ಬ್ರೇಕಿಂಗ್ ನ್ಯೂಸ್
30-10-20 05:30 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 30: ಕೊರೊನಾ ಲಾಕ್ಡೌನ್, ಉದ್ಯೋಗ ನಷ್ಟದ ಕಾರಣದಿಂದ ವಾಹನ, ಗೃಹ ಸಾಲ ಇನ್ನಿತರ ಸಾಲ ಮರುಪಾವತಿಗೆ ಕಷ್ಟ ಪಡುತ್ತಿರುವವರು ಬಹಳಷ್ಟಿದ್ದಾರೆ. ಲಾಕ್ಡೌನ್ ಸಂಕಷ್ಟಕ್ಕೊಳಗಾದ ಸಾಲಗಾರರಿಗೆ ಕೇಂದ್ರ ಸರಕಾರ ಆರು ತಿಂಗಳ ಕಾಲ ಮರು ಪಾವತಿಗೆ ವಿನಾಯ್ತಿ ನೀಡಿತ್ತು. ಈ ವಿನಾಯ್ತಿ ಬಳಿಕವೂ ಬಹಳಷ್ಟು ಮಂದಿ ಮರುಪಾವತಿಗೆ ಕಷ್ಟಪಡುತ್ತಿದ್ದಾರೆ. ಅಂಥವರಿಗಾಗಿಯೇ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದೆ.
ಉದ್ಯೋಗ ಕಡಿತ, ಆದಾಯ ಇಲ್ಲದೆ ಕಂಗಾಲಾಗಿರುವ ಮಂದಿ ತಮ್ಮ ತಿಂಗಳ ಇಎಂಐ ಪಾವತಿಗೆ ಸಂಕಷ್ಟ ಪಡುತ್ತಿದ್ದಾರೆ. ಒಂದೆಡೆ ಬ್ಯಾಂಕುಗಳು ಮರುಪಾವತಿ ಮಾಡದಿರುವ ಗ್ರಾಹಕರ ಮನೆಗೆ ತಮ್ಮ ಎಕ್ಸಿಕ್ಯೂಟಿವ್ ಕಳಿಸಿಕೊಟ್ಟು ಪೀಡಿಸುವ ಕೆಲಸಗಳೂ ಆಗುತ್ತಿವೆ. ದೇಶದಲ್ಲಿ ಹೀಗೆ ಸಾಲ ಪಡೆದು ಸಿಕ್ಕಿಬಿದ್ದ 70 ಶೇಕಡಾ ಮಂದಿ ಮರುಪಾವತಿ ಮಾಡಿಲ್ಲ ಎನ್ನುವ ಅಂದಾಜಿದೆ. ಖಾಸಗಿ ಸಾಲಗಳ ಜೊತೆ ಉದ್ಯಮ, ಮುದ್ರಾ ಯೋಜನೆ ಹೀಗೆ ಸ್ವೋದ್ಯೋಗಕ್ಕಾಗಿ ಬೇರೆ ಬೇರೆ ರೂಪದಲ್ಲಿ ಸಾಲ ಪಡೆದಿರುವ ಮಂದಿಗೂ ಸಂಕಷ್ಟ ಎದುರಾಗಿದೆ.
ಹೀಗೆ ತೀವ್ರ ಸಂಕಷ್ಟಕ್ಕೊಳಗಾದ ಮಂದಿಗಾಗಿಯೇ ಕೇಂದ್ರ ಸರಕಾರ ಆರ್ ಬಿಐ ಮೂಲಕ ಸಾಲ ಪುನರ್ರಚನೆ ಯೋಜನೆ ಜಾರಿ ಮಾಡಿದೆ. ಎಸ್ ಬಿಐ ಸೇರಿ ಕೆಲವು ಬ್ಯಾಂಕುಗಳು ಈ ಯೋಜನೆಯಡಿ ಮಾನದಂಡಗಳನ್ನು ನಿಗದಿಗೊಳಿಸಿ ವೆಬ್ ಸೈಟ್ ಗಳಲ್ಲಿ ಪ್ರಕಟಿಸಿವೆ. ಈ ಯೋಜನೆಯಡಿ ಅರ್ಹತೆ ಪಡೆಯಲು ಸಾಲಗಾರರು ತಮ್ಮ ನಷ್ಟಕ್ಕೆ ಕಾರಣವಾದ ಅಂಶಗಳನ್ನು ಬರೆದು ಬ್ಯಾಂಕಿಗೆ ನೀಡಬೇಕಾಗುತ್ತದೆ. ಉದ್ಯೋಗ ನಷ್ಟ, ಸಂಬಳ ಕಡಿತಕ್ಕೊಳಗಾದವರು ಅದಕ್ಕೆ ದಾಖಲೆಪತ್ರಗಳನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ. ಲಾಕ್ಡೌನ್ ಅವಧಿಯಲ್ಲಿ ಟ್ಯಾಕ್ಸಿ ವಾಹನ ಇದ್ದು ಅದರಿಂದ ನಷ್ಟಕ್ಕೊಳಗಾದ ಬಗ್ಗೆ ದಾಖಲೆ ಸಹಿತ ವಿವರಣೆ ನೀಡಬೇಕಾಗುತ್ತದೆ.
ಆರು ತಿಂಗಳ ವಿನಾಯ್ತಿ ಪಡೆದವರಿಗೆ ಬ್ಯಾಂಕುಗಳು ಒಂದೇ ಬಾರಿಗೆ ಬಡ್ಡಿ ಪಾವತಿಸಲು ಸೂಚನೆ ನೀಡಿದ್ದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ಈ ವೇಳೆ, ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಪರ್ಯಾಯ ಯೋಜನೆ ಬಗ್ಗೆ ಹೇಳಿಕೆ ನೀಡಿತ್ತು. ಸಾಲದಿಂದ ಪೀಡಿತವಾದ ಕುಟುಂಬಗಳಿಗೆ ಎರಡು ವರ್ಷಗಳ ವರೆಗೆ ವಿನಾಯ್ತಿ ನೀಡುವ ಪ್ರಸ್ತಾಪ ಇಟ್ಟಿತ್ತು. ಈ ಪ್ರಸ್ತಾಪವನ್ನು ಇದೀಗ ಆರ್ ಬಿಐ ಮೂಲಕ ಯೋಜನೆ ರೂಪದಲ್ಲಿ ಜಾರಿಗೊಳಿಸಲು ಮುಂದಾಗಿದೆ.
ಯೋಜನೆಯಲ್ಲಿ ಲಾಭ ಏನಿರತ್ತೆ ?
ಈ ಯೋಜನೆ ಪ್ರಕಾರ, ಸಾಲ ಮರುಪಾವತಿ ವಿನಾಯ್ತಿಯನ್ನು ಎರಡು ವರ್ಷಗಳ ವರೆಗೆ ವಿಸ್ತರಿಸಲು ಅವಕಾಶವಿದೆ. ಸಾಲ ಮರುಪಾವತಿ ಸದ್ಯಕ್ಕೆ ಸಾಧ್ಯವಿಲ್ಲ ಎಂಬ ಸ್ಥಿತಿಯಲ್ಲಿದ್ದವರು ಎರಡು ವರ್ಷಗಳ ಬಳಿಕ ಮುಂದುವರಿಸಬಹುದು. ಅದಕ್ಕೆ ಇಂತಿಷ್ಟು ಹೆಚ್ಚುವರಿ ಮೊತ್ತವನ್ನು ಮಾತ್ರ ಬ್ಯಾಂಕ್ ಪಡೆಯಬಹುದು. ಅಥವಾ ಸಾಲದ ಕಂತಿನ ಮೊತ್ತವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬಹುದು. ಇದರಲ್ಲಿ ಸಾಲದ ಅವಧಿಯನ್ನು ಇನ್ನಷ್ಟು ದೀರ್ಘಗೊಳಿಸಿ ಕಂತಿನ ಮೊತ್ತ ಕಡಿಮೆಗೊಳಿಸಲು ಅವಕಾಶ ಇದೆ.
ಯೋಜನೆ ಲಾಭಕ್ಕೆ ಅರ್ಹತೆ ಏನು ?
ಆದರೆ, ಈ ಯೋಜನೆಯ ಲಾಭ ಪಡೆಯಲು ಸಾಲ ಪಡೆದ ವ್ಯಕ್ತಿಗಳು ಮಾರ್ಚ್ 1, 2020ರ ವರೆಗೆ ಸಾಲದ ಕಂತು ಸರಿಯಾಗಿ ಪಾವತಿಸಿರಬೇಕು. ಆತನ ಖಾತೆಯಲ್ಲಿ ಯಾವುದೇ ಡಿಫಾಲ್ಟ್ ಇರಬಾರದು ಎಂಬ ಮಾನದಂಡವನ್ನು ಆರ್ಬಿಐ ಮುಂದಿಟ್ಟಿದೆ. ಲಾಕ್ಡೌನ್ ಆಗೋದಕ್ಕೂ ಮುನ್ನ ಸರಿಯಾಗಿ ಕಂತು ಪಾವತಿಸುತ್ತಿದ್ದವರು ಈ ಯೋಜನೆಯ ಲಾಭ ಪಡೆಯಲು ಅರ್ಹತೆ ಪಡೆಯಲಿದ್ದಾರೆ. ಯೋಜನೆಯ ಲಾಭ ಪಡೆಯಲು ಸಾಲಗಾರರು ಅರ್ಜಿ ಸಲ್ಲಿಕೆಗೆ 2020ರ ಡಿಸೆಂಬರ್ 31ರ ವರೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಯಾವುದೇ ಮಾಹಿತಿ ಪಡೆಯಲು ನಿಮ್ಮ ಸಾಲದಾತ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಮಾತುಕತೆ ನಡೆಸಬಹುದು ಎಂದು ಆರ್ಬಿಐ ಹೇಳಿದೆ.
Soon after the loan moratorium period came to an end, the Centre told Supreme Court that the moratorium is extendable up to two years.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm