ಸಿಸೋಡಿಯಾ ಬಿಜೆಪಿ ಸೇರಿದರೆ ನಾಳೆಯೇ ಜೈಲಿನಿಂದ ರಿಲೀಸ್ ಆಗ್ತಾರೆ  ; ಕೇಜ್ರಿವಾಲ್ ವಾಗ್ದಾಳಿ 

01-03-23 09:08 pm       HK News Desk   ದೇಶ - ವಿದೇಶ

ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸಿಸೋಡಿಯಾ ಇಂದು ಬಿಜೆಪಿಗೆ ಸೇರಿದರೆ ನಾಳೆಯೇ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಹೇಳಿದ್ದಾರೆ.

ನವದೆಹಲಿ, ಮಾ.1: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸಿಸೋಡಿಯಾ ಇಂದು ಬಿಜೆಪಿಗೆ ಸೇರಿದರೆ ನಾಳೆಯೇ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಹೇಳಿದ್ದಾರೆ.

ಮನೀಶ್ ಸಿಸೋಡಿಯಾ ಅವರನ್ನು ಬಂಧಿಸುವ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸರ್ಕಾರದ ಕೆಲಸವನ್ನು ಹಾಳು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ದೆಹಲಿ ಸಿಎಂ ಆರೋಪಿಸಿದ್ದಾರೆ. ಸಿಸೋಡಿಯಾ ಬಂಧನದ ನಂತರ ಮೊದಲ ಬಾರಿಗೆ ಮಾಧ್ಯಮಕ್ಕೆ ಮಾತನಾಡಿದ ಕೇಜ್ರಿವಾಲ್ ಅವರು, "ಅವರಿಗೆ ಭ್ರಷ್ಟಾಚಾರ ವಿಷಯವೇ ಅಲ್ಲ. ತಮ್ಮ ಸಚಿವರು ಮಾಡಿದ ಒಳ್ಳೆಯ ಕೆಲಸವನ್ನು ನಿಲ್ಲಿಸುವುದು ಅವರು ಉದ್ದೇಶವಾಗಿಗೆ" ಎಂದು ವಾಗ್ದಾಳಿ ನಡೆಸಿದರು.

Delhi Excise Policy Case Live Updates: Conspiracy based on false, baseless  charges, claims Manish Sisodia in resignation letter - The Times of India

"ಬಿಜೆಪಿಯು ಎಎಪಿಯ ಬೆಳವಣಿಗೆಯನ್ನು ತಡೆಯಲು ಬಯಸುತ್ತಿದೆ. ನಾವು ಪಂಜಾಬ್ ಗೆದ್ದಾಗಿನಿಂದ, ನಮ್ಮನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅಬಕಾರಿ ಹಗರಣದಲ್ಲಿ ಸಿಸೋಡಿಯಾ ಅವರನ್ನು ಭಾನುವಾರ ಬಂಧಿಸಲಾಗಿದೆ. ಅವರನ್ನು ಪ್ರಕರಣದಲ್ಲಿ ನಂಬರ್ ಒನ್ ಆರೋಪಿ ಎಂದು ಹೆಸರಿಸಲಾಗಿದೆ. ಅವರು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ನಿರ್ವಹಿಸುತ್ತಿದ್ದ 18 ಖಾತೆಗಳನ್ನು ಉಳಿದ ಐದು ಸಚಿವರಲ್ಲಿ ಇಬ್ಬರ ನಡುವೆ ಹಂಚಿಕೆ ಮಾಡಲಾಗಿದೆ.

Delhi chief minister Arvind Kejriwal hit out at the Bharatiya Janata Party Wednesday evening amid the row over the arrest (and resignation) of Manish Sisodia over alleged irregularities in the liquor excise policy case, asking 'if Manish Sisodia joins BJP today, won't he be released tomorrow?'