ಮಹಾರಾಷ್ಟ್ರದ ಅಕೋಲಾದಲ್ಲಿ ಭಾರೀ ಮಳೆ-ಗಾಳಿ ; ಶೆಡ್ ಮೇಲೆ ಮರ ಬಿದ್ದು ಏಳು ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ 

10-04-23 12:09 pm       HK News Desk   ದೇಶ - ವಿದೇಶ

ನಿನ್ನೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಮಹಾರಾಷ್ಟ್ರ ರಾಜ್ಯದ ಅಕೊಲಾ ಜಿಲ್ಲೆಯ ಪರಸ್ ಗ್ರಾಮದಲ್ಲಿ ಹಳೆಯ ಭಾರೀ ಗಾತ್ರದ ಮರ ಟಿನ್ ಶೆಡ್ ಮೇಲೆ ಬಿದ್ದು 7 ಮಂದಿ ಮೃತಪಟ್ಟು 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ಮಹಾರಾಷ್ಟ್ರ, ಎ.10 :  ನಿನ್ನೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಮಹಾರಾಷ್ಟ್ರ ರಾಜ್ಯದ ಅಕೊಲಾ ಜಿಲ್ಲೆಯ ಪರಸ್ ಗ್ರಾಮದಲ್ಲಿ ಹಳೆಯ ಭಾರೀ ಗಾತ್ರದ ಮರ ಟಿನ್ ಶೆಡ್ ಮೇಲೆ ಬಿದ್ದು 7 ಮಂದಿ ಮೃತಪಟ್ಟು 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ಸ್ಥಳೀಯರ ನೆರವಿನೊಂದಿಗೆ ಪೊಲೀಸರು 20ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ತಕ್ಷಣ ಬಾಲಾಪುರ್ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ಅನಿಲ್ ಜುಮ್ಲೆ ತಮ್ಮ ಸಹೋದ್ಯೋಗಿಗಳ ಜೊತೆ ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನೊಂದಿಗೆ ಮರದ ಕೆಳಗೆ ಸಿಕ್ಕಿಹಾಕಿಕೊಂಡವರನ್ನು ಹೊರತೆಗೆದರು. 

Maharashtra: 7 Killed, Several Injured After Old Tree Falls on Tin Shed at  Temple in Akola

7 Killed, 40 Injured After 100-Year-Old Tree Falls On Tin Shed In Maharashtra's  Akola | India News, Times Now

7 killed, 23 injured after tree falls on tin shed in Akola temple in  Maharashtra | India News

Maharashtra: At least 7 devotees dead after an old tree falls on tin shed  in Akola; CM Shinde to provide financial help

ಟಿನ್ ಶೆಡ್ ಮೇಲೆ ಬೃಹತ್ ಗಾತ್ರದ ಮರ ಧರೆಗುರುಳಿ 7 ಮಂದಿ ಮೃತಪಟ್ಟು 40ರಿಂದ 50 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಅಕೊಲ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಭಾರೀ ಮಳೆ ಸುರಿಯುತ್ತಿದ್ದಾಗ ಮೃತಪಟ್ಟವರು ಮತ್ತು ಗಾಯಗೊಂಡವರು ಟಿನ್ ಶೆಡ್ ಒಳಗೆ ಹೋಗಿ ಆಶ್ರಯ ಪಡೆಯುತ್ತಿದ್ದರು. ಈ ವೇಳೆ ತೀವ್ರ ಗಾಳಿ ಮಳೆಗೆ ಹಳೆಯ ದೊಡ್ಡ ಮರ ಟಿನ್ ಶೇಡ್ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆ.

At least seven people were killed and more than 40 others were injured after a huge tree fell on a tin shed following heavy rainfall in Paras village of Balapur tehsil in Maharashtra's Akola district on Sunday evening.