ಬ್ರೇಕಿಂಗ್ ನ್ಯೂಸ್
08-07-23 02:58 pm HK News Desk ದೇಶ - ವಿದೇಶ
ಮಲಪ್ಪುರಂ, ಜುಲೈ 8: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಣ್ಣೂರು ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದ ಮಹಿಳೆ ಮತ್ತು ಫೈನಾನ್ಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದ ಆಕೆಯ ಪತಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಲಪ್ಪುರಂ ಜಿಲ್ಲೆಯ ಮುಂಡುಪರಂಬ ಎಂಬಲ್ಲಿನ ಮೈತ್ರಿ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಸ್ ಬಿಐ ಕಣ್ಣೂರು ಶಾಖೆಯ ಮ್ಯಾನೇಜರ್ ಶೀನಾ(35), ಅವರ ಪತಿ ಮಲಪ್ಪುರಂನಲ್ಲಿ ಖಾಸಗಿ ಫೈನಾನ್ಸ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ ಸಬೀಶ್ (37) ಎರಡು ಪ್ರತ್ಯೇಕ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದರೆ, ಇಬ್ಬರು ಮಕ್ಕಳಾದ ಹರಿಗೋವಿಂದನ್ (6), ಎರಡೂವರೆ ವರ್ಷದ ಶ್ರೀವರ್ಧನ್ ಮಲಗಿದಲ್ಲೇ ಶವವಾಗಿದ್ದಾರೆ.
ಶೀನಾಗೆ ಇತ್ತೀಚೆಗಷ್ಟೇ ಕಾಸರಗೋಡು ಶಾಖೆಯಿಂದ ಕಣ್ಣೂರಿಗೆ ವರ್ಗವಾಗಿದ್ದು, ಮ್ಯಾನೇಜರ್ ಆಗಿ ಭಡ್ತಿ ಪಡೆದಿದ್ದರು. ಹಾಗಾಗಿ ಮನೆಯನ್ನು ಕಣ್ಣೂರಿಗೆ ಶಿಫ್ಟ್ ಮಾಡಲು ಬ್ಯಾಂಕಿನಲ್ಲಿ ಒಂದು ವಾರದ ರಜೆ ಪಡೆದಿದ್ದರು. ಮಲಪ್ಪುರಂನಲ್ಲಿ ಗಂಡ ಸಬೀಶ್ ಕೆಲಸ ಮಾಡುತ್ತಿದ್ದರಿಂದ ಇಲ್ಲಿ ವರೆಗೂ ಮುಂಡುಪರಂಬದಲ್ಲಿ ಫ್ಲಾಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆ ಶಿಫ್ಟ್ ಮಾಡಲೆಂದು ಬ್ಯಾಂಕಿಗೆ ರಜೆ ಹಾಕಿದ್ದ ಶೀನಾ ಗುರುವಾರ ರಾತ್ರಿಯೇ ಕಣ್ಣೂರಿನಲ್ಲಿ ಗೊತ್ತುಪಡಿಸಿದ್ದ ಮನೆಗೆ ತೆರಳುವ ಬಗ್ಗೆ ಸಂಬಂಧಿಕರಿಗೆ ತಿಳಿಸಿದ್ದರು. ಆದರೆ, ಅದೇ ರಾತ್ರಿ ನಾಲ್ವರು ಕೂಡ ನಿಗೂಢ ಸಾವಿಗೀಡಾಗಿದ್ದು, ಸಂಬಂಧಿಕರೆಲ್ಲ ದಿಗ್ಭ್ರಾಂತರಾಗಿದ್ದಾರೆ. ರಾತ್ರಿ ಆಗಿದ್ದರೂ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ಸಂಬಂಧಿಕರು ಮಲಪ್ಪುರಂ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಮೈತ್ರಿ ಕಾಲನಿಯ ಮನೆಗೆ ತೆರಳಿ ನೋಡಿದಾಗ, ಗಂಡ- ಹೆಂಡತಿ ನೇಣು ಬಿಗಿದುಕೊಂಡಿದ್ದರೆ, ಮಕ್ಕಳಿಬ್ಬರು ಒಬ್ಬ ಕೊಠಡಿ ಒಳಗಿನ ಬೆಡ್ ನಲ್ಲಿದ್ದರೆ, ಮತ್ತೊಬ್ಬ ಹೊರಗೆ ಇರಿಸಿದ್ದ ಸಣ್ಣ ಬೆಡ್ ನಲ್ಲಿ ಮಲಗಿದಲ್ಲೇ ಶವವಾಗಿದ್ದರು.
ರೋಗದ ಬಗ್ಗೆ ಚಿಂತೆಗೀಡಾಗಿದ್ದ ದಂಪತಿ
ದೊಡ್ಡ ಮಗ ಹರಿವರ್ಧನ್ ಈಗಷ್ಟೇ ಒಂದನೇ ಕ್ಲಾಸಿಗೆ ಸೇರಿದ್ದು, ಕೇಂದ್ರೀಯ ವಿದ್ಯಾಲಯದಲ್ಲಿ ಕಲಿಯುತ್ತಿದ್ದ. ಆದರೆ ಎರಡು ತಿಂಗಳ ಮೊದಲು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗುಣಪಡಿಸಲಾಗದ ರೋಗ ಇರುವುದು ಪತ್ತೆಯಾಗಿತ್ತು. ಡುಚೆನ್ ಮಸ್ಕ್ಯುಲಾರ್ ಡಿಸ್ಟ್ರೋಫಿ (Duchenne Muscular Dystropy) ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುವ ಸ್ನಾಯುಗಳಲ್ಲಿ ಬಲ ಕಳಕೊಳ್ಳುವ ರೋಗ ಇದೆಯೆಂದು ವೈದ್ಯರು ತಿಳಿಸಿದ್ದರು. ಸಣ್ಣ ಮಗುವನ್ನೂ ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದಾಗ, ಆ ಮಗುವಿಗೂ ಅದೇ ರೀತಿಯ ರೋಗ ತಗಲುವ ಸಾಧ್ಯತೆಯನ್ನು ವೈದ್ಯರು ಹೇಳಿದ್ದರು. ಇದೊಂದು ವಂಶವಾಹಿ ರೋಗವಾಗಿದ್ದು, ತಾಯಿಯ ಜೆನೆಟಿಕ್ ಸ್ಕ್ರೀನಿಂಗ್ ನಡೆಸುವ ಬಗ್ಗೆ ವೈದ್ಯರು ಸಲಹೆ ನೀಡಿದ್ದರು. ಆದರೆ, ಇದರ ನಡುವಲ್ಲೇ ಇಡೀ ಕುಟುಂಬ ಸಾವಿಗೆ ಶರಣಾಗಿದ್ದು ಮಕ್ಕಳ ರೋಗದ ಚಿಂತೆಯಿಂದಲೇ ದಂಪತಿ ದುರಂತ ತಂದುಕೊಂಡಿದ್ದಾರೆಯೇ ಎಂಬ ಶಂಕೆ ಮೂಡಿದೆ.
