ಬ್ರೇಕಿಂಗ್ ನ್ಯೂಸ್
27-10-20 02:09 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 27: ಲಿಕ್ಕರ್ ದೊರೆ ವಿಜಯ ಮಲ್ಯಗೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆಯಾಗಿದೆ. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಓಡಿ ಹೋಗಿರುವ ವಿಜಯ ಮಲ್ಯ ಮಾಲೀಕತ್ವದ ಯುಬಿಎಚ್ಎಲ್ ಕಂಪನಿಯನ್ನು ಬರ್ಖಾಸ್ತುಗೊಳಿಸಲು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ವಿಜಯ್ ಮಲ್ಯ ಪರ ಅರ್ಜಿಯನ್ನು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತಳ್ಳಿ ಹಾಕಿದ್ದು, 102 ವರ್ಷ ಹಳೆಯದಾದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ ಸಂಸ್ಥೆ ಬರ್ಖಾಸ್ತುಗೊಳ್ಳುವುದು ಬಹುತೇಕ ಖಚಿತವಾಗಿದೆ.
ಎಸ್ ಬಿಐ ಬ್ಯಾಂಕ್ ಸಂಸ್ಥೆಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಈವರೆಗೆ 3600 ಕೋಟಿ ರೂ. ಸಾಲವನ್ನು ವಸೂಲಿ ಮಾಡಲಾಗಿದೆ. ಆದರೆ, ಇನ್ನೂ 11 ಸಾವಿರ ಕೋಟಿ ರೂಪಾಯಿ ವಸೂಲಿಗೆ ಬಾಕಿ ಇದೆ. ಹೀಗಾಗಿ ಯುಬಿಎಚ್ ಎಲ್ ಸಂಸ್ಥೆಯನ್ನು ಬರ್ಖಾಸ್ತುಗೊಳಿಸಿ ಸಾಲದ ಹಣ ರಿಕವರಿ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಕೇಳಿಕೊಂಡರು. ಇದೇ ವೇಳೆ, ಬ್ಯಾಂಕ್ ಪರ ವಕೀಲರು ವಾದ ಮಂಡಿಸಿ, ಯುಬಿಎಚ್ಎಲ್ ಸಂಸ್ಥೆಯ ಮಾರುಕಟ್ಟೆಯ ಮೌಲ್ಯ ಸಾಲಕ್ಕಿಂತ ಹೆಚ್ಚಿದೆ. ಹೀಗಾಗಿ ಸಂಸ್ಥೆಯನ್ನು ಉಳಿಸಿಕೊಡಬೇಕೆಂದು ಮನವಿ ಮಾಡಿದರು. ಆದರೆ, ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಯುಬಿಎಚ್ ಎಲ್ ಕಂಪೆನಿಯ ವಾದವನ್ನು ಪುರಸ್ಕರಿಸದೆ ಕರ್ನಾಟಕ ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿದಿದೆ.
ವಿಜಯ ಮಲ್ಯ ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ಏಳು ಸಾವಿರ ಕೋಟಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಆದರೆ, ಯುನೈಟೆಡ್ ಬ್ರಾವರೀಸ್ ಸಂಸ್ಥೆಯಲ್ಲಿ 52.34 ಶೇಕಡಾ ಷೇರನ್ನು ಉಳಿಸಿಕೊಂಡಿದ್ದರು. ಹೀಗಾಗಿ ಯುಬಿ ಸಂಸ್ಥೆಯ ಒಡೆತನವೂ ವಿಜಯ ಮಲ್ಯ ಅವರದ್ದೇ ಆಗಿರುವುದರಿಂದ ಹೈಕೋರ್ಟ್ ಆ ಸಂಸ್ಥೆಯನ್ನು ಬರ್ಖಾಸ್ತುಗೊಳಿಸಿ ಸಾಲ ರಿಕವರಿ ಮಾಡಿಕೊಳ್ಳಲು ಬ್ಯಾಂಕುಗಳಿಗೆ ಅವಕಾಶ ನೀಡಿತ್ತು. ಕಳೆದ 2018ರ ಫೆಬ್ರವರಿಯಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ವಿಜಯ ಮಲ್ಯ ಸುಪ್ರೀಂ ಮೆಟ್ಟಿಲೇರಿದ್ದರು. ಅಲ್ಲಿಯೂ ವಿಜಯ ಮಲ್ಯಗೆ ಹಿನ್ನಡೆಯಾಗಿದ್ದು ಯುಬಿ ಸಂಸ್ಥೆ ಇತಿಸಾಹ ಸೇರುವ ದಿನ ಸನ್ನಿಹಿತವಾಗಿದೆ.
The Supreme Court on Monday dismissed a plea filed by liquor baron Vijay Mallya`s United Breweries Holdings Limited (UBHL) to challenge a Karnataka High Court order to uphold the winding up of the company for recovery of dues payable by Kingfisher Airlines Ltd.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm