ಛತ್ತೀಸಗಡದದಲ್ಲಿ ಕಾಂಗ್ರೆಸ್ ಪಕ್ಷದ 85ನೇ ಅಧಿವೇಶನ ಸಭೆ ; ಪ್ರಿಯಾಂಕಾ ಸ್ವಾಗತಕ್ಕೆ 2 ಕಿಮೀ ಗುಲಾಬಿ ಹೂವಿನ ಕಾರ್ಪೆಟ್ ನಿರ್ಮಾಣ

25-02-23 03:26 pm       HK News Desk   ದೇಶ - ವಿದೇಶ

ಛತ್ತೀಸಗಡ ರಾಜಧಾನಿ ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 85ನೇ ಮಹಾ ಅಧಿವೇಶನ ಸಭೆಯಲ್ಲಿ ಗಾಂಧಿ ಕುಟುಂಬ ಹಾಗೂ ಇತರೆ ಹಿರಿಯ ನಾಯಕರಿಗೆ ಅದ್ಧೂರಿಯಾದ ಗುಲಾಬಿ ಕಾರ್ಪೆಟ್ ಸ್ವಾಗತ ನೀಡಲಾಗಿದೆ.

ರಾಯಪುರ, ಫೆ.25: ಛತ್ತೀಸಗಡ ರಾಜಧಾನಿ ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 85ನೇ ಮಹಾ ಅಧಿವೇಶನ ಸಭೆಯಲ್ಲಿ ಗಾಂಧಿ ಕುಟುಂಬ ಹಾಗೂ ಇತರೆ ಹಿರಿಯ ನಾಯಕರಿಗೆ ಅದ್ಧೂರಿಯಾದ ಗುಲಾಬಿ ಕಾರ್ಪೆಟ್ ಸ್ವಾಗತ ನೀಡಲಾಗಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಛತ್ತೀಸಗಡಕ್ಕೆ ಆಗಮಿಸುವ ಮುನ್ನ ವಿಮಾನ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಕೆಂಪು ಗುಲಾಬಿ ಹೂವುಗಳ ದಪ್ಪನೆಯ ಹಾಸು ನಿರ್ಮಿಸಲಾಗಿತ್ತು. ಅದರ ಎರಡೂ ಬದಿಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಪಕ್ಷದ ಬಾವುಟಗಳೊಂದಿಗೆ ಘೋಷಣೆಗಳನ್ನು ಕೂಗುವ ವಿಡಿಯೋ ವೈರಲ್ ಆಗಿದೆ.

Video: रायपुर में प्रियंका गांधी का भव्य स्वागत, आसमान से हुई फूलों की  बारिश; सड़क पर भी बिछाए गए फूल - Congress plenary session Street paved with flower  petals to welcome Priyanka

6,000 ಕೆಜಿಗೂ ಅಧಿಕ ತೂಕದ ಗುಲಾಬಿ ಹೂವುಗಳನ್ನು ಸುಮಾರು ಎರಡು ಕಿಮೀವರೆಗೂ ರಸ್ತೆಯನ್ನು ಅಲಂಕರಿಸಲು ಬಳಸಲಾಗಿತ್ತು. ಈ ಮಾರ್ಗಗಳ ಉದ್ದಕ್ಕೂ, ವರ್ಣರಂಜಿತ ಸಾಂಪ್ರದಾಯಿಕ ದಿರಿಸುಗಳನ್ನು ತೊಟ್ಟ ಜಾನಪದ ಕಲಾವಿದರು ತಮ್ಮ ಕಲಾವಂತಿಕೆ ಪ್ರದರ್ಶಿಸುವುದು ಕಂಡುಬಂತು.

