ಮುಂಬೈ-ಪುಣೆ ಎಕ್ಸ್​ಪ್ರೆಸ್​ವೇ ; ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್​ ಟ್ಯಾಂಕರ್ ಪಲ್ಟಿ , ಹೊತ್ತಿ ಉರಿದ ಲಾರಿ, ನಾಲ್ವರ ಬಲಿ ! 

13-06-23 04:15 pm       HK News Desk   ದೇಶ - ವಿದೇಶ

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್​ ಟ್ಯಾಂಕರ್ ಪಲ್ಟಿ ಹೊಡೆದ ಪರಿಣಾಮ ಲಾರಿ ಹೊತ್ತಿಕೊಂಡು ಉರಿದಿರುವ ಘಟನೆ ಮುಂಬೈ-ಪುಣೆ ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ.

ಮುಂಬೈ, ಜೂನ್ 13: ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್​ ಟ್ಯಾಂಕರ್ ಪಲ್ಟಿ ಹೊಡೆದ ಪರಿಣಾಮ ಲಾರಿ ಹೊತ್ತಿಕೊಂಡು ಉರಿದಿರುವ ಘಟನೆ ಮುಂಬೈ-ಪುಣೆ ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ.

4 dead, three injured as chemical-laden tanker explodes on Pune-Mumbai  Expressway | VIDEO | Maharashtra News – India TV

Mumbai Live News Updates: 4 boys feared drowned off Juhu beach; NDRF  deploys five teams in view of Cyclone Biparjoy; Rains to continue for next  24 hours

Mumbai Pune Expressway Fire: 3 dead, 2 injured in fire accident as tanker  goes up in flames | Pune News - Times of India

ಘಟನೆಯು ಲೋನಾವಾಲಾ-ಖಂಡಾಲಾ ಮಾರ್ಗದಲ್ಲಿ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ-ಪುಣೆ ಎಕ್ಸ್​ಪ್ರೆಸ್​ವೇನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ಉರಿದಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದು ಬ್ರಿಡ್ಜ್​ ಕೆಳಗೆ ಸಂಚರಿಸುತ್ತಿದ್ದವರಿಗು ತಗುಲಿದೆ. ಸೇತುವೆ ಕೆಳಭಾಗ ಪ್ರಯಾಣಿಸುತ್ತಿದ್ದ ಬೈಕ್ ಸವಾರರಿಗೆ ಬೆಂಕಿ ತಗುಲಿದ್ದು ಈ ಪೈಕಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.

Four people were killed and three injured when a chemical-laden tanker caught fire following an accident and exploded on Pune-Mumbai Expressway on Tuesday, police said. The accident took place on the expressway stretch between Lonavala and Khandala, an official said.