ಶಸ್ತ್ರಾಸ್ತ್ರ ಸಾಗಣೆ, ಸಂದೇಶ ರವಾನೆಗೆ ಮಹಿಳೆಯರು, ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಪಾಕ್ ಉಗ್ರರು ; ಸೇನಾಪಡೆ 

11-06-23 10:47 pm       HK News Desk   ದೇಶ - ವಿದೇಶ

ಪಾಕಿಸ್ತಾನದ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆಗಳ ಉಗ್ರರು ತಮ್ಮ ಸಂವಹನ ಇನ್ನಿತರ ಕಾರ್ಯಕ್ಕಾಗಿ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ.

ನವದೆಹಲಿ, ಜೂನ್ 11: ಪಾಕಿಸ್ತಾನದ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆಗಳ ಉಗ್ರರು ತಮ್ಮ ಸಂವಹನ ಇನ್ನಿತರ ಕಾರ್ಯಕ್ಕಾಗಿ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ, ಮಾದಕ ವಸ್ತು ಸಾಗಣೆ ಮತ್ತು ಸಂದೇಶ ರವಾನೆಗೆ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸೇನಾಪಡೆಯ ಚಿನಾರ್ ಕೋರ್‌ ವಿಭಾಗದ ಲೆಫ್ಟಿನೆಂಟ್‌ ಜನರಲ್‌ ಅಮರ್‌ದೀಪ್‌ ಸಿಂಗ್‌ ಔಜ್ಲಾ ಹೇಳಿದ್ದಾರೆ.  

ಭದ್ರತಾ ಪಡೆಯ ಸಿಬ್ಬಂದಿ ಜಾಗೃತರಾಗಿರಬೇಕು, ಗಡಿ ನಿಯಂತ್ರಣ ರೇಖೆಯುದ್ದಕ್ಕೂ(ಎಲ್‌ಒಸಿ) ಕುಳಿತಿರುವ ಉಗ್ರರು ದೇಶದೊಳಗಿನ ಶಾಂತಿ ಕೆಡಿಸಲು ತಂತ್ರ ರೂಪಿಸುತ್ತಿದ್ದಾರೆ ಎಂದವರು ಎಚ್ಚರಿಕೆ ನೀಡಿದ್ದಾರೆ. 

ಉಗ್ರ ಚಟುವಟಿಕೆಗಳಿಗೆ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕೆಲವು ಪ್ರಕರಣಗಳನ್ನು ಸೇನೆ ಪತ್ತೆಹಚ್ಚಿದೆ. ಈ ವಿಚಾರದಲ್ಲಿ ನಾವು ಇತರ ತನಿಖಾ ಸಂಸ್ಥೆಗಳ ಜೊತೆ ಸೇರಿ ತನಿಖೆ ನಡೆಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.

ಉಗ್ರ ಸಂಘಟನೆಗಳು ಸಂವಹನಕ್ಕಾಗಿ ಮೊಬೈಲ್‌ ಫೋನ್‌ಗಳನ್ನು ಬಳಸುತ್ತಿಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮರ್‌ದೀಪ್‌, ಭಯೋತ್ಪಾದಕರು ಮೊಬೈಲ್‌ ಬಳಕೆಯನ್ನು ಕಡಿಮೆ ಮಾಡಿರುವುದಾಗಿ ತಿಳಿದುಬಂದಿದೆ. ಬದಲಿಗೆ ಮಹಿಳೆಯರು, ಬಾಲಕಿಯರನ್ನು ಮಾಹಿತಿ ಪ್ರಸರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

A 'dangerous move' by Pakistan's Inter-Services Intelligence (ISI) and heads of terror groups to rope in women and juveniles to carry weapons and messages has come to light amid a decline in the use of traditional means of communication by terrorists in Kashmir valley, a top army officer has said.