ಅಂತೂ ಕೇರಳಕ್ಕೆ ಮುಂಗಾರು ಪ್ರವೇಶ, ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಮಳೆ ; ಹವಾಮಾನ ಇಲಾಖೆ

08-06-23 08:00 pm       HK News Desk   ದೇಶ - ವಿದೇಶ

ಅಂತೂ ಮುಂಗಾರು ಹಂಗಾಮು ಕೇರಳ ಪ್ರವೇಶ ಮಾಡಿದೆ. ವಾಡಿಕೆಗಿಂತ ಒಂದು ವಾರ ವಿಳಂಬವಾಗಿ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದೆ ಎಂದು ಹವಾಮಾನ ಇಲಾಖೆ ಗುರುವಾರ ಹೇಳಿದೆ.

ತಿರುವನತಪುರಂ, ಜೂನ್ 8: ಅಂತೂ ಮುಂಗಾರು ಹಂಗಾಮು ಕೇರಳ ಪ್ರವೇಶ ಮಾಡಿದೆ. ವಾಡಿಕೆಗಿಂತ ಒಂದು ವಾರ ವಿಳಂಬವಾಗಿ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದೆ ಎಂದು ಹವಾಮಾನ ಇಲಾಖೆ ಗುರುವಾರ ಹೇಳಿದೆ. ಏಳು ವರ್ಷಗಳ ಬಳಿಕ ಇಷ್ಟು ತಡವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ ಎಂದೂ ಇಲಾಖೆ ಹೇಳಿದೆ.

ಈ ಬಾರಿ ಜೂನ್ 4ರಂದು ಕೇರಳಕ್ಕೆ ಮುಂಗಾರು ಬರಲಿದೆ, ಆನಂತರ ಎರಡು ದಿನದಲ್ಲಿ ಕರ್ನಾಟಕ ಕರಾವಳಿ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಲೆಕ್ಕ ಹಾಕಿತ್ತು. ಆದರೆ ಲಕ್ಷದ್ವೀಪ ಆಸುಪಾಸಿನಲ್ಲಿ ಅರಬ್ಬೀ ಸಮುದ್ರದ ಮಧ್ಯೆ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಎದ್ದ ಪರಿಣಾಮ ಮುಂಗಾರು ಮಳೆ ವಿಳಂಬಗೊಂಡಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ವಾಡಿಕೆ ಪ್ರಕಾರ, ಜೂನ್ 1ಕ್ಕೆ ಮುಂಗಾರು ಮಳೆ ಆರಂಭ ಆಗಬೇಕಿತ್ತು.

ದಕ್ಷಿಣ ಅರಬ್ಬೀ ಸಮುದ್ರ, ಲಕ್ಷದ್ವೀಪ, ಕೇರಳ ಕರಾವಳಿ ಮತ್ತು ತಮಿಳುನಾಡು ಭಾಗದಲ್ಲಿ ಮುಂಗಾರು ಪ್ರವೇಶ ಮಾಡಿದ್ದು, ಉತ್ತರಕ್ಕೆ ಚಲಿಸುತ್ತಿದೆ. ಇನ್ನೆರಡು ದಿನದಲ್ಲಿ ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 150 ವರ್ಷಗಳ ದಾಖಲೆ ಪ್ರಕಾರ, ಸಾಧಾರಣವಾಗಿ ಜೂನ್ ತಿಂಗಳ ಆರಂಭದಲ್ಲಿಯೇ ಮುಂಗಾರು ಆರಂಭಗೊಳ್ಳುವುದು ವಾಡಿಕೆ ಆಗಿತ್ತು. 1918ರಲ್ಲಿ ಮೇ 11ಕ್ಕೆ ಮುಂಗಾರು ಮಳೆ ಆರಂಭಗೊಂಡು ಅತಿ ಬೇಗ ಮಳೆಯಾಗಿದ್ದು ದಾಖಲೆಯಾಗಿದ್ದರೆ, 1972ರಲ್ಲಿ ಜೂನ್ 18ಕ್ಕೆ ಮುಂಗಾರು ಮಳೆಯಾಗಿದ್ದು ಅತಿ ವಿಳಂಬದ ದಾಖಲೆಯಾಗಿದೆ.

ಕಳೆದ ವರ್ಷ 2022ರಲ್ಲಿ ಮೇ 29ಕ್ಕೆ ಮಳೆ ಶುರುವಾಗಿದ್ದರೆ, 2021ರಲ್ಲಿ ಜೂನ್ 3ಕ್ಕೆ ಮುಂಗಾರು ಬಂದಿತ್ತು. 2020ರಲ್ಲಿ ಜೂನ್ 1ರಂದು, 2019ರಲ್ಲಿ ಜೂನ್ 8 ಮತ್ತು 2018ರಲ್ಲಿ ಮೇ 29ಕ್ಕೆ ಮುಂಗಾರು ಆರಂಭ ಆಗಿತ್ತು. ಕೇರಳಕ್ಕೆ ಮುಂಗಾರು ವಿಳಂಬ ಆದಮಾತ್ರಕ್ಕೆ ಇಡೀ ದೇಶಕ್ಕೆ ವಿಳಂಬ ಅಂತ ಹೇಳಕ್ಕೆ ಆಗಲ್ಲ. ಬೇಗನೆ ಮುಂಗಾರು ವಿಸ್ತರಣೆಗೊಂಡು ಇಡೀ ದೇಶದಲ್ಲಿ ವ್ಯಾಪಿಸುವುದೂ ಇರುತ್ತದೆ. ಮಳೆ ವಿಳಂಬವಾಗಿದ್ದ ಮಾತ್ರಕ್ಕೆ ಈ ಬಾರಿ ಮಳೆ ಕಡಿಮೆ ಎಂದೂ ಹೇಳುವಂತಿಲ್ಲ. ವಾಡಿಕೆಯ ಮಳೆಯ ಪ್ರಮಾಣಕ್ಕೆ ವಿಳಂಬವಾಗಿದ್ದೇನು ಕೊಡುಗೆ ಕೊಡಲ್ಲ. ಈ ಬಾರಿ ಉತ್ತರ ಭಾರತಕ್ಕೆ ಸ್ವಲ್ಪ ಕಡಿಮೆ ಮಳೆಯಾಗಬಹುದು. ದಕ್ಷಿಣ ಭಾರತದ ಪೂರ್ವ, ಪಶ್ಚಿಮದಲ್ಲಿ ಯಾವಾಗಿನಷ್ಟೇ ಮಳೆ ಬೀಳಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

In relief to farmers, the Indian Meteorological Department (IMD) on Thursday said that monsoon rains reached Kerala coast a week later than usual, which is the longest delay in last 7 years. IMD had expected the arrival of monsoon rains over the state’s coast on June 4. However, a formation of severe cyclonic storm Biparjoy delayed the onset of the rain, as per the meteorologists.