ಮಂಗಳೂರು ಕುಕ್ಕರ್ ಬಾಂಬ್ ; ತಮ್ಮದೇ ಕೃತ್ಯ ಎಂದ ಐಸಿಸ್,  ದಕ್ಷಿಣ ಭಾರತದಲ್ಲಿ ಮುಜಾಹಿದೀನ್ ಇದ್ದಾರೆಂದ ಉಗ್ರರ ಮುಖವಾಣಿ !   

05-03-23 03:42 pm       HK News Desk   ದೇಶ - ವಿದೇಶ

ಕೊಯಮತ್ತೂರು ಮತ್ತು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟವನ್ನು ನಾವೇ ನಡೆಸಿದ್ದಾಗಿ ಐಸಿಸ್ ಉಗ್ರರ ಮುಖವಾಣಿ ಹೇಳಿಕೊಂಡಿದೆ.

ನವದೆಹಲಿ, ಮಾ.5: ಕೊಯಮತ್ತೂರು ಮತ್ತು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟವನ್ನು ನಾವೇ ನಡೆಸಿದ್ದಾಗಿ ಐಸಿಸ್ ಉಗ್ರರ ಮುಖವಾಣಿ ಹೇಳಿಕೊಂಡಿದೆ. ಕೊಯಮತ್ತೂರು ಸ್ಫೋಟ ನಡೆದ ನಾಲ್ಕು ತಿಂಗಳು ಮತ್ತು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟವಾಗಿ ಮೂರು ತಿಂಗಳ ನಂತರ ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾವಿನ್ಸ್ ಇದರ ಮುಖವಾಣಿ ‘’ವಾಯ್ಸ್ ಆಫ್ ಖೊರಸಾನ್ ’’ ನಲ್ಲಿ ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರರು ನೆಲೆ ಕಂಡುಕೊಂಡಿದ್ದಾರೆ ಎಂದು ಹೇಳಿದೆ.

ದಕ್ಷಿಣ ಮತ್ತು ಮಧ್ಯ ಏಶ್ಯಾದಲ್ಲಿ ಐಸಿಸ್ ಚಟುವಟಿಕೆಗಳ ಬಗ್ಗೆ ಐಸಿಸ್ ಪರ ಇರುವ ಈ ಆನ್ಲೈನ್ ಮ್ಯಾಗಜಿನ್ನಲ್ಲಿ ಹೇಳಲಾಗುತ್ತದೆ. ಅಲ್ –ಅಝೈಮ್ ಮೀಡಿಯಾ ಫೌಂಡೇಶನ್ ಆನ್ಲೈನ್ ಮ್ಯಾಗಜಿನ್ ಪ್ರಕಟಿಸುತ್ತಿದ್ದು, ಇದೀಗ 68 ಪುಟಗಳ ಮ್ಯಾಗಜಿನ್ನಲ್ಲಿ ಮಂಗಳೂರಿನ ಸ್ಫೋಟ ಸೇರಿದಂತೆ ವಿವಿಧ ಅಂಶಗಳನ್ನು ಉಲ್ಲೇಖ ಮಾಡಿದೆ. ಐಸಿಸ್ ಪರ ಹೋರಾಡುವ ಮುಜಾಹಿದೀನ್ ಗಳು ದಕ್ಷಿಣ ಭಾರತದಲ್ಲಿ ಏಕ್ಟಿವ್ ಇದ್ದಾರೆ. ಆದರೆ ಯಾವ ರಾಜ್ಯ ಎನ್ನುವುದನ್ನು ಉಲ್ಲೇಖ ಮಾಡಿಲ್ಲ. ಕೇರಳದಲ್ಲಿ ಐಸಿಸ್ ಪರ ಚಟುವಟಿಕೆಗಳನ್ನು ಹೆಚ್ಚಿರುವುದರಿಂದ ತಜ್ಞರು, ಅದು ಕೇರಳವೇ ಆಗಿರುವ ಸಾಧ್ಯತೆಯಿದೆ ಎಂದಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಐಸಿಸ್ ಪರ ಚಟುವಟಿಕೆಗಳು ನಿಗೂಢ ರೀತಿಯಲ್ಲಿ ಹೆಚ್ಚುತ್ತಿವೆ.

ಕೊಯಮತ್ತೂರಿನಲ್ಲಿ ಅಕ್ಟೋಬರ್ 23ರಂದು ನಡೆದ ಕಾರು ಬಾಂಬ್ ಸ್ಫೋಟ ಮತ್ತು ನವೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಇವರೆಡನ್ನು ಐಸಿಸ್ ಉಗ್ರರೇ ನಡೆಸಿದ್ದಾಗಿ ಮುಖವಾಣಿ ಹೇಳಿಕೊಂಡಿದೆ. ಇಸ್ಲಾಮಿಕ್ ಧರ್ಮದ ಪ್ರತಿಷ್ಠೆಗಾಗಿ ನಮ್ಮ ಸೋದರರು ಪ್ರತೀಕಾರ ತೀರಿಸಿಕೊಂಡಿದ್ದಾರೆ. ಕಾಫಿರ್ (ಇಸ್ಲಾಂ ನಂಬದವರು) ಗಳನ್ನು ಭಯಪಡಿಸುವುದಕ್ಕಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಐಸಿಸ್ ಹೇಳಿದೆ.

ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ 60 ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ಐಸಿಸ್ ಪರವಾಗಿರುವ ವ್ಯಕ್ತಿಗಳ ಬಗ್ಗೆ ದಾಳಿ ನಡೆಸಿದ ಮೂರು ವಾರಗಳಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿದೆ. ಇದಲ್ಲದೆ, ಇತ್ತೀಚಿನ ಆನ್ಲೈನ್ ಪತ್ರಿಕೆಯಲ್ಲಿ ಭಾರತದಲ್ಲಿ ಹಿಂದುಗಳು, ಭಾರತೀಯ ಜನತಾ ಪಾರ್ಟಿ, ಭಾರತೀಯ ಸೇನೆ ವಿರುದ್ಧ ದಾಳಿ ನಡೆಸುವಂತೆ ಐಸಿಸ್ ಮುಜಾಹಿದೀನ್ ಗಳಿಗೆ ಕರೆ ನೀಡಿತ್ತು. ಅಲ್ಲದೆ, ಭಾರತದಲ್ಲಿ ಅಲ್ಲಾಹ್ ಮತ್ತು ಪ್ರವಾದಿಯ ವಿರೋಧಿ ಆಗಿರುವ ಹಿಂದುಗಳನ್ನು ಟಾರ್ಗೆಟ್ ಮಾಡುವಂತೆ ಹೇಳಿದೆ. ಕಾಶ್ಮೀರದಲ್ಲಿ ಮುಸ್ಲಿಮರಲ್ಲದವರನ್ನು ಕೊಲ್ಲಲು ಟಾರ್ಗೆಟ್ ಮಾಡುವಂತೆ ಹೇಳಿತ್ತು. ನಿಮ್ಮ ಇಸ್ಲಾಂ ವಿರೋಧಿ ಧೋರಣೆ ಸಹಿಸಿಕೊಳ್ಳಲಾಗದ ಸ್ಥಿತಿಗೆ ಮುಟ್ಟಿದೆ. ಇದಕ್ಕೆ ಸೂಕ್ತ ಪ್ರತೀಕಾರವನ್ನು ನಮ್ಮ ಜನರು ನೀಡಲಿದ್ದಾರೆ ಎಂದೂ ಹೇಳಿತ್ತು. 

Four months after the Coimbatore blast and approximately three months after Mangaluru blast, the Islamic State in Khorasan Province (ISKP), through its mouthpiece, "Voice of Khurasan" magazine, has admitted that its terrorists are present in South India and were involved in those two blasts that happened last year.