ದೆಹಲಿಯಲ್ಲಿ ಕನ್ನಡ ಡಿಂಡಿಮ ; ಕರ್ನಾಟಕವಿಲ್ಲದೆ ನಾವು ಭಾರತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದ ಪ್ರಧಾನಿ ಮೋದಿ

25-02-23 11:03 pm       HK News Desk   ದೇಶ - ವಿದೇಶ

ಭಾರತದಲ್ಲಿ ಕರ್ನಾಟಕದ ಪಾತ್ರವನ್ನು ಹನುಮಂತನು ನಿರ್ವಹಿಸಿದ್ದಾನೆ. ಹನುಮಂತನಿಲ್ಲದೆ ರಾಮನೂ ಇಲ್ಲ, ರಾಮಾಯಣವೂ ಆಗುತ್ತಿರಲಿಲ್ಲ. 

ನವದೆಹಲಿ, ಫೆ.25 : ಭಾರತದಲ್ಲಿ ಕರ್ನಾಟಕದ ಪಾತ್ರವನ್ನು ಹನುಮಂತನು ನಿರ್ವಹಿಸಿದ್ದಾನೆ. ಹನುಮಂತನಿಲ್ಲದೆ ರಾಮನೂ ಇಲ್ಲ, ರಾಮಾಯಣವೂ ಆಗುತ್ತಿರಲಿಲ್ಲ. 

ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಏಕ್ ಭಾರತ್ ಶ್ರೇಷ್ಠ ಭಾರತ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ, ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರು ಇರು, ಎಂತಾದರು ಇರು, ನೀನು ಕನ್ನಡವಾಗಿರು' ಅಮರ ವಾಣಿಯೊಂದಿಗೆ ಮಾತು ಆರಂಭಿಸಿದರು. ಇಂದು, ದೇಶವು 75 ವರ್ಷಗಳ ಸ್ವಾತಂತ್ರ್ಯದ 'ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವ ಸಮಯದಲ್ಲಿ ದೆಹಲಿ ಕರ್ನಾಟಕ ಸಂಘದ 75 ವರ್ಷಗಳ ಈ ಆಚರಣೆ ನಡೆಯುತ್ತಿದೆ. 75 ವರ್ಷಗಳ ಹಿಂದಿನ ಸಂದರ್ಭಗಳನ್ನು ನಾವು ನೋಡಿದಾಗ ಮತ್ತು ನಿರ್ಣಯಿಸಿದಾಗ, ಈ ಪ್ರಯತ್ನದಲ್ಲಿ ನಾವು ಭಾರತದ ಅಮರ ಆತ್ಮವನ್ನು ಕಾಣುತ್ತದೆ ಎಂದರು. ಇಂದು ಸ್ವಾತಂತ್ರ್ಯದ ಅಮೃತಕಾಲದ ಮೊದಲ ಹಂತದಲ್ಲಿ, ದೇಶದ ಶಕ್ತಿ ಮತ್ತು ಸಮರ್ಪಣೆಯನ್ನು ಜೀವಂತವಾಗಿ ಕಾಣುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಸಂಧರ್ಭದಲ್ಲಿ ಈ ಒಕ್ಕೂಟದ ಕನಸನ್ನು ನನಸು ಮಾಡಿದ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ನಾನು ನಮಿಸುತ್ತೇನೆ. ರಾಷ್ಟ್ರ ನಿರ್ಮಾಣದಲ್ಲಿ ಶ್ರಮಿಸುತ್ತಿರುವ ಕರ್ನಾಟಕದ ಜನತೆಗೂ ನಾನು ವಂದನೆ ಸಲ್ಲಿಸುತ್ತೇನೆ ಎಂದರು.

ಯುಗ ಬದಲಾವಣೆಯ ಯಾವುದೇ ಧ್ಯೇಯವು ಅಯೋಧ್ಯೆಯಿಂದ ಪ್ರಾರಂಭವಾಗಿ ರಾಮೇಶ್ವರವನ್ನು ತಲುಪಿದರೆ, ಅದು ಕರ್ನಾಟಕದಿಂದ ಮಾತ್ರ ಶಕ್ತಿ ಪಡೆಯುತ್ತದೆ. ಅದು ಭಾರತದ ಸಂಪ್ರದಾಯಗಳಾಗಲಿ ಅಥವಾ ಭಾರತದ ಸ್ಫೂರ್ತಿಯಾಗಲಿ, ಕರ್ನಾಟಕವಿಲ್ಲದೆ ನಾವು ಭಾರತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಪುರಾಣ ಕಾಲದಿಂದಲೂ ನೋಡಿದರೆ ಭಾರತದಲ್ಲಿ ಕರ್ನಾಟಕದ ಪಾತ್ರವನ್ನು ಹನುಮಂತನು ನಿರ್ವಹಿಸಿದ್ದಾನೆ. ಹನುಮಂತನಿಲ್ಲದೆ ರಾಮನೂ ಇಲ್ಲ, ರಾಮಾಯಣವೂ ಆಗುತ್ತಿರಲಿಲ್ಲ ಎಂದರು.

ಜಗತ್ತು ಭಾರತವನ್ನು ಸಿರಿಧಾನ್ಯದ ಕೇಂದ್ರವನ್ನಾಗಿ ನೋಡಿದರೇ, ಭಾರತದ ಸಿರಿಧಾನ್ಯಗಳ ಪ್ರಮುಖ ಉತ್ಪಾದನಾ ಕೇಂದ್ರ ಕರ್ನಾಟಕವಾಗಿದೆ. ಬಿ.ಎಸ್ ಯಡಿಯೂರಪ್ಪನವರ ಕಾಲದಿಂದಲೂ ಕರ್ನಾಟಕದಲ್ಲಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ಪ್ರಚಾರ ಮಾಡಲಾಗುತ್ತಿದ್ದು, ಕರ್ನಾಟಕದ ಶ್ರೀ ಅನ್ನ, ರಾಗಿ , ಜಗತ್ತಿಗೆ ತಲುಪುವ ಸಮಯ ಅತ್ಯಂತ ಹತ್ತಿರವಾಗಿದೆ ಎಂದರು.

ಕನ್ನಡ ಭಾಷೆ ಅತ್ಯಂತ ಸುಂದರ ಹಾಗೂ ಸುಮಧುರವಾದ ಭಾಷೆಯಾಗಿದೆ. ಕನ್ನಡದ ಮತ್ತೊಂದು ವಿಶೇಷತೆ ಏನೆಂದರೇ ಕನ್ನಡ ಭಾಷಿಕರು ಉತ್ತಮ ಓದುಗರಾಗಿದ್ದಾರೆ. ಈ ಕಾರಣಕ್ಕಾಗಿ ಕನ್ನಡದಲ್ಲಿ ಒಂದು ಒಳ್ಳೆಯ ಪುಸ್ತಕ ಪ್ರಕಟಗೊಂಡರೇ, ಕೆಲವೇ ದಿನಗಳ ಅವಧಿಯಲ್ಲಿ,  ಪ್ರಕಾಶಕರು ಆ ಪುಸ್ತಕವನ್ನು ಮರು ಮುದ್ರಿಸುವಂತಹ ಸನ್ನಿವೇಶ, ಕರ್ನಾಟಕದಲ್ಲಿ ಕಾಣಸಿಗುತ್ತದೆ.

ಭಾರತ ಪ್ರಸ್ತುತ ಜಿ-20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದೆ. ಆದರೇ ಇದಕ್ಕೆಲ್ಲಾ ಮೂಲ ಎಂಬಂತೆ ಪ್ರಜಾಪ್ರಭುತ್ವದ ಬುನಾದಿಯಾದ ಅನುಭವ ಮಂಟಪವನ್ನು ಕರ್ನಾಟಕದ ಭಕ್ತಿ ಭಂಡಾರಿ ಬಸವಣ್ಣನವರು 12ನೇ ಶತಮಾನದಲ್ಲಿಯೇ ಸ್ಥಾಪಿಸಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರ ಪುತ್ಥಳಿಯನ್ನು ಲಂಡನ್ ನಲ್ಲಿ ಅನಾವರಣಗೊಳಿಸುವ ಸೌಭಾಗ್ಯ ನನಗೆ ದೊರೆತಿದ್ದು, ನನ್ನ ಪೂರ್ವಜನ್ಮದ ಪುಣ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಡೋಲು ಬಾರಿಸುವಾಗ ಮೂಲಕ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಕರ್ನಾಟಕ ಸಂಪುಟದ ಹಲವು ಸಚಿವರು ಉಪಸ್ಥಿತರಿದ್ದರು.

Prime Minister Narendra Modi on Saturday said that India's identity, culture and aspirations are not complete without Karnataka's contributions.
Addressing the Delhi-Karnataka Sangha as part of 'Ek Bharat Shreshtha Bharat', the Prime Minister said that it is a wonderful coincidence that the 75 years of Delhi Karnataka Sangh are being celebrated at a time when the nation also is celebrating the 75 years of her independence. "The celebration of 75 years of the Delhi-Karnataka Union is being organized at a time when our country is also celebrating Amrit Mahotsav, 75 years of independence.