ಬ್ರೇಕಿಂಗ್ ನ್ಯೂಸ್
02-07-23 10:49 pm HK News Desk ದೇಶ - ವಿದೇಶ
ಚೆನ್ನೈ, ಜುಲೈ 2: ತಿರುಪತಿ ಬಳಿಯ ತಾಲಕೋಣ ಜಲಪಾತಕ್ಕೆ ಟೂರ್ ಹೋಗಿದ್ದ ಚೆನ್ನೈನಲ್ಲಿ ಎಂಎಸ್ಸಿ ಓದುತ್ತಿದ್ದ ಮಂಗಳೂರು ಮೂಲದ ವಿದ್ಯಾರ್ಥಿಯೊಬ್ಬ ರೀಲ್ಸ್ ಮಾಡಲು ಹೋಗಿ ತನ್ನ ಜೀವವನ್ನೇ ಕಳಕೊಂಡಿದ್ದಾನೆ. ಚೆನ್ನೈನ ರಾಜೀವ್ ಗಾಂಧಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದ ಸುಮಂತ್(22) ಮೃತ ವಿದ್ಯಾರ್ಥಿ.
ಸುಮಂತ್ ತನ್ನ ಸ್ನೇಹಿತರೊಂದಿಗೆ ತಿರುಪತಿ ಬಳಿಯ ತಲಕೋನಾ ಜಲಪಾತಕ್ಕೆ ತೆರಳಿದ್ದ. ಶುಕ್ರವಾರ ಸಂಜೆಯ ವೇಳೆಗೆ ನೀರಾಟ ಆಡುತ್ತಿದ್ದ ಸುಮಂತ್ ನೀರಿಗೆ ಜಿಗಿಯಲು ಹೋಗಿದ್ದ. ಅಲ್ಲದೆ, ತಾನು ನೀರಿಗೆ ಹಾರುವುದನ್ನು Instagram ರೀಲ್‌ಗಾಗಿ ವೀಡಿಯೊ ಮಾಡುವಂತೆ ಸ್ನೇಹಿತರಿಗೆ ಹೇಳಿದ್ದ ಎನ್ನಲಾಗಿದೆ. ಅದರಂತೆ ಆತನ ಸ್ನೇಹಿತರು ಕ್ಯಾಮರಾದಲ್ಲಿ ವಿಡಿಯೋ ಮಾಡುತ್ತಿದ್ದರೆ, ಸುಮಂತ್ ಬಂಡೆಯ ಮೇಲಿನಿಂದ ಹತ್ತಡಿ ಆಳದ ನೀರಿಗೆ ಹಾರಿದ್ದಾರೆ.
ಜಲಪಾತಕ್ಕೆ ಹಾರಿದ ನಂತರ ಸುಮಂತ್ ನೀರಿನಿಂದ ಮೇಲಕ್ಕೆ ಬಂದಿರಲಿಲ್ಲ. ಭಯಗೊಂಡ ಸ್ನೇಹಿತರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ರಾತ್ರಿ ವೇಳೆಗೆ ಸುಮಂತ್ ಶವ ನೀರಿನಾಳದಲ್ಲಿ ಬಂಡೆಗಳ ಎಡೆಯಲ್ಲಿ ಸಿಲುಕಿದ್ದನ್ನು ಪತ್ತೆ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಸುಮಂತ್ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದೆ. ಆತನ ತಲೆ ಎರಡು ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದರಿಂದ ಮೇಲೆ ಬರಲಾಗದೆ ಸಿಕ್ಕಿಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
22 year old youth from Mangalore dies at Talakona falls in Tirupati. The deceased has been identified as Sumanth. The incident took place while shooting reels for Instagram.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm