ಯಮುನಾ ನದಿಯಲ್ಲಿ ಇತಿಹಾಸ ಕಂಡರಿಯದ ಪ್ರವಾಹ ; ರಾಜಧಾನಿ ದೆಹಲಿಗೆ ನುಗ್ಗಿದ ಯಮುನೆ, ಸಿಎಂ ಕೇಜ್ರಿವಾಲ್ ನಿವಾಸದ ಬಳಿಗೆ ನೀರು, ಹಿಮಾಚಲದಲ್ಲಿ ಸಿಕ್ಕಿಬಿದ್ದ 25 ಸಾವಿರ ಪ್ರವಾಸಿಗರು 

13-07-23 04:14 pm       HK News Desk   ದೇಶ - ವಿದೇಶ

ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್ ಸೇರಿ ಉತ್ತರ ಭಾರತದ ಆರು ರಾಜ್ಯಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಹಿಮಾಚಲದಲ್ಲಿ ಭಾರೀ ಹಾನಿಯಾಗಿದ್ದು, 90ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ನವದೆಹಲಿ, ಜುಲೈ 13: ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್ ಸೇರಿ ಉತ್ತರ ಭಾರತದ ಆರು ರಾಜ್ಯಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಹಿಮಾಚಲದಲ್ಲಿ ಭಾರೀ ಹಾನಿಯಾಗಿದ್ದು, 90ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೂರು ಸಾವಿರ ಕೋಟಿ ರೂ.ಗೂ ಅಧಿಕ ನಷ್ಟವಾಗಿರುವ ಅಂದಾಜು ಮಾಡಲಾಗಿದೆ. 

ಯಮುನಾ ನದಿಯಲ್ಲಿ ಗುರುವಾರ ಬೆಳಗ್ಗೆ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು ಉತ್ತರ ದೆಹಲಿಯಲ್ಲಿ ಹಲವೆಡೆ ನೀರು ನಗರ ಪ್ರದೇಶಕ್ಕೆ ನುಗ್ಗಿದೆ. ಹರಿಯಾಣದ ಹತ್ತಿಕುಂಡ್‌ ಬ್ಯಾರೇಜ್‌ ತುಂಬಿದ್ದು ಹೆಚ್ಚುವರಿ ನೀರನ್ನು ಹೊರಕ್ಕೆ ಹರಿಸಿದ್ದರಿಂದ ಯಮುನಾ ನದಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. 208.46 ಮೀಟರ್‌ ಎತ್ತರದಲ್ಲಿ ಯಮುನಾ ನದಿ ಹರಿಯುತ್ತಿವುದರಿಂದ ದೆಹಲಿ ನಗರದ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ನಿವಾಸದ ಸಮೀಪಕ್ಕೂ ನೀರು ನುಗ್ಗಿ ಬಂದಿದೆ. 

ತಗ್ಗು ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸಿಎಂ ಅರವಿಂದ ಕೇಜ್ರಿವಾಲ್‌ ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ ಎರಡು ದಿನದಿಂದ ಮಳೆ ಇಲ್ಲದೇ ಇದ್ದರೂ ಯಮುನಾ ನದಿ ಉಕ್ಕಿ ಹರಿಯುತ್ತಿರುವುದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. 

ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್‌ ಪ್ರವಾಸಕ್ಕೆ ಬಂದಿದ್ದ 25 ಸಾವಿರಕ್ಕೂ ಅಧಿಕ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ರಷ್ಯಾ ಸೇರಿದಂತೆ ಹೊರ ದೇಶಗಳಿಂದಲೂ ಆಗಮಿಸಿದ್ದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

India News: At least 25 fatalities were reported Wednesday in the rain-battered northern states of Himachal Pradesh, Uttarakhand, Punjab, Haryana and Uttar Prades.