ಜೋಯಲುಕ್ಕಾಸ್ ಅಪರಾತಪರಾ ; ಬರೋಬ್ಬರಿ 305 ಕೋಟಿ ಮೌಲ್ಯದ ಆಸ್ತಿ ಜಪ್ತಿ, ದೇಶದ ಅತಿದೊಡ್ಡ ಜುವೆಲ್ಲರಿ ಸಮೂಹಕ್ಕೆ ಇಡಿ ಶಾಕ್, ದುಬೈಗೆ ಹವಾಲಾ ವಹಿವಾಟು ಶಂಕೆ  

25-02-23 07:19 pm       HK News Desk   ದೇಶ - ವಿದೇಶ

ಕೇರಳ ಮೂಲದ ಪ್ರಖ್ಯಾತ ಜುವೆಲ್ಲರಿ ಸಮೂಹ ಸಂಸ್ಥೆ ಜೋಯಲುಕ್ಕಾಸ್ ಕಚೇರಿ, ಮಳಿಗೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಕಳೆದೆರಡು ದಿನಗಳಲ್ಲಿ ಬರೋಬ್ಬರಿ 305 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.

ತಿರುವಂತಪುರ, ಫೆ.25: ಕೇರಳ ಮೂಲದ ಪ್ರಖ್ಯಾತ ಜುವೆಲ್ಲರಿ ಸಮೂಹ ಸಂಸ್ಥೆ ಜೋಯಲುಕ್ಕಾಸ್ ಕಚೇರಿ, ಮಳಿಗೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಕಳೆದೆರಡು ದಿನಗಳಲ್ಲಿ ಬರೋಬ್ಬರಿ 305 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.

ಜೋಯ್ ಆಲುಕ್ಕಾಸ್ ಕಂಪನಿಯ ಪ್ರಧಾನ ಕಚೇರಿ ಇರುವ ತ್ರಿಶ್ಶೂರಿನಲ್ಲಿ ಜುವೆಲ್ಲರಿ ಮತ್ತು ಕಂಪನಿ ಮಾಲೀಕ ವರ್ಗೀಸ್ ಮನೆ ಮತ್ತು ಕಚೇರಿಯಲ್ಲಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಫಾರಿನ್ ಎಕ್ಸ್ ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್ (ಫೆಮಾ) ಉಲ್ಲಂಘನೆ ಆಗಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಮೇಲ್ನೋಟಕ್ಕೆ ಆಲುಕ್ಕಾಸ್ ಜುವೆಲ್ಲರಿ ಸಮೂಹದಿಂದ ಅನಧಿಕೃತ ಹಣದ ವಹಿವಾಟು ನಡೆದಿರುವ ಶಂಕೆಯಿದೆ. ಕೇರಳ, ಕರ್ನಾಟಕ, ತಮಿಳುನಾಡು ಸೇರಿ ದೇಶದ ಹಲವೆಡೆ 100ಕ್ಕೂ ಹೆಚ್ಚು ಜುವೆಲ್ಲರಿ ಮಳಿಗೆಗಳನ್ನು ಹೊಂದಿರುವ ಜೋಯ್ ಆಲುಕ್ಸಾಸ್ ಸಮೂಹವು ದುಬೈನಲ್ಲಿಯೂ ಮಳಿಗೆಗಳನ್ನು ಸ್ಥಾಪಿಸುತ್ತಿದೆ.

ಎರಡು ದಿನಗಳಲ್ಲಿ ತ್ರಿಶ್ಶೂರ್ ನಗರದ ಶೋಭಾ ಸಿಟಿಯಲ್ಲಿರುವ ಭೂಮಿ ಮತ್ತು ರೆಸಿಡೆನ್ಸಿ ಬಿಲ್ಡಿಂಗ್ ಸೇರಿ 33 ಕಡೆಯ ಸ್ಥಿರಾಸ್ತಿಗಳನ್ನು ಇಡಿ ಜಪ್ತಿ ಮಾಡಿದೆ. 91.22 ಲಕ್ಷ ರೂಪಾಯಿ ಇದ್ದ ಮೂರು ಬ್ಯಾಂಕ್ ಖಾತೆಗಳು, 5.58 ಕೋಟಿಯಿದ್ದ ಮೂರು ಫಿಕ್ಸೆಡ್ ಡಿಪಾಸಿಟ್, ಜೋಯಲುಕ್ಕಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿರುವ 217.81 ಕೋಟಿ ಮೌಲ್ಯದ ಶೇರುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈನಲ್ಲಿ ಜುವೆಲ್ಲರಿ ಮಳಿಗೆ ಸ್ಥಾಪಿಸಲು ಜೋಯಲುಕ್ಕಾಸ್ ಗ್ರೂಪ್ ನಿಂದ ಹವಾಲಾ ಮೂಲಕ ವಿದೇಶಕ್ಕೆ ಹಣದ ರವಾನೆ ಆಗಿದೆ ಎನ್ನುವ ಮಾಹಿತಿಯಡಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಜೋಯಲುಕ್ಕಾಸ್ ಷೇರು ಮಾರುಕಟ್ಟೆಯಿಂದ ದಿಢೀರ್ ಆಗಿ 2300 ಕೋಟಿ ಮೊತ್ತವನ್ನು ಐಪಿಓ ಮೂಲಕ ಹಿಂಪಡೆದಿದ್ದು, ಅಚ್ಚರಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇಡಿಯಿಂದ ತನಿಖೆ ಶುರುವಾಗಿತ್ತು. ಭಾರತದಲ್ಲಿ 68 ನಗರಗಳಲ್ಲಿ ಜೋಯಲುಕ್ಕಾಸ್ ಚಿನ್ನಾಭರಣ ಮಳಿಗೆಯಿದ್ದು, ದೇಶದ ಅತಿ ದೊಡ್ಡ ಜುವೆಲ್ಲರಿ ಸಮೂಹ ಸಂಸ್ಥೆಗಳಲ್ಲಿ ಒಂದಾಗಿದೆ.

The Enforcement Directorate on Friday said it has attached assets worth more than ₹305 crore of Joy Alukkas Verghese, the owner of prominent Kerala-based jewellery group Joyalukkas, in a FEMA case linked to alleged transfer of "huge cash" to Dubai by the company through hawala channels.