ಭಾರತ -ಸಿಂಗಾಪುರ ಇನ್ನೂ ಹತ್ತಿರ, ಅಲ್ಲಿನ ಪ್ರಜೆಗಳಿಗೂ ಭಾರತೀಯರು ಗೂಗಲ್ ಪೇ ಮಾಡಬಹುದು ; ಹೊಸ ಯುಪಿಐ ವ್ಯವಸ್ಥೆಗೆ ಪ್ರಧಾನಿ ಚಾಲನೆ

21-02-23 10:13 pm       HK News Desk   ದೇಶ - ವಿದೇಶ

ಯುಪಿಐ ಪಾವತಿ ಮೂಲಕ ಹೆಚ್ಚಿನ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಬ್ಯಾಂಕ್ ವಹಿವಾಟು ನಡೆಸುತ್ತಾರೆ. ಗೂಗಲ್ ಪೇ, ಪೇಟಿಎಂ ಇನ್ನಿತರ ಏಪ್ಸ್ ಗಳು ನೆಚ್ಚಿನ ತಾಣಗಳಾಗಿವೆ.

ನವದೆಹಲಿ, ಫೆ.21: ಯುಪಿಐ ಪಾವತಿ ಮೂಲಕ ಹೆಚ್ಚಿನ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಬ್ಯಾಂಕ್ ವಹಿವಾಟು ನಡೆಸುತ್ತಾರೆ. ಗೂಗಲ್ ಪೇ, ಪೇಟಿಎಂ ಇನ್ನಿತರ ಏಪ್ಸ್ ಗಳು ನೆಚ್ಚಿನ ತಾಣಗಳಾಗಿವೆ. ಡಿಜಿಟಲ್ ಇಕಾನಮಿಯಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಹೋಗಿದ್ದು, ಭಾರತೀಯರು ಇನ್ನು ಸಿಂಗಾಪುರದಲ್ಲಿರುವ ಬಂಧುಗಳೊಂದಿಗೆ ಅಲ್ಲಿನದ್ದೇ ಬ್ಯಾಂಕುಗಳ ಜೊತೆಗೆ ನೇರವಾಗಿ ವ್ಯವಹರಿಸಲು ಅವಕಾಶ ನೀಡಲಾಗಿದೆ.

ಯುಪಿಐ ವ್ಯವಸ್ಥೆಯ ಹೊಸ ಅವತರಣಿಕೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸಿಂಗ್ ಹೂನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮತ್ತು ಸಿಂಗಾಪುರದ ಮಾನಿಟರಿ ಫಂಡ್ ಅಥಾರಿಟಿಯ ಆಡಳಿತ ನಿರ್ದೇಶಕ ರವಿ ಮೆನನ್ ಉಪಸ್ಥಿತರಿದ್ದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಹೊಸ ಬ್ಯಾಂಕಿಂಗ್ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.

ಈ ಮೂಲಕ ಉಭಯ ದೇಶಗಳ ಪ್ರಜೆಗಳು ಒಬ್ಬರಿಗೊಬ್ಬರು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಗೂಗಲ್ ಪೇ, ಪೇಟಿಎಂ ಇನ್ನಿತರ ಏಪ್ ಗಳಿಂದ ಸಿಂಗಾಪುರದ ಬ್ಯಾಂಕ್ ಖಾತೆಗಳಿಗೂ ಹಣ ಪಾವತಿ ಮಾಡಬಹುದು. ಸಿಂಗಾಪುರದಲ್ಲಿರುವ ಎನ್ಆರ್ ಐ ಇನ್ನಿತರ ನಿವಾಸಿಗಳು ತಮ್ಮ ಭಾರತ ಮೂಲದ ವಹಿವಾಟುಗಳಿಗೆ ಡಿಜಿಟಲ್ ಪಾವತಿ ಮಾಡಬಹುದಾಗಿದೆ. ಸಿಂಗಾಪುರದಲ್ಲಿ ಅತಿ ಹೆಚ್ಚು ಭಾರತೀಯ ಮೂಲದವರಿದ್ದಾರೆ. ಅಂದಾಜು ಆರೂವರೆ ಲಕ್ಷ ಮಂದಿ ಭಾರತದ ನಿವಾಸಿಗಳಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ಅಲ್ಲಿ ನೆಲೆಸಿದವರು ಇದ್ದಾರೆ. ಅವರಿಗೆಲ್ಲ ಯುಪಿಐ ಪಾವತಿ ವ್ಯವಸ್ಥೆಯಿಂದ ಲಾಭ ಆಗಲಿದೆ. 

Indians can now use Google Pay, PayTM and other digital payment systems to send money to their friends, colleagues and relatives in Singapore as Unified Payments Interface (UPI) gets connected to PayNow on Tuesday, February 21. Enabling faster and cost-efficient transfer of money, the linkage of two real-time payment systems will be witnessed by Prime Minister Narendra Modi and his Singapore counterpart Lee Hsien Loong via videoconferencing.