೀದಿ ಸಮಿತಿ ನ್ಯಾಯಾಲಯದಲ್ಲಿ ವಾದಿಸಿದೆ. 

ಜ್ಞಾನವಾಪಿ ಮಸೀದಿ ವಿವಾದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಹೇಳಿಕೆ ನೀಡಿದ್ದು, ಜ್ಞಾನವಾಪಿ ಗೋಡೆಗಳೇ ಕೂಗಿ ಹೇಳುತ್ತಿವೆ. ಅಲ್ಲಿನ ಪರಿಸ್ಥಿತಿಯನ್ನು ತೋರಿಸುತ್ತಿದೆ. ಜ್ಞಾನವಾಪಿ ವಿಚಾರದಲ್ಲಿ ಐತಿಹಾಸಿಕ ಪ್ರಮಾದ ನಡೆದಿದೆ. ಆದುದರಿಂದ ಅದನ್ನು ಮಸೀದಿ ಎಂದು ಕರೆಯುವುದು ತಪ್ಪಾಗುತ್ತದೆ ಎಂದಿದ್ದಾರೆ.

What is 'trishul' doing inside Gyanvapi mosque, questions Adityanath, asks  Muslim side to rectify 'historic blunder' : The Tribune India

ಮಸೀದಿ ಒಳಗೆ ತ್ರಿಶೂಲ ಏಕಿದೆ?

ಅಲ್ಲದೆ ಅದು ಮಸೀದಿಯಾದರೆ, ದೇವರು ದೃಷ್ಟಿ ಕೊಟ್ಟಿರುವ ಯಾವುದೇ ವ್ಯಕ್ತಿಯೂ ಜ್ಞಾನವಾಪಿ ಮಸೀದಿ ಆವರಣದಲ್ಲಿ ತ್ರಿಶೂಲವನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಮಸೀದಿ ಒಳಗೆ ತ್ರಿಶೂಲ ಏಕೆ ಇದೆ? ನಾವಂತೂ ಮಸೀದಿ ಒಳಗೆ ತ್ರಿಶೂಲ ಇಟ್ಟಿಲ್ಲ. ಇನ್ನು ಈ ಮಸೀದಿ ಆವರಣದಲ್ಲಿ ಜ್ಯೋತಿರ್ಲಿಂಗ, ದೈವ ಪ್ರತಿಮೆಗಳೂ ಇವೆ. ಈ ತಪ್ಪಿನ ಬಗ್ಗೆ ಮುಸ್ಲಿಂ ಸಮುದಾಯದಿಂದಲೇ ಪ್ರಸ್ತಾವನೆ ಬರಬೇಕಿದೆ ಎಂದಿದ್ದಾರೆ.

Uttar Pradesh Chief Minister Yogi Adityanath spoke about the Gyanvapi mosque case and asked what a trishul (trident) was doing on the mosque premises. He said that the Muslim petitioners should come forward with a proposal to fix a "historical blunder". The remarks came days after the Allahabad High Court reserved its verdict till August 3 on a plea against a district court order directing the Archaeological Survey of India (ASI) to conduct a survey to determine if the Gyanvapi mosque in Varanasi was built upon a temple.