Raipur street paved with flower petals to welcome Priyanka Gandhi's arrival  for Congress plenary meet - India Today

"ರಸ್ತೆಯನ್ನು ಅಲಂಕರಿಸಲು 6 ಸಾವಿರ ಕೆಜಿಗೂ ಹೆಚ್ಚು ತೂಕದ ಹೂವುಗಳನ್ನು ಉಪಯೋಗಿಸಲಾಗಿದೆ. ನಮ್ಮ ಹಿರಿಯ ನಾಯಕರನ್ನು ಸ್ವಾಗತಿಸಲು ನಾನು ಯಾವಾಗಲೂ ಹೊಸತನ್ನು ಏನಾದರೂ ಪ್ರಯತ್ನಿಸುತ್ತಿರುತ್ತೇನೆ" ಎಂದು ಈ ಗುಲಾಬಿ ಹೂವಿನ ಕಾರ್ಪೆಟ್ ಹಿಂದಿನ ರೂವಾರಿ, ರಾಯಪುರ ಮೇಯರ್ ಐಜಾಜ್ ಧೇಬರ್ ತಿಳಿಸಿದ್ದಾರೆ.

"ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸಲು ಅಧಿವೇಶನ ನಡೆಯುವ ಸ್ಥಳದವರೆಗಿನ ಮಾರ್ಗದ ಅನೇಕ ಸ್ಥಳಗಳಲ್ಲಿ ವೇದಿಕೆಗಳನ್ನು ಸಿದ್ಧಪಡಿಸಲಾಗಿತ್ತು. ಪಕ್ಷದ ಬೆಂಬಲಿಗರು ಕೂಡ ಅವರ ಮೇಲೆ ಗುಲಾಬಿ ಹೂವಿನ ಪಕಳೆಗಳನ್ನು ಸುರಿಸಿ ಸಂಭ್ರಮದಿಂದ ಸ್ವಾಗತಿಸಿದರು" ಎಂದು ಅವರು ಹೇಳಿದ್ದಾರೆ.

Congress plenary session: Street paved with flower petals to welcome  Priyanka Gandhi in Raipur

ವಿಮಾನ ನಿಲ್ದಾಣದಿಂದ ಅಧಿವೇಶನ ನಡೆಯುವ ಸ್ಥಳದವರೆಗೂ ಹಿರಿಯ ಕಾಂಗ್ರೆಸ್ ನಾಯಕರ ವರ್ಣರಂಜಿತ ಪೋಸ್ಟರ್‌ಗಳು ಮತ್ತು ಬೃಹತ್ ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿದೆ. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಪಕ್ಷದ ನಾಯಕರು ಹೇಳಿದ ವಿವಿಧ ಸಂದೇಶಗಳನ್ನು ಹೋರ್ಡಿಂಗ್‌ಗಳಲ್ಲಿ ಬರೆಯಲಾಗಿದೆ.

ಶನಿವಾರ ಬೆಳಿಗ್ಗೆ 8.30ರ ವೇಳೆಗೆ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಛತ್ತೀಸಗಡ ಸಿಎಂ ಭೂಪೇಶ್ ಬಾಘೇಲ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಮರ್ಕಾಮ್ ಮತ್ತು ಇತರೆ ಪಕ್ಷದ ನಾಯಕರು ಸ್ವಾಗತಿಸಿದರು. ಇಂತಹ ಭವ್ಯ ಸ್ವಾಗತ ಕಂಡು ಪುಳಕಿತರಾಗಿರುವುದಾಗಿ ಪ್ರಿಯಾಂಕಾ ಗಾಂಧಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

Congress to go all out on alliance, promises to amend anti-defection law |  Latest News India - Hindustan Times

ಶುಕ್ರವಾರ ಆರಂಭವಾದ ಮೂರು ದಿನಗಳ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಶುಕ್ರವಾರವೇ ರಾಯಪುರಕ್ಕೆ ಆಗಮಿಸಿದ್ದರು.

Congress workers laid flower petals on the street to welcome party general secretary Priyanka Gandhi and other leaders in Raipur on Saturday for the 85th plenary session.Congress general secretary Priyanka Gandhi arrived in Raipur on Saturday to attend the 85th plenary session of the party. Chhattisgarh Chief Minister Bhupesh Baghel received Priyanka Gandhi at the airport.