ಬ್ರೇಕಿಂಗ್ ನ್ಯೂಸ್
31-07-23 03:01 pm HK News Desk ದೇಶ - ವಿದೇಶ
ಹೊಸ ದಿಲ್ಲಿ, ಜುಲೈ 31: ಬೇಹುಗಾರಿಕೆ, ದೇಶ ದ್ರೋಹ ಆಪಾದನೆಯ ಮೇರೆಗೆ ಬಂಧಿತರಾಗಿರುವ ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರು ಪಾಕಿಸ್ತಾನ ಮೂಲದ ಯುವತಿಯ ಮುಖವಾಡದಲ್ಲಿ 'ಐಎಸ್‌ಐ ಗೂಢಚಾರಿ' ಜತೆಗೆ ನಡೆಸಿದ ವಾಟ್ಸ್ ಆ್ಯಪ್ ಚಾಟ್‌ಗಳನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ಪಡೆ (ಎಟಿಎಸ್) ವಿಸ್ತೃತವಾಗಿ ಪರಿಶೀಲಿಸಿದೆ. ಪಾಕಿಸ್ತಾವು ದೇಶೀಯ ಕ್ಷಿಪಣಿ 'ಬ್ರಹ್ಮೋಸ್' ಬಗ್ಗೆ ವಿವರಗಳನ್ನು ಕಲೆ ಹಾಕಲು ತುದಿಗಾಲಲ್ಲಿ ನಿಂತಿದೆ ಎಂದು ತಿಳಿದು ಬಂದಿದೆ.
ಬ್ರಹ್ಮೋಸ್ ಕ್ಷಿಪಣಿ ಯೋಜನೆಯ ಕುರಿತ ಅತ್ಯಂತ ರಹಸ್ಯ ದಾಖಲೆಗಳನ್ನು ತೋರಿಸುವಂತೆ ಪಾಕಿಸ್ತಾನಿ ಗುಪ್ತಚರ ಮಹಿಳೆ (ಐಎಸ್‌ಐ ಏಜೆಂಟ್) ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರಿಗೆ ಹಲವು ಬಾರಿ ಒತ್ತಾಯಿಸಿದ್ದಳು ಎನ್ನುವುದು ಎಟಿಎಸ್ ತನಿಖೆಯಲ್ಲಿ ಬಯಲಾಗಿದೆ.
ಪಾಕ್ ಏಜೆಂಟ್ ತನ್ನನ್ನು ಝಾರಾ ದಾಸ್ ಗುಪ್ತಾ ಎಂದು ಗುರುತಿಸಿಕೊಂಡಿದ್ದಳು. ಭಾರತದಲ್ಲಿನ ವಿವಿಧ ಡಿಆರ್‌ಡಿಒ ಮತ್ತು ರಕ್ಷಣಾ ಯೋಜನೆಗಳ ಬಗ್ಗೆ ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರಿಂದ ಗೌಪ್ಯ ಮಾಹಿತಿಯನ್ನು ಹೊರ ತೆಗೆಯಲು ಝಾರಾ ದಾಸ್ ಗುಪ್ತಾ ಬಯಸಿದ್ದಳು. ತನ್ನ ಬಳಿ ಇದ್ದ ಗೌಪ್ಯ ಮಾಹಿತಿಯನ್ನು ಆಕೆಯ ಜತೆ ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಹಂಚಿಕೊಂಡಿದ್ದಾರೆ ಎಂದು 1,837 ಪುಟಗಳ ಆರೋಪ ಪಟ್ಟಿಯನ್ನು ಪುಣೆಯ ವಿಶೇಷ ನ್ಯಾಯಾಲಯಕ್ಕೆ ಎಟಿಎಸ್ ಅಧಿಕಾರಿಗಳು ಸಲ್ಲಿಸಿದ್ದಾರೆ.
