New look of Vande Bharat Express: ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕೇಸರಿ ಲುಕ್ ; ರಾಷ್ಟ್ರ ಧ್ವಜದ ತ್ರಿವರ್ಣದಿಂದ ಸ್ಫೂರ್ತಿ ಎಂದ ರೈಲ್ವೆ ಸಚಿವ

10-07-23 03:32 pm       HK News Desk   ದೇಶ - ವಿದೇಶ

ಭಾರತದಲ್ಲಿಯೇ ನಿರ್ಮಾಣವಾಗುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಹೈ ಸ್ಪೀಡ್ ರೈಲಿನ 28ನೇ ಆವೃತ್ತಿಯು ಕೇಸರಿ ಬಣ್ಣದ್ದಾಗಿರುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ, ಜುಲೈ 10: ಭಾರತದಲ್ಲಿಯೇ ನಿರ್ಮಾಣವಾಗುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಹೈ ಸ್ಪೀಡ್ ರೈಲಿನ 28ನೇ ಆವೃತ್ತಿಯು ಕೇಸರಿ ಬಣ್ಣದ್ದಾಗಿರುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಕೇಸರಿ ವರ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇನ್ನೂ ಕಾರ್ಯಾಚರಣೆಗೆ ಇಳಿದಿಲ್ಲ. ಅದು ಪ್ರಸ್ತುತ ವಂದೇ ಭಾರತ್ ರೈಲುಗಳು ತಯಾರಾಗುವ ತಮಿಳುನಾಡಿನ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ಸಿದ್ಧವಾಗಿ ನಿಂತಿದೆ. ಇದುವರೆಗಿನ ರೈಲುಗಳು ಬಿಳಿ ಹಾಗೂ ನೀಲಿ ಬಣ್ಣವನ್ನು ಹೊಂದಿದ್ದವು. ಈ ಹೊಸ ರೈಲು ಬಿಳಿ ಮತ್ತು ಕೇಸರಿ ಬಣ್ಣ ಹೊಂದಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನ 25 ರೈಲು‌ಗಳು ತಮ್ಮ ನಿಯೋಜಿತ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಎರಡು ರೈಲು‌ಗಳನ್ನು ಮೀಸಲು ಇರಿಸಲಾಗಿದೆ. 28ನೇ ರೈಲಿನ ಬಣ್ಣವನ್ನು ಪ್ರಾಯೋಗಿಕ ಆಧಾರದಲ್ಲಿ ಬದಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಪರಿಶೀಲನೆ ನಡೆಸಿದರು. ದಕ್ಷಿಣ ರೈಲ್ವೇಸ್‌ನ ಸುರಕ್ಷತಾ ಕ್ರಮಗಳನ್ನು ಪರಾಮರ್ಶಿಸಿದರು. ಜತೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿನ ಸುಧಾರಣೆಗಳ ಪರಾಮರ್ಶೆ ಸಹ ನಡೆಸಿದರು.

ತಪಾಸಣೆ ಮುಗಿಸಿದ ನಂತರ ಮಾತನಾಡಿದ ಅಶ್ವಿನಿ ವೈಷ್ಣವ್, ಸ್ವದೇಶಿ ನಿರ್ಮಿದ 28ನೇ ರೈಲಿನ ಹೊಸ ಬಣ್ಣವು ಭಾರತದ ತ್ರಿವರ್ಣ ಧ್ವಜದಿಂದ ಸ್ಫೂರ್ತಿ ಪಡೆದಿದೆ ಎಂದು ತಿಳಿಸಿದರು.

ಇದು ಮೇಕ್ ಇನ್ ಇಂಡಿಯಾದ ಪರಿಕಲ್ಪನೆ. ಅಂದರೆ, ನಮ್ಮ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿಂದ ಭಾರತದಲ್ಲಿಯೇ ವಿನ್ಯಾಸಗೊಳ್ಳುವುದು. ಹೀಗಾಗಿ ವಂದೇ ಭಾರತ್ ಕಾರ್ಯಾಚರಣೆ ಸಂದರ್ಭದಲ್ಲಿ ಎಸಿಗಳು, ಶೌಚಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ಫೀಲ್ಡ್ ಯುನಿಟ್‌ಗಳಿಂದ ಬರುವ ಅಭಿಪ್ರಾಯಗಳು ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡುವಂತಹ ಸುಧಾರಣೆಗಳನ್ನು ತರುವುದಕ್ಕೆ ಸಹಾಯವಾಗುತ್ತದೆ" ಎಂದು ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೊಸ ಸುರಕ್ಷತಾ ಫೀಚರ್, 'ಆಂಟಿ ಕ್ಲೈಂಬರ್ಸ್' ಅಥವಾ 'ಆಂಟಿ ಕ್ಲೈಂಬಿಂಗ್ ಡಿವೈಸ್' ಎಂಬುದರ ಬಗ್ಗೆ ನಾವು ಕೆಲಸ ಮಾಡುತ್ತಿದ್ದು, ಅವುಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ವಂದೇ ಭಾರತ್ ಹಾಗೂ ಇತರೆ ರೈಲುಗಳಲ್ಲಿ ಇದು ನಿರ್ದಿಷ್ಟ ಲಕ್ಷಣಗಳಲ್ಲಿ ಸೇರ್ಪಡೆಯಾಗಲಿದೆ" ಎಂದು ತಿಳಿಸಿದರು.

Railway officials have announced that the 28th rake of the Vande Bharat Express will be painted in a saffron color. Currently, the new saffron Vande Bharat Express is not yet operational and is stationed at the Integral Coach Factory (ICF) in Chennai, where the semi-high-speed trains are manufactured.