ಸ್ನಾಯು ಬಲಹೀನಗೊಳ್ಳುವ ವಿಚಿತ್ರ ರೋಗ
ವೈದ್ಯರ ಪ್ರಕಾರ, ಡಿಎಂಡಿ ಎನ್ನುವ ವಂಶವಾಹಿ ರೋಗದಿಂದ ನಿಧಾನಕ್ಕೆ ದೇಹದ ಸ್ನಾಯು ಬಲ ಕಳಕೊಳ್ಳುತ್ತಾ ಹೋಗಿ ಕೊನೆಗೆ ಅಕಾಲಿಕ ಸಾವಿಗೆ ಕಾರಣವಾಗುತ್ತದೆ. ಪೊಲೀಸರು ಕುಟುಂಬದ ನಿಗೂಢ ಸಾವಿನ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದು, ಪೋಸ್ಟ್ ಮಾರ್ಟಂ ವರದಿಯನ್ನು ಕಾಯುತ್ತಿದ್ದಾರೆ. ಶೀನಾ ಮತ್ತು ಸಬೀಶ್ ಇಬ್ಬರು ಕೂಡ ಬ್ಯಾಂಕ್ ಮತ್ತು ಫೈನಾನ್ಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದು ಹಣಕಾಸು ತೊಂದರೆ ಇರಲಿಲ್ಲ. ದಿಢೀರ್ ಸಾವಿಗೆ ಶರಣಾಗಲು ಬೇರೆ ಯಾವುದೇ ಕಾರಣ ಇರಲಿಲ್ಲ ಎಂದು ಕುಟುಂಬಸ್ಥರು ಹೇಳುತ್ತಾರೆ.
ಮನೆಯನ್ನು ಶಿಫ್ಟ್ ಮಾಡುವುದು ಮತ್ತು ಮಲಪ್ಪುರಂನಲ್ಲಿದ್ದ ಮನೆಯಿಂದ ಸಾಮಾನುಗಳನ್ನು ಒಯ್ಯುವುದಕ್ಕಾಗಿ ಶೀನಾ ಕಳೆದ ಸೋಮವಾರದಿಂದಲೇ ರಜೆ ಪಡೆದಿದ್ದರು. ಮಲಪ್ಪುರಂ ಕೇಂದ್ರೀಯ ವಿದ್ಯಾಲಯದಲ್ಲಿ ಕಲಿಯುತ್ತಿದ್ದ ಮಗನನ್ನು ಶಿಫ್ಟ್ ಮಾಡುವುದಕ್ಕೆ ಶಾಲೆಯ ದಾಖಲಾತಿಗಳನ್ನೂ ರೆಡಿ ಮಾಡಿಕೊಂಡಿದ್ದರು. ಗುರುವಾರ ಸಂಜೆ ನಾಲ್ಕು ಗಂಟೆ ವೇಳೆಗೆ ಸಂಬಂಧಿಕರಿಗೆ ಫೋನ್ ಮಾಡಿದ್ದವರು ಶುಕ್ರವಾರದಿಂದ ಕಣ್ಣೂರಿನ ಮನೆ ಸೇರುತ್ತೇವೆ, ಇವತ್ತು ರಾತ್ರಿಯೇ ಹೊರಡುತ್ತೇವೆ ಎಂದಿದ್ದರು. ರಾತ್ರಿ 8 ಗಂಟೆಗೆ ಫೋನ್ ಮಾಡಿದಾಗ, ರಿಸೀವ್ ಮಾಡಿರಲಿಲ್ಲ. ಮತ್ತೆ ಮತ್ತೆ ಫೋನ್ ಮಾಡಿದರೂ ರಿಸೀವ್ ಮಾಡಿಲ್ಲ ಎಂದು ಸಂಬಂಧಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಮಧ್ಯರಾತ್ರಿ ಹೊತ್ತಿಗೆ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಮನೆಯಲ್ಲಿ ದುರಂತವೇ ನಡೆದುಹೋಗಿತ್ತು. ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಮಂಜೇರಿ ಮೆಡಿಕಲ್ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ಕೆಲಸ ಮುಗಿದಿದ್ದು ಆನಂತರ ಸಂಬಂಧಿಕರು ಶವಗಳನ್ನು ಕಣ್ಣೂರಿನ ತಾಳಿಪರಂಬಕ್ಕೆ ಕೊಂಡೊಯ್ದಿದ್ದರು.
Kasaragod SBI Bank manager, her husband and two children found dead. It is suspected that both the children were suffering from a genetic disorder of the bone that affects life expectancy, and the condition may be the reason behind the suicides. Sheena was working as manager of SBI Kasargod branch while her husband Sabeesh was employed as manager of private finance company of Malappuram.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm