ಭಾರತದಲ್ಲಿ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ; ಪಾಸ್‌ವರ್ಡ್‌ ಹಂಚಿಕೊಳ್ಳುವುದು ಇಂದಿನಿಂದ ಬಂದ್, ಬಳಕೆದಾರರು ಏನು ಮಾಡಬೇಕು ?

20-07-23 10:36 pm       HK News Desk   ದೇಶ - ವಿದೇಶ

ಭಾರತದಲ್ಲಿ ನೆಟ್‌ಫ್ಲಿಕ್ಸ್ ಬಳಕೆದಾರರು ಇನ್ನು ಪಾಸ್‌ವರ್ಡ್ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ನೆಟ್‌ಫ್ಲಿಕ್ಸ್ ಇಂಡಿಯಾ ಘೋಷಿಸಿದೆ. ಚಂದಾದಾರರ ಮನೆಯ ಒಬ್ಬ ಸದಸ್ಯರು ಮಾತ್ರ ಖಾತೆಯನ್ನು ಬಳಸಲು ಅವಕಾಶ ನೀಡಿದೆ.

ಭಾರತದಲ್ಲಿ ನೆಟ್‌ಫ್ಲಿಕ್ಸ್ ಬಳಕೆದಾರರು ಇನ್ನು ಪಾಸ್‌ವರ್ಡ್ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ನೆಟ್‌ಫ್ಲಿಕ್ಸ್ ಇಂಡಿಯಾ ಘೋಷಿಸಿದೆ. ಚಂದಾದಾರರ ಮನೆಯ ಒಬ್ಬ ಸದಸ್ಯರು ಮಾತ್ರ ಖಾತೆಯನ್ನು ಬಳಸಲು ಅವಕಾಶ ನೀಡಿದೆ.

ಕಳೆದ ವರ್ಷ ಕಂಪನಿಯ ಆದಾಯ ಕುಸಿತ ಕಂಡಿದ್ದು, ಆದಾಯವನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದು, ಹೊಸ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದೆ. ತಮ್ಮ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಇತರರ ಜೊತೆ ಪಾಸ್‌ವರ್ಡ್ ಹಂಚಿಕೊಳ್ಳುವುದಕ್ಕೆ ತಡೆಹಾಕಿದೆ. ಮೇ ತಿಂಗಳಲ್ಲಿ ಈ ನಿಯಮವನ್ನು ಜಾಗತಿಕವಾಗಿ ಜಾರಿ ಮಾಡಿತ್ತು, ಈಗ ಭಾರತದಲ್ಲೂ ಹೊಸ ನಿಯಮ ಅನ್ವಯವಾಗುವುದಾಗಿ ಹೇಳಿದೆ.

ಆ ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರೂ ಅವರು ಎಲ್ಲಿದ್ದರೂ ನೆಟ್‌ಫ್ಲಿಕ್ಸ್ ಅನ್ನು ಬಳಸಬಹುದು, ಮನೆಯಲ್ಲಿ, ಪ್ರಯಾಣದಲ್ಲಿರುವಾಗ, ರಜಾದಿನಗಳಲ್ಲಿ, ಮತ್ತು ಪ್ರೊಫೈಲ್ ಅನ್ನು ವರ್ಗಾಯಿಸಿ, ಪ್ರವೇಶ ಸಾಧನಗಳನ್ನು ನಿರ್ವಹಿಸುವಂತಹ ಹೊಸ ವೈಶಿಷ್ಟ್ಯಗಳ ಲಾಭವನ್ನು ಪಡೆದುಕೊಳ್ಳಬಹುದು" ಎಂದು ನೆಟ್‌ಫ್ಲಿಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ತಮ್ಮ ಮನೆಯ ಹೊರಗೆ ನೆಟ್‌ಫ್ಲಿಕ್ಸ್ ಅನ್ನು ಹಂಚಿಕೊಳ್ಳುತ್ತಿರುವ ಗ್ರಾಹಕರಿಗೆ ಇಮೇಲ್‌ಗಳ ವಿತರಣೆಯನ್ನು ಪ್ರಾರಂಭಿಸಿದೆ ಎಂದು ಕಂಪನಿ ಹೇಳಿದೆ.

ಮನೆಯ ಸದಸ್ಯರಿಗೆ ಮಾತ್ರ ಅವಕಾಶ ಸದಸ್ಯರು ಮನೆಯಲ್ಲಿ, ಪ್ರಯಾಣದಲ್ಲಿರುವಾಗ, ರಜಾದಿನಗಳಲ್ಲಿ ನೆಟ್‌ಫ್ಲಿಕ್ಸ್ ಅನ್ನು ಬಳಸಬಹುದು ಮತ್ತು ಪ್ರೊಫೈಲ್ ವರ್ಗಾವಣೆ ಲಾಭವನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.

Netflix Announces Free 2-Day Subscription For All, No Card Details Required  - Viral Bake

ನಮ್ಮ ಸದಸ್ಯರಿಗೆ ಅನೇಕ ಮನರಂಜನಾ ಆಯ್ಕೆಗಳಿವೆ ಎಂದು ನಮಗೆ ತಿಳಿದಿದೆ. ಅದಕ್ಕಾಗಿಯೇ ನಾವು ವಿವಿಧ ರೀತಿಯ ಹೊಸ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಹೆಚ್ಚು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ, ಆದ್ದರಿಂದ ನಿಮ್ಮ ಅಭಿರುಚಿ, ಮನಸ್ಥಿತಿ ಅಥವಾ ಭಾಷೆ ಮತ್ತು ನೀವು ಯಾರೊಂದಿಗೆ ವೀಕ್ಷಿಸುತ್ತಿದ್ದರೂ, ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಲು ಉತ್ತಮವಾದದ್ದು ಏನಾದರೂ ಇರುತ್ತದೆ" ಎಂದು ಅದು ಹೇಳಿದೆ.

ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಸಿಂಗಾಪುರ್, ಮೆಕ್ಸಿಕೋ ಮತ್ತು ಬ್ರೆಜಿಲ್‌ನಂತಹ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೆಯ ಮೇಲೆ ಮೇ ತಿಂಗಳಲ್ಲಿ ನಿರ್ಬಂಧಗಳನ್ನು ವಿಧಿಸಿದೆ.

ನೆಟ್‌ಫ್ಲಿಕ್ಸ್ ಬಳಕೆದಾರರು ಏನು ಮಾಡಬೇಕು?

ನೆಟ್‌ಫ್ಲಿಕ್ಸ್ ಖಾತೆ ಹೊಂದಿರುವವರು ತಮ್ಮ ಖಾತೆಯ ಮೂಲಕ ಯಾರೆಲ್ಲಾ ಲಾಗಿನ್ ಆಗಿದ್ದಾರೆ ಎಂಬುದನ್ನು ಮೊದಲು ಪತ್ತೆ ಮಾಡಬೇಕು. ಇದಕ್ಕಾಗಿ ಸೆಕ್ಯುರಿಟಿ ಅಂಡ್‌ ಪ್ರೈವೆಸಿ ಸೆಟ್ಟಿಂಗ್‌ನಲ್ಲಿರುವ ತಮ್ಮ ಖಾತೆಯನ್ನು ಆಯ್ಕೆ ಮಾಡಿ, ‘ಮ್ಯಾನೇಜ್‌ ಆಕ್ಸೆಸ್‌ ಅಂಡ್ ಡಿವೈಸ್’ ಅನ್ನು ಆಯ್ಕೆ ಮಾಡಬೇಕು.

ಯಾವುದಕ್ಕೆ ಅನುಮತಿ ಇಲ್ಲವೋ ಅದನ್ನು ಸೈನ್‌ಔಟ್ ಮಾಡಬೇಕು. ತಮ್ಮ ಪಾಸ್‌ವರ್ಡ್‌ ಅನ್ನು ಬದಲಿಸಬೇಕು. ಹೀಗಾಗಿಯೂ ಹೊರಗಿನವರು ಒಬ್ಬರ ಖಾತೆಯಿಂದ ನೆಟ್‌ಫ್ಲಿಕ್ಸ್ ಬಳಸಿದರೆ, ಅವರಿಗೇ ಪ್ರೊಫೈಲ್ ವರ್ಗಾವಣೆ ಆಗಲಿದೆ.

ಹಾಗಿದ್ದರೆ ನೆಟ್‌ಫ್ಲಿಕ್ಸ್ ಹೌಸ್‌ಹೋಲ್ಡ್‌ ಆಯ್ಕೆ ಹೇಗೆ?

ಒಂದೇ ಇಂಟರ್‌ನೆಟ್‌ ಸಂಪರ್ಕದಲ್ಲಿರುವ ಟಿವಿಯನ್ನು ಬಳಕೆದಾರರ ಸ್ವತ್ತು ಎಂದು ನೆಟ್‌ಫ್ಲಿಕ್ಸ್ ಪರಿಗಣಿಸುತ್ತದೆ. ಹೀಗಾಗಿ ಅಂಥ ಗ್ರಾಹಕರು ತಮ್ಮ ಟಿವಿ ಮೂಲಕ ನೆಟ್‌ಫ್ಲಿಕ್ಸ್‌ಗೆ ಸೈನ್‌ ಇನ್‌ ಆಗಬೇಕು ಎಂದು ಹೇಳಲಾಗಿದೆ.

After ending password sharing in over 100 countries in May, Netflix on Thursday announced that it is extending the crackdown to India. In a statement, the streaming giant said that a Netflix account will be restricted to members in a single household. Users in Indonesia, Croatia and Kenya will also be restrained from sharing passwords with people other than their immediate family.