ವಿಧಾನಸಭೆಯಲ್ಲಿ 'ನೀಲಿ ಚಿತ್ರ' ವೀಕ್ಷಿಸಿ ಸಿಕ್ಕಿಬಿದ್ದ ತ್ರಿಪುರಾ ಬಿಜೆಪಿ ಶಾಸಕ ;  2012 ಕರ್ನಾಟಕದಲ್ಲಿ ನಡೆದಿದ್ದ ಪ್ರಸಂಗವನ್ನು ನೆನಪಿಸಿದ ಘಟನೆ

30-03-23 05:12 pm       HK News Desk   ದೇಶ - ವಿದೇಶ

ತ್ರಿಪುರಾ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಜದಬ್ ಲಾಲ್ ದೇವನಾಥ್ ಅವರು ಅಶ್ಲೀಲ ವಿಡಿಯೋ ವೀಕ್ಷಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ. ಸದನದಲ್ಲಿ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಅಗರ್ತಲಾ, ಮಾ.30: ತ್ರಿಪುರಾ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಜದಬ್ ಲಾಲ್ ದೇವನಾಥ್ ಅವರು ಅಶ್ಲೀಲ ವಿಡಿಯೋ ವೀಕ್ಷಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ. ಸದನದಲ್ಲಿ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ತ್ರಿಪುರಾದ ಬಾಗ್ಬಸಾ ಕ್ಷೇತ್ರದ ಶಾಸಕರಾಗಿರುವ ಜದಬ್ ಲಾಲ್ ಅವರು ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗ ಮೊಬೈಲ್‌ನಲ್ಲಿ ನೀಲಿಚಿತ್ರದ ಕ್ಲಿಪ್‌ಗಳನ್ನು ವೀಕ್ಷಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಸಕರ ಹಿಂದೆ ಇದ್ದವರು ಯಾರೋ ಈ ವಿಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.

Tripura Assembly passes 10 bills in a day, Oppn MLAs walk out protesting  'no discussion time' | North East India News,The Indian Express

ಈ ವಿಡಿಯೋವನ್ನು ತ್ರಿಪುರಾ ಪ್ರದೇಶ ಯುವ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. "ಶಾಸಕ ಜದಬ್ ಲಾಲ್ ದೇವನಾಥ್ ಅವರು ವಿಧಾನಸಭೆ ಕಲಾಪದ ವೇಳೆ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದರು. ಈವರೆಗೂ ಅವರ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಅದು ಟೀಕಿಸಿದೆ. ಜದಬ್ ಲಾಲ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಅವರ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅಮಾನತು ಮಾಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ತ್ರಿಪುರಾ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಭಟ್ಟಾಚಾರ್ಯ, ಪಕ್ಷವು ಜದಬ್ ಲಾಲ್ ಅವರಿಗೆ ನೋಟಿಸ್ ನೀಡಲಿದೆ ಮತ್ತು ಅವರಿಂದ ಸ್ಪಷ್ಟೀಕರಣ ಕೇಳಲಿದೆ ಎಂದಿದ್ದಾರೆ.

2012ರಲ್ಲಿ  ಕರ್ನಾಟಕ ವಿಧಾನಸಭೆಯಲ್ಲಿ ನಡೆದಿದ್ದ ನೀಲಿ ಚಿತ್ರ ವೀಕ್ಷಣೆ ; 

2012ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ನಡೆದಿದ್ದ ನೀಲಿ ಚಿತ್ರ ವೀಕ್ಷಣೆಯ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ವಿಧಾನಸಭೆ ಅಧಿವೇಶನದ ವೇಳೆ ಬಿಜೆಪಿ ಸಚಿವರಾಗಿದ್ದ ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ಹಾಗೂ ಕೃಷ್ಣ ಪಾಲೆಮಾರ್ ಅವರು ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದರು ಎನ್ನಲಾದ ವಿಡಿಯೋಗಳು ಸೆರೆಯಾಗಿದ್ದವು.

ರಾಜ್ಯದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೂಡ ಇಂಥದ್ದೇ ಪ್ರಕರಣ ಸದ್ದು ಮಾಡಿತ್ತು. ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅವರು ನೀಲಿ ಚಿತ್ರ ವೀಕ್ಷಿಸಿದ್ದಾಗಿ ಆರೋಪಿಸಲಾಗಿತ್ತು. ಮೊಬೈಲ್‌ನಲ್ಲಿನ ಕೆಲವು ಮೆಸೇಜ್‌ಗಳನ್ನು ಡಿಲೀಟ್ ಮಾಡುತ್ತಿದ್ದೆ ಎಂದು ಅವರು ಸ್ಪಷ್ಟನೆ ನೀಡಿದ್ದರು.

ಇತ್ತೀಚೆಗೆ ಬಿಹಾರದ ಪಟ್ನಾದಲ್ಲಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ವಿಡಿಯೋ ಪ್ರಸಾರವಾಗಿತ್ತು. ಇದು ದೇಶ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸುದ್ದಿಯಾಗಿತ್ತು. ಸುಮಾರು ಮೂರು ನಿಮಿಷಗಳವರೆಗೂ ಅಶ್ಲೀಲ ವಿಡಿಯೋ ಪ್ರಸಾರವಾಗಿತ್ತು.

BJP MLA from Tripura, Jadab Lal Nath, was left red-faced after being allegedly caught watching porn during the Assembly session. In a video that has gone viral on social media, the BJP legislator from Bagbasa constituency is seen scrolling through explicit clips, pausing and intently watching them that appears to be pornographic in nature.