ನಷ್ಟದ ಸುಳಿಯಲ್ಲಿ ಸಿಲುಕಿದ ಝೊಮ್ಯಾಟೊ ; 346 ಕೋಟಿ ರೂಪಾಯಿ ನಷ್ಟ, ಬೇಡಿಕೆ ಇಲ್ಲದ 225 ಸಣ್ಣ ನಗರಗಳಲ್ಲಿ ಸರ್ವಿಸ್ ಬಂದ್

13-02-23 01:45 pm       HK News Desk   ದೇಶ - ವಿದೇಶ

ಆಹಾರ ವಿತರಣಾ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಝೊಮ್ಯಾಟೊ ಕಂಪನಿ ದೇಶದ 225 ಸಣ್ಣ ನಗರಗಳಲ್ಲಿ ತನ್ನ ಕಾರ್ಯಚರಣೆ ಸ್ಥಗಿತಗೊಳಿಸಿದೆ.

ಮುಂಬೈ, ಫೆ.13: ಆಹಾರ ವಿತರಣಾ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಝೊಮ್ಯಾಟೊ ಕಂಪನಿ ದೇಶದ 225 ಸಣ್ಣ ನಗರಗಳಲ್ಲಿ ತನ್ನ ಕಾರ್ಯಚರಣೆ ಸ್ಥಗಿತಗೊಳಿಸಿದೆ.

ಆಹಾರ ವಿತರಣೆ ಸೇವೆ ವಹಿವಾಟಿನಲ್ಲಿ ಮುಂದಗತಿಯಿಂದ ಡಿಸೆಂಬರ್ ಅಂತ್ಯಕ್ಕೆ 346.6 ಕೋಟಿ ರೂಪಾಯಿ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಹೆಚ್ಚು ಬೇಡಿಕೆ ಇರದ 200ಕ್ಕೂ ಹೆಚ್ಚು ಸಣ್ಣ ನಗರಗಳಲ್ಲಿ ತನ್ನ ಕಾರ್ಯಚರಣೆ ನಿಲ್ಲಿಸಿದೆ. ಇದರಿಂದ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುವಂತಾಗಿದೆ.

ಕೊರೊನಾ ಪೂರ್ವ ಹಾಗೂ  ಕೊರೊನೋತ್ತರ ದಲ್ಲಿ ಉತ್ತಮ ಬೇಡಿಕೆ ಇತ್ತಾದರೂ ಇತ್ತೀಚಿನ ತಿಂಗಳಲ್ಲಿ ಆಹಾರ ವಿತರಣೆ ಸೇವೆಯಲ್ಲಿನ ಬೇಡಿಕೆ ಕುಸಿತವು ಅನಿರೀಕ್ಷಿತವಾಗಿದೆ. ಇದು ನಮ್ಮ ಕಂಪನಿಯ ಲಾಭದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ. ಅದರ ಹೊರತಾಗಿಯೂ ನಮ್ಮ ಲಾಭದಾಯಕ ಗುರಿಯನ್ನು ಪೂರೈಸಲು ನಾವು ಉತ್ತಮ ಸ್ಥಿತಿಯಲ್ಲಿರುತ್ತೇವೆ ಎಂದು ಕಂಪನಿಯು ತನ್ನ ವರದಿಯಲ್ಲಿ ತಿಳಿಸಿದೆ.

ಝೊಮ್ಯಾಟೊ ಭಾರತದಲ್ಲಿ ಆಹಾರ ವಿತರಣೆ ಸೇವೆಗೆ ಹೆಚ್ಚು ಬಳಕೆಯಲ್ಲಿರುವ ಫುಡ್ ಡೆಲಿವರಿ ಆ್ಯಪ್ ಆಗಿದೆ. ಕಂಪನಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಇತ್ತೀಚಿಗೆ ಅದು ಗ್ರಾಹಕರಿಗೆ ಗೋಲ್ಡನ್ ಮೆಂಬರ್ಶಿಪ್ ಸ್ಕೀಮ್ ಮರು ಜಾರಿಗೊಳಿಸಿದೆ. ಇದಲ್ಲದೆ 800 ಹುದ್ದೆಗೆ ನೇಮಕ ಮಾಡಿಕೊಳ್ಳುವ ಬಗ್ಗೆ ಮುಂದಾಗಿರುವ ಸಂದರ್ಭದಲ್ಲಿಯೇ 225 ಸಣ್ಣ ನಗರಗಳಲ್ಲಿ ಜನವರಿಯಿಂದಲೇ ಹಂತ ಹಂತವಾಗಿ ಸೇವೆ ಸ್ಥಗಿತಗೊಳಿಸಿರುವ ವಿಚಾರವನ್ನು ವರದಿಯಲ್ಲಿ ಹೊರಹಾಕಿದೆ. ಈ ನಗರಗಳಿಂದ ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಒಟ್ಟು ಆರ್ಡರ್ ಮೌಲ್ಯದ ಮೇಲೆ ಕೇವಲ 0.3% ಬೇಡಿಕೆ ಬಂದಿವೆ.

Zomato, during its quarter three financial earnings report, noted that the food delivery tech company's losses have widened further. The company also announced that it has ceased operations in 225 smaller cities as the performance of these cities was 'not very encouraging'. The company reported losses of Rs 346.6 crore for the quarter that ended in December due to the reduction in food delivery business.