ಬ್ರೇಕಿಂಗ್ ನ್ಯೂಸ್
18-02-23 08:32 pm HK News Desk ದೇಶ - ವಿದೇಶ
ನವದೆಹಲಿ, ಫೆ.18 : ರಾಜಧಾನಿ ದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯಲ್ಲಿ ಉದ್ಯೋಗಿಯ ಸೋಗಿನಲ್ಲಿದ್ದ ಐಎಸ್‌ಐ ಏಜೆಂಟ್ ಗೆ ರಹಸ್ಯವಾಗಿ ಸೇನಾ ಮಾಹಿತಿಯನ್ನು ರವಾನಿಸುತ್ತಿದ್ದ ಭಾರತೀಯ ಯೋಧನನ್ನು ಬಂಧಿಸಲಾಗಿದೆ.
ಈ ಯೋಧ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗೆ ಉತ್ತರದ ಗಡಿಯಲ್ಲಿನ ಸೇನಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಚೀನಾ ಮತ್ತು ಭಾರತಕ್ಕೆ ಸೇರಿದ ಉತ್ತರ ಗಡಿಯಲ್ಲಿ ನಿಯೋಜಿಸಲಾಗಿದ್ದ ಯೋಧನೊಬ್ಬ(ಸಿಗ್ನಲ್ಮ್ಯಾನ್) ಅಲ್ಲಿನ ಸೇನಾ ನೆಲೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ರಾಯಭಾರಿ ಕಚೇರಿಯ ಐಎಸ್ಐ ಏಜೆಂಟ್‌ಗೆ ಕೇವಲ 15000 ರೂಪಾಯಿಗೆ ರವಾನಿಸುತ್ತಿದ್ದ. ಸೇನಾ ನಿಯಮಗಳಂತೆ ಆತನ ವಿರುದ್ಧ ವಿಚಾರಣೆ ನಡೆಯಲಿದೆ.
ದೆಹಲಿಯ ಪಾಕಿಸ್ತಾನದ ಹೈಕಮಿಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾಕಿಸ್ತಾನಿ ಪ್ರಜೆ ಅಬಿದ್ ಹುಸೇನ್ ಅಲಿಯಾಸ್ ನಾಯಕ್ ಅಬಿದ್‌ಗೆ ರಹಸ್ಯ ಮಾಹಿತಿ ನೀಡುತ್ತಿದ್ದಾಗ ಭದ್ರತಾ ಸಂಸ್ಥೆಗಳಿಗೆ ಯೋಧ ಸಿಕ್ಕಿಬಿದ್ದಿದ್ದಾನೆ. ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿ ಮಾಹಿತಿ ಹಂಚಿಕೊಳ್ಳಲು ಯೋಧನಿಗೆ 15,000 ರೂ. ನೀಡಿದ್ದನು. ಭಾರತದ ಉತ್ತರದ ಶತ್ರು ಚೀನಾ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಆಕ್ರಮಣವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಭಾರತೀಯ ಸೇನಾ ಯೋಧ ಪಾಕಿಸ್ತಾನಿ ಗೂಢಚಾರರಿಗೆ ಮಾಹಿತಿ ರವಾನಿಸುತ್ತಿದ್ದದ್ದು ತಿಳಿದುಬಂದಿದೆ.
ಶತ್ರುಗಳ ಬೇಹುಗಾರಿಕಾ ಸಂಸ್ಥೆಗೆ ಯೋಧ ನೀಡಿದ ಮಾಹಿತಿಯು ಬಹಳ ಮುಖ್ಯವಾಗಿತ್ತು. ಗೂಢಚಾರರಿಗೆ ನೀಡಲಾದ ದಾಖಲೆಗಳ ಪಟ್ಟಿ ಸೇನಾ ಚಟುವಟಿಕೆಗಳ ಜೊತೆಗೆ ಗಾರ್ಡ್ ಡ್ಯೂಟಿ ಪಟ್ಟಿಯನ್ನು ಒಳಗೊಂಡಿತ್ತು. ಚೀನಾ ಗಡಿಯಲ್ಲಿ ಉಪಗ್ರಹದ ನಿಗಾ ಇಡುವ ಸ್ಥಳವನ್ನು ತಲುಪಲು ಯೋಧ ಪ್ರಯತ್ನಿಸುತ್ತಿದ್ದ. ಆದರೆ ಅದು ಯಶಸ್ವಿಯಾಗಲಿಲ್ಲ. ಚೀನಾ ಗಡಿಯಲ್ಲಿ ಕಣ್ಗಾವಲಿರುವ ರಾಡಾರ್ ಸ್ಥಳವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದುದನ್ನು ಪತ್ತೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಯೋಧರು ಹನಿ ಟ್ರ್ಯಾಪ್ ಗೆ ಒಳಗಾಗುತ್ತಿದ್ದು ಮಾಹಿತಿ ಹಂಚಿಕೊಳ್ಳುವಂತೆ ಬ್ಲ್ಯಾಕ್ ಮೇಲ್ ಮಾಡುವುದು ಕಂಡುಬಂದಿತ್ತು. ಈ ಪ್ರಕರಣದಲ್ಲಿ ಯಾವುದೇ ಹನಿ ಟ್ರ್ಯಾಪ್ ಅಥವಾ ಮಾಹಿತಿ ಹೊರತೆಗೆಯಲು ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.
In a significant development, the Indian Army is going to start the process of court martial of a soldier who was caught passing secret information to a Pakistan embassy staffer in the national capital about military activities along the northern borders. The soldier was caught sending secret information to a Pakistani spy- Abid Husain alias Naik Abid- a Pakistani national working at the High Commission for the Islamic Republic of Pakistan in the national capital.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm