ಬ್ರೇಕಿಂಗ್ ನ್ಯೂಸ್
27-10-20 09:19 pm Headline Karnataka News Network ದೇಶ - ವಿದೇಶ
ಮನಿಲಾ (ಫಿಲಿಪೈನ್ಸ್), ಅಕ್ಟೋಬರ್ 27: ಕರಾವಳಿಯಲ್ಲಿ ಕೋಳಿ ಅಂಕ, ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ರೈಡ್ ಮಾಡೋದು ಕಾಮನ್. ಆದರೆ, ಫಿಲಿಪೈನ್ಸ್ ನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ, ಪೊಲೀಸ್ ಅಧಿಕಾರಿಯೇ ಸಾವನ್ನಪ್ಪಿದ ಪ್ರಸಂಗ ನಡೆದಿದೆ.
ಫಿಲಿಪೈನ್ಸ್ ನಲ್ಲಿ ಕೋಳಿ ಜಗಳ ಅಥವಾ ಟಪಡಾ ಪ್ರಸಿದ್ಧ ಜನಪದ ಕ್ರೀಡೆ. ಕೋಳಿಗಳ ಕಾಲುಗಳಿಗೆ ಹರಿತ ಬ್ಲೇಡ್ ಗಳನ್ನು ಕಟ್ಟಿ ಫೈಟ್ ಮಾಡಲು ಬಿಡುತ್ತಾರೆ. ಯಾವ ಕೋಳಿ ಜಯಿಸುತ್ತದೆ ಎಂದು ಜೂಜು ಕಟ್ಟುವ ದಂಧೆಯೂ ನಡೆಯುತ್ತದೆ. ಇದನ್ನು ಕಾನೂನು ವ್ಯಾಪ್ತಿಯಲ್ಲೇ ನಡೆಸಲು ಅಲ್ಲಿ ಅವಕಾಶ ನೀಡಲಾಗಿದೆ. ಆದರೆ, ಕಳೆದ ಕೊರೊನಾ ಸೋಂಕಿನ ದಾಳಿಯ ಬಳಿಕ ಈ ಕೋಳಿ ಸ್ಪರ್ಧೆಯನ್ನು ಬ್ಯಾನ್ ಮಾಡಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಜನ ಸೇರುವುದರಿಂದ ಕೋಳಿ ಅಂಕ ನಡೆಸಬಾರದೆಂದು ಸರಕಾರ ನಿಷೇಧ ಹೇರಿತ್ತು.
ಆದರೆ, ಉತ್ತರ ಫಿಲಿಪೈನ್ಸ್ ನಾರ್ಥರ್ನ್ ಸಮರ್ ಎಂಬ ನಗರದಲ್ಲಿ ಸರಕಾರದ ನೀತಿ ಉಲ್ಲಂಘಿಸಿ ಅಕ್ರಮವಾಗಿ ಕೋಳಿ ಅಂಕದ ಜೂಜಾಟ ಏರ್ಪಡಿಸಲಾಗಿತ್ತು. ಈ ವೇಳೆ, ಪೊಲೀಸರು ದಾಳಿ ನಡೆಸಿದ್ದು, ಕೋಳಿಯನ್ನು ವಶಕ್ಕೆ ಪಡೆಯುವಾಗ ಪೊಲೀಸ್ ಅಧಿಕಾರಿಯೊಬ್ಬರ ತೊಡೆಗೆ ಅದರ ಹರಿತ ಬ್ಲೇಡ್ ತಾಗಿದೆ. ಬ್ಲೇಡ್ ತೊಡೆಯ ಸಂದಿನಲ್ಲಿ ಸಿಲುಕಿಕೊಂಡಿದ್ದು, ರಕ್ತ ನಾಡಿಗಳು ತುಂಡಾಗಿ ರಕ್ತ ಸೋರಿಕೆಯಾಗಿದೆ. ತೀವ್ರ ರಕ್ತ ಸೋರಿಕೆಯಾಗಿ ಪೊಲೀಸ್ ಅಧಿಕಾರಿ ಬಳಿಕ ಆಸ್ಪತ್ರೆಯಲ್ಲಿ ಸಾವನ್ಪಪ್ಪಿದ್ದಾರೆ. ಫಿಲಿಪೈನ್ಸ್ ಇತಿಹಾಸದಲ್ಲಿ ಕೋಳಿ ಅಂಕದಲ್ಲಿ ಪೊಲೀಸ್ ಅಧಿಕಾರಿ ಸಾವು ಕಂಡಿದ್ದು ಇದೇ ಮೊದಲು ಎಂದು ನಾರ್ಥರ್ನ್ ಸಮರ್ ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಕರ್ನಲ್ ಅರ್ನೆಲ್ ಅಪುಡ್ ಹೇಳಿದ್ದಾರೆ.
A Philippine police officer was killed during a raid on an illegal cockfight after a rooster's blade sliced an artery in his leg.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm