ನೈಜೀರಿಯನ್ನರು ಬಂಧಿಸಿಟ್ಟಿದ್ದ 9 ಮಂದಿ ಭಾರತೀಯರು ಒಂಬತ್ತು ತಿಂಗಳ ಬಳಿಕ ತಾಯ್ನಾಡಿಗೆ ; ಸರಕು ಹಡಗಿನಲ್ಲಿ ಸಿಕ್ಕಿಬಿದ್ದಿದ್ದ ತಂಡ 

11-06-23 10:36 pm       HK News Desk   ದೇಶ - ವಿದೇಶ

ಈಕ್ವಟೋರಿಯಲ್‌ ಗಿನಿಯಾ ಮತ್ತು ನೈಜೀರಿಯ ದೇಶಗಳು ವಶಕ್ಕೆ ತೆಗೆದುಕೊಂಡಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ಒಂಬತ್ತು ತಿಂಗಳ ಬಳಿಕ ತಾಯ್ನಾಡಿಗೆ ಮರಳಿದ್ದಾರೆ.‌

ನವದೆಹಲಿ, ಜೂನ್ 11: ಈಕ್ವಟೋರಿಯಲ್‌ ಗಿನಿಯಾ ಮತ್ತು ನೈಜೀರಿಯ ದೇಶಗಳು ವಶಕ್ಕೆ ತೆಗೆದುಕೊಂಡಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ಒಂಬತ್ತು ತಿಂಗಳ ಬಳಿಕ ತಾಯ್ನಾಡಿಗೆ ಮರಳಿದ್ದಾರೆ.‌ 

ಮಾರ್ಷಲ್ ಐಲ್ಯಾಂಡ್ಸ್‌ಗೆ ಸೇರಿದ ತೈಲ ಟ್ಯಾಂಕರ್‌ ಎಂ.ಟಿ ಹಿರೋಯಿಕ್‌ ಇಡುನ್‌ ಮತ್ತು ಅದರ 26 ಸಿಬ್ಬಂದಿಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಅವರಲ್ಲಿ ಒಂಬತ್ತು ಮಂದಿ ಭಾರತೀಯರಿದ್ದರು. 

Indian sailors detained in Nigeria return home after nine months -  Telangana Today

Indian Sailors, Detained In Nigeria For 9 Months, Return Home

ಈಕ್ವಟೋರಿಯಲ್‌ ಗಿನಿಯಾ ಮತ್ತು ನೈಜೀರಿಯ ದೇಶದ ಜೊತೆ ಭಾರತ ಸರ್ಕಾರ ಸುದೀರ್ಘ ಕಾಲ ಸಂಧಾನ ನಡೆಸಿದ ಬಳಿಕ ಸಿಬ್ಬಂದಿಯ ಮೇಲಿದ್ದ ಎಲ್ಲಾ ಆರೋಪಗಳನ್ನು ಕೈಬಿಡಲಾಗಿದೆ ಮತ್ತು ದಂಡ ಕಟ್ಟಿಸಿಕೊಂಡು ಹಡಗನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

16 Indian Sailors Detained For 9 Months In Equatorial Guinea And Nigeria  Finally Return Home Marine News Sea News

ಸೆರೆಯಲ್ಲಿದ್ದ ಸಿಬ್ಬಂದಿಗೆ ಅವರ ಕುಟುಂಬದ ಜೊತೆ ಮಾತನಾಡಲು ಮತ್ತು ಆ ಎರಡು ದೇಶಗಳಲ್ಲಿಯ ಭಾರತದ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿ ಇರಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ. ತೈಲ ಕಳವು ಆರೋಪದ ಮೇಲೆ ಎಂ.ಟಿ ಹೆರೋಯಿಕ್‌ ಇಡುನ್‌ ಹಡಗನ್ನು ನೈಜೀರಿಯ ನೌಕಾಪಡೆ ವಶಕ್ಕೆ ತೆಗೆದುಕೊಂಡಿತ್ತು.

Sixteen Indian sailors who got detained in Equatorial Guinea and Nigeria nine months back returned home on Saturday. The sailors faced accusations of oil theft by the Nigerian authorities and underwent trials and when a settlement was agreed upon, they were set free.