ಅದಾನಿ - ಹಿಂಡನ್‌ಬರ್ಗ್ ಫೈಟ್ ; ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

02-03-23 06:30 pm       HK News Desk   ದೇಶ - ವಿದೇಶ

ಹಿಂಡನ್‌ಬರ್ಗ್ ರಿಸರ್ಚ್‌ನ ಆರೋಪಗಳಿಂದ ಪ್ರಚೋದಿಸಲ್ಪಟ್ಟು ಅದಾನಿ ಸಮೂಹದ ಷೇರುಗಳು ಒಂದೇ ಸಮನೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಗುರುವಾರ ಆರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ.

ನವದೆಹಲಿ, ಮಾ.2: ಹಿಂಡನ್‌ಬರ್ಗ್ ರಿಸರ್ಚ್‌ನ ಆರೋಪಗಳಿಂದ ಪ್ರಚೋದಿಸಲ್ಪಟ್ಟು ಅದಾನಿ ಸಮೂಹದ ಷೇರುಗಳು ಒಂದೇ ಸಮನೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಗುರುವಾರ ಆರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ.

ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ನೇತೃತ್ವದ ಸಮಿತಿಯಲ್ಲಿ ಹಿರಿಯ ಬ್ಯಾಂಕರ್ ಕೆವಿ ಕಾಮತ್, ಮಾಜಿ ಸೆಬಿ ಮುಖ್ಯಸ್ಥ ಒಪಿ ಭಟ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ವಕೀಲ ಸೋಮಶೇಖರ್ ಸುಂದರೇಶನ್ ಮತ್ತು ನಿವೃತ್ತ ನ್ಯಾಯಮೂರ್ತಿ ಜೆಪಿ ದೇವಧರ್ ಇರಲಿದ್ದಾರೆ.

ಸಮಿತಿಯು ಪರಿಸ್ಥಿತಿಯ ಒಟ್ಟಾರೆ ಮೌಲ್ಯಮಾಪನ ನಡೆಸಲಿದ್ದು, ಹೂಡಿಕೆದಾರರಿಗೆ ಹೆಚ್ಚು ಅರಿವು ಮೂಡಿಸುವ ಕ್ರಮಗಳನ್ನು ಸೂಚಿಸಲಿದೆ. ಜತೆಗೆ ಷೇರು ಮಾರುಕಟ್ಟೆಗಳಿಗೆ ಅಸ್ತಿತ್ವದಲ್ಲಿರುವ ನಿಯಂತ್ರಕ ಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿಯೂ ಸಲಹೆ ನೀಡಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

Punjab Governor's refusal to summon Budget session | Supreme Court to hear  plea on February 28 - The Hindu

ಸುಪ್ರೀಂ ಕೋರ್ಟ್‌ನ ತೀರ್ಮಾನವನ್ನು ಅದಾನಿ ಸಮೂಹ ಸ್ವಾಗತಿಸಿದೆ. "ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಆದೇಶವನ್ನು ಅದಾನಿ ಗ್ರೂಪ್ ಸ್ವಾಗತಿಸುತ್ತದೆ. ಇದು ವಿವಾದಕ್ಕೆ ಕಾಲಮಿತಿಯಲ್ಲಿ ತೆರೆ ಎಳೆಯಲಿದೆ. ಸತ್ಯ ಜಯಿಸಲಿದೆ,” ಎಂದು ಗ್ರೂಪ್‌ ಮುಖ್ಯಸ್ಥ ಗೌತಮ್ ಅದಾನಿ ಟ್ವೀಟ್ ಮಾಡಿದ್ದಾರೆ.

ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾಗಿರುವ ಸೆಕ್ಯುರಿಟೀಸ್ ಆಂಡ್‌ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ವು ಚಾಲ್ತಿಯಲ್ಲಿರುವ ತನ್ನ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ವಸ್ತುಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಸಮೂಹದ ವಿರುದ್ಧ ಲೆಕ್ಕಪತ್ರ ವಂಚನೆ ಹಾಗೂ ಷೇರು ತಿರುಚುವಿಕೆಯ ಆರೋಪಗಳನ್ನು ಮಾಡಿದ ನಂತರ ಅದಾನಿ ಗ್ರೂಪ್ ಷೇರುಗಳು ಭಾರೀ ಕುಸಿತ ಕಂಡಿದ್ದವು. ಇದೀಗ ಕಳೆದ ಮೂರು ದಿನಗಳಿಂದ ಷೇರುಗಳು ಒಂದಿಷ್ಟು ಚೇತರಿಸಿಕೊಂಡಿವೆಯಾದರೂ, ಕುಸಿತಕ್ಕೆ ಹೋಲಿಸಿದರೆ ಇದರ ಪ್ರಮಾಣ ತೀರಾ ಕಡಿಮೆ ಇದೆ.

The Supreme Court Thursday asked the Securities and Exchange Board of India (Sebi) to complete the probe started by it in the wake of the Hindenburg report on Adani Group within two months.