ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ ; ಹೊಟೇಲಿಗೆ ನುಗ್ಗಿದ ಟ್ರಕ್, ನಾಲ್ಕು ವಾಹನ ಅಪ್ಪಚ್ಚಿ, 15 ಜನರು ಸಾವು

04-07-23 10:56 pm       HK News Desk   ದೇಶ - ವಿದೇಶ

ಮಹಾರಾಷ್ಟ್ರದ ಧುಲೇ ಜಿಲ್ಲೆಯಲ್ಲಿ ಬ್ರೇಕ್ ಫೈಲ್ ಆದ ಟ್ರಕ್ ಹೆದ್ದಾರಿ ಬದಿಯ ಬಸ್ ನಿಲ್ದಾಣ ಮತ್ತು ಹೊಟೇಲಿಗೆ ನುಗ್ಗಿ ಭೀಕರ ಅಪಘಾತ ನಡೆದಿದ್ದು ಹದಿನೈದು ಜನರು ದುರಂತ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮುಂಬೈ, ಜುಲೈ 4: ಮಹಾರಾಷ್ಟ್ರದ ಧುಲೇ ಜಿಲ್ಲೆಯಲ್ಲಿ ಬ್ರೇಕ್ ಫೈಲ್ ಆದ ಟ್ರಕ್ ಹೆದ್ದಾರಿ ಬದಿಯ ಬಸ್ ನಿಲ್ದಾಣ ಮತ್ತು ಹೊಟೇಲಿಗೆ ನುಗ್ಗಿ ಭೀಕರ ಅಪಘಾತ ನಡೆದಿದ್ದು ಹದಿನೈದು ಜನರು ದುರಂತ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮುಂಬೈನಿಂದ 300 ಕಿಮೀ ದೂರದ ಧುಲೇ ನಗರದ ಪಾಲಸ್ನೇರ್ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಭೀಕರ ಅಪಘಾತ  ನಡೆದಿದೆ. ಮುಂಬೈ- ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಮೊದಲು ನಾಲ್ಕು ವಾಹನಗಳಿಗೆ ಡಿಕ್ಕಿಯಾಗಿದ್ದು ಆನಂತರ ರಸ್ತೆ ಬದಿಯ ಹೊಟೇಲಿಗೆ ನುಗ್ಗಿದೆ.

Maharashtra: 10 killed, 20 injured as truck rams into highway hotel in Dhule  – Way2Barak

India: At least 10 killed, 26 injured after truck hits four vehicles, rams  into hotel in Dhule - India News News

ಟ್ರಕ್ ಬ್ರೇಕ್ ಫೈಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ದುರಂತಕ್ಕಾಗಿದೆ ಎನ್ನಲಾಗುತ್ತಿದೆ. ಎರಡು ಬೈಕ್, ಒಂದು ಕಾರು ಮತ್ತು ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದ್ದು, ಕೊನೆಗೆ ಬಸ್ ನಿಲ್ದಾಣ ಬಳಿ ನಿಂತಿದ್ದ ಜನರು ಮತ್ತು ಹೆದ್ದಾರಿ ಬದಿಯಲ್ಲಿದ್ದ ಹೊಟೇಲಿಗೆ ನುಗ್ಗಿ ರಿವರ್ಸ್ ಹೊಡೆದು ಪಲ್ಟಿಯಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಟ್ರಕ್ ಮಧ್ಯಪ್ರದೇಶದ ಕಡೆಯಿಂದ ಮುಂಬೈನತ್ತ ಬರುತ್ತಿತ್ತು. ಘಟನೆಯಲ್ಲಿ ಬಸ್ಸಿಗೆ ನಿಂತಿದ್ದವರು ಕೂಡ ಸಾವು ಕಂಡಿದ್ದಾರೆ.

At least 15 people were killed and more than 20 injured after a container truck hit four vehicles and then rammed into a hotel on a highway in Maharashtra's Dhule district on Tuesday, police said. The accident took place at around 10.45 a.m. near Palasner village on Mumbai-Agra highway in Dhule, located more than 300 k.m. from the state capital, a police official said.