ಮತ್ತೊಬ್ಬ ಯುವತಿ ಜತೆಗೆ ಪತಿರಾಯ ರಾಸಲೀಲೆ ; ತವರು ಮನೆಯಿಂದ ಬರ್ತಡೆಗೆ ಸರ್ಪ್ರೈಸ್ ಕೊಡಲು ಬಂದಿದ್ದ ಪತ್ನಿಗೆ ಶಾಕ್, ಇಬ್ಬರು ಮಕ್ಕಳೊಂದಿಗೆ  ರೈಲಿಗೆ ತಲೆಕೊಟ್ಟ ತಾಯಿ !

08-07-23 01:20 pm       HK News Desk   ದೇಶ - ವಿದೇಶ

ಪತಿಯ ಅಕ್ರಮ ಸಂಬಂಧದ ವಿಚಾರವನ್ನು ಕಣ್ಣಾರೆ ಕಂಡು ಮನನೊಂದ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ಸರಕು ಸಾಗಣೆ ರೈಲಿನ ಮುಂಭಾಗಕ್ಕೆ ಹಾರಿದ ಪರಿಣಾಮ ಮೂವರು ದಾರುಣವಾಗಿ ಕೊನೆಯುಸಿರೆಳೆದಿರುವ ಘಟನೆ ರಾಜಸ್ಥಾನದ ಜೋಧ್‌ ಪುರದಲ್ಲಿ ನಡೆದಿದೆ.

ಜೋಧಪುರ್, ಜುಲೈ 8: ಪತಿಯ ಅಕ್ರಮ ಸಂಬಂಧದ ವಿಚಾರವನ್ನು ಕಣ್ಣಾರೆ ಕಂಡು ಮನನೊಂದ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ಸರಕು ಸಾಗಣೆ ರೈಲಿನ ಮುಂಭಾಗಕ್ಕೆ ಹಾರಿದ ಪರಿಣಾಮ ಮೂವರು ದಾರುಣವಾಗಿ ಕೊನೆಯುಸಿರೆಳೆದಿರುವ ಘಟನೆ ರಾಜಸ್ಥಾನದ ಜೋಧ್‌ ಪುರದಲ್ಲಿ ನಡೆದಿದೆ.

ತಾಯಿ ಮನೆಯಲ್ಲಿ ವಾಸವಾಗಿದ್ದ ಮಹಿಳೆ, ತನ್ನಿಬ್ಬರು ಮಕ್ಕಳೊಂದಿಗೆ ಪತಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಜೋಧ್‌ ಪುರಕ್ಕೆ ಆಗಮಿಸಿದ್ದಳು. ಪತಿಯ ಮನೆಯನ್ನು ತಲುಪಿದ ಪತ್ನಿಗೆ ಆಘಾತವಾಗಿತ್ತು. ಅದಕ್ಕೆ ಕಾರಣ ಪತಿ ಮತ್ತೊಬ್ಬ ಯುವತಿ ಜತೆ ಇದ್ದಿರುವುದು.

ಮನೆಯೊಳಗೆ ಹೋದ ಪತ್ನಿಗೆ ಪತಿ ಮತ್ತೊಬ್ಬ ಯುವತಿ ಜತೆ ರಾಸಲೀಲೆಯಲ್ಲಿ ತೊಡಗಿರುವುದನ್ನು ಕಣ್ಣಾರೆ ಕಂಡು ರೋಸಿ ಹೋಗಿದ್ದಳು. ಆಕೆ ಕೂಡಲೇ ಮೊಬೈಲ್‌ ನಲ್ಲಿ ಪತಿಯ ಅನೈತಿಕ ಚಟುವಟಿಕೆಯ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ಅತ್ತೆಗೆ ಕಳುಹಿಸಿಕೊಟ್ಟಿದ್ದಾಳೆ. 

Heartbreaking! Husband found with another daughter on birthday; Enraged wife  ends life with 2 children – Marathi News | His wife ended her life with 2  children after seeing her husband with

ಪತಿಯ ತವರು ಮನೆಯಲ್ಲಿದ್ದ ಪತ್ನಿ ಹಲವು ಬಾರಿ ಪತಿಗೆ ಕರೆ ಮಾಡಿದ್ದರು ಕೂಡಾ ಆತ ಕಾಲ್ ರಿಸೀವ್ ಮಾಡುತ್ತಿರಲಿಲ್ಲ. ನಂತರ ಪತಿಯ ಹುಟ್ಟುಹಬ್ಬದ ದಿನದಂದು ಖುದ್ದಾಗಿ ಮಕ್ಕಳ ಜೊತೆ ಪತಿಯನ್ನು ಭೇಟಿಯಾಗಲು ನಿರ್ಧರಿಸಿದ್ದಳು. ಆ ನಿಟ್ಟಿನಲ್ಲಿ ಜೋಧ್‌ ಪುರದಲ್ಲಿ ಪತಿಯ ನಿವಾಸಕ್ಕೆ ಬಂದ ವೇಳೆ ಆತ ಮತ್ತೊಬ್ಬಳು ಯುವತಿಯೊಂದಿಗೆ ವಾಸವಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಳು. 

ಪತಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡ ಘಟನೆ ನಂತರ ಆಕ್ರೋಶಗೊಂಡ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ರೈಲ್ವೆ ನಿಲ್ದಾಣಕ್ಕೆ ಬಂದು ಸರಕು ಸಾಗಣೆ ರೈಲಿನ ಮುಂಭಾಗದಲ್ಲಿ ಹಾರಿಬಿಟ್ಟಿದ್ದಳು. ಕೂಡಲೇ ಗೂಡ್ಸ್‌ ರೈಲನ್ನು ನಿಲ್ಲಿಸಲಾಗಿತ್ತು. ಆದರೆ ಮಹಿಳೆ ಮತ್ತು ಇಬ್ಬರು ಮಕ್ಕಳ ದೇಹ ಛಿದ್ರ, ಛಿದ್ರವಾಗಿ ಹೋಗಿತ್ತು. ಶವದ ತುಂಡುಗಳನ್ನು ಒಟ್ಟುಗೂಡಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮೋಸಗಾರನ ಪತ್ತೆ ಹಚ್ಚುತ್ತಿದ್ದಾರೆ.

Wife ends her life by jumping under the train with her two children after seeing her husband with another woman on his birthday. This heartbreaking incident in Rajasthan’s Jodhpur brought tears to everyone’s eyes. A video of the incident is also going viral, in which the deceased woman is seen fighting with her husband’s girlfriend. Suresh Vishnoi of Mathania area of ​​Jodhpur district lived in a rented room in Jodhpur’s Ratanada area. A wrong step by Suresh, a taxi driver by profession, leaves the family in shambles.