ಕಾಸರಗೋಡು ; ಜೂಜು ಅಡ್ಡೆಗೆ ಪೊಲೀಸರ ದಾಳಿ, ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಯುವಕ ಬಲಿ

08-05-23 12:52 pm       HK News Desk   ದೇಶ - ವಿದೇಶ

ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಾವಿಗೆ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಕಾಸರಗೋಡಿನ ಎನ್ನಪ್ಪರದಲ್ಲಿ ನಡೆದಿದೆ.

ಕಾಸರಗೋಡು, ಮೇ 8 : ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಾವಿಗೆ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಕಾಸರಗೋಡಿನ ಎನ್ನಪ್ಪರದಲ್ಲಿ ನಡೆದಿದೆ.

ಕುಜಿಕ್ಕೋಲ್ ಮೂಲದ ವಿಷ್ಣು (24) ಮೃತ ಯುವಕ.

ಎನ್ನಪ್ಪರದಲ್ಲಿ ಯುವಕರು ಜೂಜಾಟವನ್ನು ಆಡುತ್ತಿದ್ದರು. ಈ ವೇಳೆ ವಿಷ್ಣು ಅವರು ಕೂಡ ಜೊತೆಗಿದ್ದರು. ಈ ವೇಳೆ ದಿಡೀರ್ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ಏಕಾಏಕಿ ದಾಳಿಗೆ ಎಲ್ಲರೂ ಅಡ್ಡಾದಿಡ್ಡಿ ಓಡಿದ್ದಾರೆ. ಈ ವೇಳೆ ಓಡಿದ ವಿಷ್ಣು ಕತ್ತಲಿನಲ್ಲಿ ಬಾವಿಯೊಂದಕ್ಕೆ ಬಿದ್ದು ಮೃತಪಟ್ಟಿದ್ದಾರೆ.

A youth, who attempted to flee in fear of police, died after falling into a well at Ennappara in Kasaragod. The deceased has been identified as Kuzhikkol native Vishnu (24). The incident happened when police arrived at Ennappara where a few locals were gambling.