ಬ್ರೇಕಿಂಗ್ ನ್ಯೂಸ್
26-10-20 11:31 am Headline Karnataka News Network ದೇಶ - ವಿದೇಶ
ಆಸ್ಟ್ರೇಲಿಯಾ, ಅಕ್ಟೋಬರ್ 26 : ಆಸ್ಟ್ರೇಲಿಯಾದ ತಾಸ್ಮೇನಿಯಾ ದ್ವೀಪ ಸಮೂಹದ ಬಳಿಯ ಕಡಲಿನಲ್ಲಿ ತಿಮಿಂಗಿಲಗಳ ಮಾರಣಹೋಮ ನಡೆದು ತಿಂಗಳು ಕಳೆಯುವ ಮೊದಲೇ ನಮೀಬಿಯಾ ಕಡಲ ತೀರದಲ್ಲಿ 7 ಸಾವಿರಕ್ಕೂ ಹೆಚ್ಚು ಸೀಲ್ ಗಳ ಶವ ಪತ್ತೆಯಾಗಿದೆ.
ಸಾಮಾನ್ಯವಾಗಿ ಈ ಪ್ರದೇಶ ಸೀಲ್ಗಳ ಸಂತಾನೋತ್ಪತ್ತಿ ತಾಣವಾಗಿದ್ದು ನವೆಂಬರ್ ಮಧ್ಯದಿಂದ ಡಿಸೆಂಬರ್ ಮಧ್ಯದವರೆಗೆ ಮರಿಗಳಿಗೆ ಜನ್ಮ ನೀಡುತ್ತವೆ. ಈ ಕಾರಣಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸೀಲ್ ಗಳು ನಮೀಬಿಯಾ ಕಡಲ ತೀರಕ್ಕೆ ಬರುತ್ತವೆ. ಆದರೆ ಮರಿಗಳಿಗೆ ಜನ್ಮ ನೀಡುವ ಮೊದಲೇ ಸಾವಿರಾರು ಸೀಲ್ಗಳ ಮಾರಣಹೋಮ ನಡೆದಿದೆ.
ಮೇಲ್ನೋಟಕ್ಕೆ ಇದು ಹವಾಮಾನ ವೈಪರೀತ್ಯ ಕಾರಣದಿಂದ ಆಗಿದೆ ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಆಹಾರ ಕೊರತೆಯೂ ಸೀಲ್ಗಳ ಸಾವಿಗೆ ಕಾರಣವಾಗಿರಬಹುದು ಎಂದು ವಾದಿಸುತ್ತಾರೆ. ಇಷ್ಟೆಲ್ಲದರ ಮಧ್ಯೆ ಸೀಲ್ಗಳಿಗೆ ಬ್ಯಾಕ್ಟೀರಿಯಾಗಳ ಸೋಂಕು ತಗುಲಿ, ಈ ರೀತಿ ಸಾಮೂಹಿಕವಾಗಿ ಸಾವನ್ನಪ್ಪಿರಬಹುದು ಎಂಬುದು ಇನ್ನೂ ಕೆಲವರ ವಾದ. ಆದರೆ ಈ ಘಟನೆಗೆ ನಿಖರವಾದ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ನಮೀಬಿಯಾ ಸರ್ಕಾರ ತನಿಖೆಗೆ ಮುಂದಾಗಿದೆ.
ಇಂತಹದ್ದೇ ಘಟನೆ 26 ವರ್ಷಗಳ ಹಿಂದೆ ನಮೀಬಿಯಾದಲ್ಲಿ ನಡೆದಿದ್ದು, ಆಗಲೂ ಸಾವಿರ ಸಾವಿರ ಸೀಲ್ಗಳು ಮೃತಪಟ್ಟಿದ್ದವು. 1994ರಲ್ಲಿ 10 ಸಾವಿರ ಸೀಲ್ಗಳು ಮೃತಪಟ್ಟು, 15 ಸಾವಿರ ಭ್ರೂಣಗಳು ಭೂಮಿಗೆ ಬರುವ ಮೊದಲೇ ಕಣ್ಣುಮುಚ್ಚಿದ್ದವು.
The number of dead seals found washed ashore on the coast of Namibia has risen to more than 7,000, non-profit group Ocean Conservation Namibia.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm