ಬಂಡೀಪುರ ಅಭಯಾರಣ್ಯದಲ್ಲಿ ಪ್ರಧಾನಿ ಸಫಾರಿ ; ಚುನಾವಣೆ ಹೊತ್ತಲ್ಲಿ 20 ಕಿಮೀ ಕಾಡು ಸುತ್ತಿದ ಮೋದಿ 

09-04-23 01:19 pm       HK News Desk   ದೇಶ - ವಿದೇಶ

ಚುನಾವಣೆ ಹೊತ್ತಿನಲ್ಲಿ ಶನಿವಾರ ರಾತ್ರಿ ಕರ್ನಾಟಕಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳ್ಳಂಬೆಳಗ್ಗೆ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಭಾನುವಾರ ಬೆಳ್ಳಂಬೆಳಗ್ಗೆ ಸಫಾರಿ ನಡೆಸಿದ್ದಾರೆ. 

ಮೈಸೂರು, ಎ.9: ಚುನಾವಣೆ ಹೊತ್ತಿನಲ್ಲಿ ಶನಿವಾರ ರಾತ್ರಿ ಕರ್ನಾಟಕಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳ್ಳಂಬೆಳಗ್ಗೆ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಭಾನುವಾರ ಬೆಳ್ಳಂಬೆಳಗ್ಗೆ ಸಫಾರಿ ನಡೆಸಿದ್ದಾರೆ. 

ಬಂಡೀಪುರ ಕ್ಯಾಂಪ್, ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ಸೌಂದರ್ಯವನ್ನು ಪ್ರಧಾನಿ ಮೋದಿಯವರು ಸವಿದರು. ಬಳಿಕ ಬಂಡೀಪುರ ಕ್ಯಾಂಪ್ ನಿಂದ ಬೋಳಗುಡ್ಡ ಆ್ಯಂಟಿ ಪೋಚಿಂಗ್ ಕ್ಯಾಂಪ್ ನತ್ತ ತೆರಳಿದ್ದಾರೆ. ಬೋಳಗುಡ್ಡದಲ್ಲಿ ನಿಂತು ಅರಣ್ಯ ವೀಕ್ಷಿಸಿದ್ದು ಮಧುಮಲೈ ಆನೆ ಶಿಬಿರಕ್ಕೆ ಭೇಟಿ ನೀಡಿದ್ದಾರೆ.


 

ಇದಕ್ಕೂ ಮುನ್ನ ಪ್ರಧಾನಿ ಮೋದಿ, ಬಂಡೀಪುರದಲ್ಲಿ ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ವರ್ಷಾಚರಣೆ ಅಂಗವಾಗಿ ಅಂಚೆ ಚೀಟಿ ಬಿಡುಗಡೆ ಮಾಡಿದರು. ಬಳಿಕ ಬಂಡೀಪುರ ಅಭಯಾರಣ್ಯದಲ್ಲಿ ಸುಮಾರು 2 ಗಂಟೆಗಳ ಕಾಲ ಹುಲಿ ಸಫಾರಿಯಲ್ಲಿ ಭಾಗವಹಿಸಿ 20 ಕಿಲೋ ಮೀಟರ್ ಸಾಗಿದರು. 

ಸಫಾರಿಗೆ ಬಳಕೆಯಾಗುವ ವಿಶೇಷ ಉಡುಪಿನಲ್ಲಿ ಪ್ರಧಾನಿ ಮೋದಿ ಪಯಣ ಮಾಡಿದ್ದು ಅದರ ಫೋಟೋ, ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೂ ಮಿನ್ನ ಮೇಲುಕಾಮನಹಳ್ಳಿ ಹೆಲಿಪ್ಯಾಡ್ ಗೆ ಆಗಮಿಸಿದರು. ಬಂಡೀಪುರಕ್ಕೆ ಪ್ರಧಾನಿಯೊಬ್ಬರು ಬರುತ್ತಿರುವುದು ಇದೇ ಮೊದಲಾಗಿದ್ದು ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ಸಂಭ್ರಮದಲ್ಲಿ ವಿಶೇಷವಾಗಿದೆ.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ತೆರಳುವ ವಾಹನ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಬಂಡೀಪುರ, ಮಧುಮಲೈ ಕಾಡಿಗೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿಯವರು ಮೈಸೂರಿಗೆ ತೆರಳಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Tigers and leopards proved to be elusive for Prime Minister Narendra Modi, who embarked on a safari at the Bandipur Tiger Reserve on Sunday, April 9, 2023.