ಪಾಕ್ ಬಿಟ್ಟು ಬಂದ ಸೀಮಾ ಹೈದರ್ ಬಗ್ಗೆ ಅನುಮಾನ ; ಐಎಸ್ಐ ಲಿಂಕ್ ಶಂಕೆಯಲ್ಲಿ ಉತ್ತರ ಪ್ರದೇಶ ಎಟಿಎಸ್ ಪೊಲೀಸರ ವಿಚಾರಣೆ 

19-07-23 10:41 pm       HK News Desk   ದೇಶ - ವಿದೇಶ

ಪಾಕಿಸ್ತಾನ ಬಿಟ್ಟು ಭಾರತದ ಪ್ರಿಯಕರನ ಜೊತೆ ಸೇರಲು ಬಂದಿರುವ ಸೀಮಾ ಹೈದರ್ ಉತ್ತರ ಪ್ರದೇಶ ಪೊಲೀಸರಿಗೆ ತಲೆನೋವಾಗಿದ್ದಾಳೆ.

ನವದೆಹಲಿ, ಜುಲೈ 19: ಪಾಕಿಸ್ತಾನ ಬಿಟ್ಟು ಭಾರತದ ಪ್ರಿಯಕರನ ಜೊತೆ ಸೇರಲು ಬಂದಿರುವ ಸೀಮಾ ಹೈದರ್ ಉತ್ತರ ಪ್ರದೇಶ ಪೊಲೀಸರಿಗೆ ತಲೆನೋವಾಗಿದ್ದಾಳೆ. ಪಬ್‌ಜಿ ಗೇಮ್ ಮೂಲಕ ಬೆಳೆದಿದ್ದ ಪರಿಚಯದ ಬಳಿಕ ಪಾಕಿಸ್ತಾನದ ಗಂಡನನ್ನೇ ಬಿಟ್ಟು ನಾಲ್ವರು ಮಕ್ಕಳೊಂದಿಗೆ ಸೀಮಾ ಭಾರತಕ್ಕೆ ಬಂದಿದ್ದ ಸೀಮಾ ನೋಯ್ಡಾದ ಪ್ರಿಯಕರನ ಜೊತೆ ನೆಲೆಸಿದ್ದಾಳೆ. ಆದರೆ ಸೀಮಾ ಹೈದರ್ ಅರಳು ಹುರಿದಂತೆ ಇಂಗ್ಲೀಷ್ ಮಾತನಾಡುತ್ತಾಳೆ ಎಂಬ ಮಾಹಿತಿ ಆಕೆಯ ಬಗ್ಗೆ ಸಂಶಯ ಹುಟ್ಟಿಸಿದ್ದು ಉತ್ತರ ಪ್ರದೇಶ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.‌

ಉತ್ತರ ಪ್ರದೇಶ ಪೊಲೀಸರು ವಿಚಾರಣೆ ಬಳಿಕ, ಮಹಿಳೆ ಬಳಿಯಿಂದ 4 ಮೊಬೈಲ್ ಫೋನ್, 5 ಪಾಕಿಸ್ತಾನ ಪಾಸ್‌ಪೋರ್ಟ್, 2 ವಿಡಿಯೋ ಕ್ಯಾಸೆಟ್ ವಶಪಡಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಅಧಿಕೃತ ಐದು ಪಾಸ್‌ಪೋರ್ಟ್ ಹೊಂದಿದ್ದಾಳೆ. ಇದರಲ್ಲಿ ಒಂದು ಪಾಸ್‌ಪೋರ್ಟ್ ಇನ್ನೂ ಬಳಕೆ ಮಾಡಿಲ್ಲ. ಇದರ ಜೊತೆಗೆ ಗುರುತಿನ ಚೀಟಿ ಸೇರಿದಂತೆ ಇತರ ಕೆಲವು ದಾಖಲೆಗಳನ್ನು ಸೀಮಾ ಹೈದರ್ ಬಳಿಯಿಂದ ವಶಕ್ಕೆ ಪಡೆಯಲಾಗಿದೆ. 

ಸೀಮಾ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕದಲ್ಲಿದ್ದಾಳೆ ಎಂಬ ಶಂಕೆಯ ಮೇರೆಗೆ ಎಡಿಎಸ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯ ಪ್ರಿಯಕರ ಸಚಿನ್‌ ಮೀನಾ ಹಾಗೂ ಆತನ ತಂದೆ ನೇತ್ರಪಾಲ್‌ ಸಿಂಗ್‌ನನ್ನೂ ವಿಚಾರಣೆ ನಡೆಸಲಾಗಿದೆ. ಅಕ್ರಮವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ ಮಹಿಳೆಗೆ ಆಶ್ರಯ ನೀಡಿದ ಬಗ್ಗೆ ಪ್ರಿಯಕರನ ವಿರುದ್ಧ ದೂರು ದಾಖಲಾಗಿದೆ. ಸೀಮಾ ಹೈದರ್ ಸೋದರ ಮತ್ತು ಚಿಕ್ಕಪ್ಪ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಸೀಮಾ ನಡೆ ಶಂಕೆಗೆ ಕಾರಣವಾಗಿದ್ದು ಐಎಸ್ಐ ಸೂಚನೆಯಂತೆ ಗೂಢಚಾರಿಯಾಗಿ ದೆಹಲಿಗೆ ಬಂದಿದ್ದಾಳೆಯೇ ಎನ್ನುವ ಶಂಕೆ ಹುಟ್ಟಿಸಿದೆ. ಇದೇ ಅನುಮಾನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‌

The mystery around Pakistani national Seema Ghulam Haider, who along with her four children crossed over to India via Nepal to be with her partner Sachin Meena, continues.  The Uttar Pradesh Police's Anti Terrorist Squad (ATS) grilled her and Meena for the second consecutive day for eight hours before being allowed to return home.