ಚಾರ್ಚ್ ಶೀಟ್‌ನ ಪ್ರಕಾರ ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಹಾಗೂ ಝಾರಾ ದಾಸ್ ಗುಪ್ತಾ ಇಬ್ಬರೂ ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ಚಾಟ್ ಮಾಡಿದ್ದಾರೆ. 'ಬೇಬಿ, ಅಪಾಯಕಾರಿ ಬ್ರಹ್ಮೋಸ್ ನಿಮ್ಮ ಆವಿಷ್ಕಾರ ಅಲ್ವೇ?' ಎಂದು ಝಾರಾ ದಾಸ್ ಗುಪ್ತಾ ಕೇಳಿದ್ದಳು. ಅದಕ್ಕೆ ಪ್ರತಿಯಾಗಿ, 'ನನ್ನ ಬಳಿ ಎಲ್ಲಾ ಬ್ರಹ್ಮೋಸ್ ಆವೃತ್ತಿಗಳ ಆರಂಭಿಕ ವಿನ್ಯಾಸ ಇದೆ' ಎಂದು ಕುರುಲ್ಕರ್ ಉತ್ತರಿಸಿದ್ದಾರೆ.
ನಾನು ಕ್ಷಿಪಣಿ ದಾಖಲೆಗಳನ್ನು ವಾಟ್ಸ್ ಆ್ಯಪ್ ಅಥವಾ ಮೇಲ್‌ನಲ್ಲಿ ಕಳುಹಿಸಲು ಸಾಧ್ಯವಿಲ್ಲ. ಅದು ತುಂಬಾ ರಹಸ್ಯವಾಗಿದೆ. ನಾನು ಅದನ್ನು ಪತ್ತೆ ಹಚ್ಚಿ ಸಿದ್ಧವಾಗಿಡುತ್ತೇನೆ. ನೀವು ಇಲ್ಲಿ ಬಂದಾಗ ತೋರಿಸುತ್ತೇನೆ' ಎಂದು ಪಾಕ್ ಐಎಸ್‌ಐ ಏಜೆಂಟ್ ಝಾರಾ ದಾಸ್ ಗುಪ್ತಾಗೆ ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರದೀಪ್ ಕುರುಲ್ಕರ್ ತಿಳಿಸಿದ್ದಾರೆ ಎನ್ನಲಾಗಿದೆ. ಬ್ರಹ್ಮೋಸ್ ಜತೆಗೆ ಅಗ್ನಿ - 6, ರುಸ್ತುಮ್ (ಡ್ರೋನ್), ರಫೇಲ್ ಯುದ್ದ ವಿಮಾನ ಹಾಗೂ ಆಕಾಶ್ ಕ್ಷಿಪಣಿಗಳ ಬಗ್ಗೆ ಕೂಡ ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಚಾಟ್ ಮಾಡಿರುವುದು ಎಟಿಎಸ್ ತನಿಖೆ ವೇಳೆ ತಿಳಿದು ಬಂದಿದೆ.
ವಿದೇಶೀ ಗುಪ್ತಚರ ಸಂಸ್ಥೆಗಳ ಗಾಳಕ್ಕೆ ಬಿದ್ದಿದ್ದ ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರದೀಪ್ ಕುರುಲ್ಕರ್, ಹನಿ ಟ್ರ್ಯಾಪ್‌ಗೆ ಒಳಗಾಗಿ ದೇಶದ ಪ್ರತಿಷ್ಠಿತ ಹಾಗೂ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಗಂಭೀರ ಪ್ರಕರಣ ಇದಾಗಿದೆ.
“During the investigation into the Defence Research and Development Organisation (DRDO) espionage case, the Maharashtra Anti-Terrorism Squad (ATS) found that scientist Pradeep Kurulkar had expressed his intention to show a “highly classified” report on the BrahMos missile project with a female Pakistani Intelligence Operative (PIO) named “Zara Dasgupta” when they meet in person.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm