ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ನಿವಾಸದ ಮೇಲೆ ಇಡಿ ದಾಳಿ ; 50 ಜನರ ತಂಡದಿಂದ ತಪಾಸಣೆ, 9 ಸ್ಥಳಗಳಲ್ಲಿ ಪರಿಶೀಲನೆ

17-07-23 01:21 pm       HK News Desk   ದೇಶ - ವಿದೇಶ

ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಚೆನ್ನೈ, ಜುಲೈ 17: ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಚೆನ್ನೈನ ಸೈದಾಪೇಟ್‌ನಲ್ಲಿರುವ ಸಚಿವರ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳ ಶೋಧ ಕಾರ್ಯ ನಡೆಯುತ್ತಿದೆ. ಇದಲ್ಲದೆ ಸಚಿವ ಪೊನ್ಮುಡಿ ಪುತ್ರ ಗೌತಮ ಚಿಕಾಮಣಿ ಮನೆ ಮೇಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿಯೂ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ED raid at Tamil Nadu Higher Education minister Ponmudi's properties

ED raids nine places linked to TN Minister Ponmudi

ಬೆಳಗ್ಗೆ 7 ಗಂಟೆಯಿಂದ ಸುಮಾರು 50 ಜನರ ತಂಡ ತಪಾಸಣೆ ನಡೆಸುತ್ತಿದೆ. ಪೊನ್ಮುಡಿ ಸಂಬಂಧಿಸಿದ 9 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು. ಸೈದಾಪೇಟ್ ದಿ ನಗರ್ ಅಲೈ, ಚೆನ್ನೈನ ಪೊನ್ಮುಡಿ ಮಗನ್ ಇಲ್ಲಂ ಮತ್ತು ವಿಲ್ಲುಪುರಂ ಇಲ್ಲಂ ಸೇರಿದಂತೆ 9 ಸ್ಥಳಗಳಲ್ಲಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ದಾಳಿಯ ವೇಳೆ ಅರೆಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಪೊನ್ಮುಡಿ ಇತ್ತೀಚೆಗೆ ಎರಡು ಪ್ರಮುಖ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದರು. ತಮಿಳುನಾಡಿನ ಉನ್ನತ ಶಿಕ್ಷಣ ಸಚಿವರಾದ ಪೊನ್ಮುಡಿ ಅವರು ಇತ್ತೀಚೆಗಷ್ಟೇ ಭೂಕಬಳಿಕೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದರು. 1996 ರಿಂದ 2001 ರವರೆಗೆ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ಜಮೀನು ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

The Enforcement Directorate on Monday conducted raids at the premises of DMK leader and Tamil Nadu Higher Education Minister K Ponmudy and his MP son Gautham Sigamani in a money laundering case, official sources said. The raids are being undertaken at the premises of the father-son duo in state capital Chennai and in Villupuram, they said while the ruling DMK dubbed the action 'political vendetta.'